ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವುಗಳಿಗೆ ಬಣ್ಣ ಹಚ್ಚುವುದು, ಪ್ರಾಣಿ ಅಲಂಕಾರ ಇನ್ನು ಅಪರಾಧ

ದೇಶಾದ್ಯಂತ ಗೋ ಹತ್ಯೆ ಜಾರಿಯಾದ ಬೆನ್ನಲ್ಲೇ 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಮತ್ತಷ್ಟು ಕಾನೂನುಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ.

|
Google Oneindia Kannada News

ನವದೆಹಲಿ, ಮೇ 26: ದೇಶಾದ್ಯಂತ ಗೋ ಹತ್ಯೆ ನಿಷೇಧದ ಕಾನೂನು ಶುಕ್ರವಾರ ಜಾರಿಯಾಗಿದೆ. ಇದರ ಬೆನ್ನಲ್ಲೇ, ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯ್ದೆಯರಡಿ ಅನೇಕ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗಿದೆ.

ಹೊಸ ಕಾನೂನಿನಲ್ಲಿ ಅಳವಡಿಸಲಾಗಿರುವ ವಿಚಾರಗಳು ಹೀಗಿವೆ:
- ಹಸು, ದನ ಅಥವಾ ಕರುಗಳ ಕೊಂಬುಗಳಿಗೆ, ಕಾಲುಗಳಿಗೆ ಅಥವಾ ದೇಹದ ಯಾವುದೇ ಭಾಗಗಳಿಗೆ ಯಾವುದೇ ರೀತಿಯ ಬಣ್ಣಗಳನ್ನು ಹಚ್ಚುವಂತಿಲ್ಲ.[ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ]

Painting cow and Decorating animal is illegal in India

- ಅವುಗಳನ್ನು ಅನವಶ್ಯಕವಾಗಿ ಕೊರಳಿಗೆ ಹಗ್ಗ ಬಿಗಿದು ಕಟ್ಟುವಂತಿಲ್ಲ.

- ಅವು ವಾಸಿಸುವ ಸ್ಥಳಗಳಲ್ಲಿ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಉತ್ತಮ ಆಹಾರ, ಶುದ್ಧ ನೀರು ಕೊಡತಕ್ಕದ್ದು.

- ಪ್ರಾಣಿಗಳಿಗೆ ಯಾವುದೇ ರೀತಿಯ ಅಲಂಕಾರ ಮಾಡುವಂತಿಲ್ಲ. ಒಡವೆ, ಹಾರ ಮುಂತಾದ ಯಾವುದೇ ಅಲಂಕಾರಿಕ ವಸ್ತುಗಳನ್ನು ಹಾಕುವಂತಿಲ್ಲ.

- ಹಸುವಿನ ಹಾಲು ಕುಡಿಯದಂತೆ ಕರುಗಳ ಬಾಯನ್ನು ಯಾವುದೇ ರೀತಿಯಲ್ಲಿ ಬಂದ್ ಮಾಡುವ ಹಾಗಿಲ್ಲ.

- ಆ ನಿರ್ದಿಷ್ಟ ಪ್ರಾಣಿಯ ಉಸ್ತುವಾರಿ ಹೊತ್ತಿರುವ ಮನುಷ್ಯ, ಪ್ರಾಣಿಗೆ ಈ ಮೇಲ್ಕಂಡ ಯಾವುದೇ ತೊಂದರೆ ನೀಡಲಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿರಬೇಕು. ಉತ್ತಮ ಆಹಾರ, ನೀರು, ಬೆಳಕು ಸಿಗುತ್ತಿರುವ ಬಗ್ಗೆ ಅರಿವು ಹೊಂದಿರಬೇಕು.

- ಪ್ರಾಣಿಗಳು ಯಾವುದೇ ರೀತಿಯ ದುರವಸ್ಥೆಯಲ್ಲಿದ್ದರೆ, ಆ ಪ್ರಾಣಿಗಳ ಉಸ್ತುವಾರಿ ಹೊತ್ತಿರುವ ವ್ಯಕ್ತಿಗಳೇ ಆ ತಪ್ಪುಗಳಿಗೆ ಹೊಣೆಗಾರರಾಗುತ್ತಾರೆ.

English summary
Painting the horns of cows and bulls has been declared illegal by the Union Government. The new rules have come into force under the Prevention of Cruelty to Animals Act of 1960. Further the rules state that use of any chemical or colour on the body parts of animals is an offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X