ಬೆಳಗಾವಿಯಲ್ಲಿ ಸಹನೆ ಕಳೆದುಕೊಂಡು ರೈತರನ್ನೇ ಎಳೆದಾಡಿದ ತಹಶೀಲ್ದಾರ್
ಬೆಳಗಾವಿ, ಆಗಸ್ಟ್ 10: ಸಹನೆ ಕಳೆದುಕೊಂಡ ತಹಶೀಲ್ದಾರ್ ರೈತರೊಬ್ಬರನ್ನು ಎಳೆದಾಡಿದ ಘಟನೆ ರಾಯಭಾಗದ ಮಿನಿ ವಿಧಾನಸೌಧದ ಎದುರು ನಡೆದಿದೆ.
ವಿಧಾನಸೌಧದ ಬಳಿ ಬಂದಿದ್ದ ತಹಶೀಲ್ದಾರ್ ಇನ್ನೇನು ಕಾರಿನಲ್ಲಿ ಹೊರಡಲು ಸಿದ್ದವಾದಾಗ ಇಲ್ಲಿನ ನಾಲೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರು ಕಾರು ಅಡ್ಡಕಟ್ಟಿದರು. ನೀರಿಗಾಗಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಇಷ್ಟಕ್ಕೇ ಸಿಟ್ಟಾದ ತಹಶೀಲ್ದಾರ್ ರೈತರ ಮೇಲೆ ಏರಿ ಹೋಗಿದ್ದಾರೆ. ಅಲ್ಲದೆ ನಿಂದಿಸಿದ್ದಾರೆ.
ರೈತ ತಾನಾಜಿ ಹವಾಲ್ದಾರ್ ಎಂಬವರ ಮೇಲೆ ಸಿಟ್ಟಾದ ತಹಶೀಲ್ದಾರ್ ವಾಹನ ಹತ್ತುವಂತೆ ಕೂಗಾಡಿದ್ದಲ್ಲದೆ ಅವರನ್ನು ಹಿಡಿದು ಎಳೆದಾಡಿದ್ದಾರೆ. ತಾನಾಜಿ ವಾಹನ ಹತ್ತಲು ಒಲ್ಲದಾದಾಗ ಅವರನ್ನು ನಿಂದಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications