2023ಕ್ಕೆ ಪೂರೈಕೆಗೆ ಬೇಕಾದಷ್ಟು ಅಕ್ಕಿ, ಗೋಧಿ ದಾಸ್ತಾನು ಮಾಡಲಾಗಿದೆ: ಕೇಂದ್ರ ಸರ್ಕಾರ

ಬೆಂಗಳೂರು ಡಿಸೆಂಬರ್ 18: ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (PMGKAY)ಯಡಿ ಅಗತ್ಯವಾದ ಅಕ್ಕಿ ಹಾಗೂ ಇತರ ಕಲ್ಯಾಣ ಯೋಜನೆಗಳ ಅವಶ್ಯಕತೆಗಳಿಗೆ ಬೇಕಾದಷ್ಟು ಆಹಾರ ಧಾನ್ಯಗಳನ್ನು ಕೇಂದ್ರ ಸರ್ಕಾರ ದಾಸ್ತಾನು ಮಾಡಿಕೊಂಡಿದೆ. ಈ ಬಗ್ಗೆ ಆತಂಕ ಬೇಡ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2023 ಜನವರಿ 1ರ ವೇಳೆಗೆ ಸುಮಾರು 159 ಲಕ್ಷ ಟನ್ ಗೋಧಿ ಮತ್ತು 104 ಲಕ್ಷ ಟನ್ ಅಕ್ಕಿ ಲಭ್ಯವಿರಲಿದೆ. ಆ ವೇಳೆಗೆ ಭಾರತದಲ್ಲಿ ಸಂಗ್ರಹಣೆಗಿಂತ ಕಡಿಮೆ ಅಂದರೆ 138 ಲಕ್ಷ ಟನ್ ಗೋಧಿ ಮತ್ತು 76 ಲಕ್ಷ ಟನ್ ಅಕ್ಕಿ ಅಗತ್ಯ ಬೀಳಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಡಿಸೆಂಬರ್ 15ರವರೆಗೆ ದೇಶದಲ್ಲಿ ಸುಮಾರು 180 ಲಕ್ಷ ಟನ್ ಗೋಧಿ ಮತ್ತು 111 ಲಕ್ಷ ಟನ್ ಅಕ್ಕಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

Sufficient supply of rice and wheat has been stocked for 2023

ಭಾರತದಲ್ಲಿ ಡಿ.1ರ ವೇಳೆಗೆ 190.27 ಲಕ್ಷ ಟನ್‌ ಗೋಧಿ ಸಂಗ್ರಹ

ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಗೋಧಿ ಮತ್ತು ಅಕ್ಕಿಯ ಸಂಗ್ರಹಣೆ ಅಗತ್ಯಕ್ಕಿಂತ ಉತ್ತಮವಾಗಿದೆ. ಕಡಿಮೆ ಉತ್ಪಾದನೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ರೈತರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ ಕಳೆದ ಋತುವಿನಲ್ಲಿ ಗೋಧಿಯ ಸಂಗ್ರಹವು ಕಡಿಮೆ ಮಟ್ಟದಲ್ಲಿದ್ದತ್ತು. ಹೀಗಿದ್ದರೂ ಗೋಧಿ ಕೊಯ್ಲು ಬರುವವರೆಗೆ ಅಗತ್ಯಗಳನ್ನು ಪೂರೈಸಲು ಉತ್ತಮ ದಾಸ್ತಾನು ಮಾಡಿಕೊಳ್ಳಲಾಗಿದೆ.

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳಡಿ ಜನರಿಗೆ ಧಾನ್ಯ ಪೂರೈಕೆಗೆ ಹಂಚಿಕೆ ಎಷ್ಟೇಷ್ಟು ಇದೆ, ಎಷ್ಟು ಬೇಕಾಗಬಹುದು ಎಂದು ಈಗಾಗಲೇ ಪರಿಷ್ಕರಿಸಲಾಗಿದೆ. ಕಳೆದ ವರ್ಷ ರಾಬಿ ಮಾರುಕಟ್ಟೆ ಋತುವಿನಲ್ಲಿ 100 ಕೆಜಿಗೆ ಗೋಧಿಗೆ ರೂ 2,015 ಇತ್ತು. ಆದರೆ ಕೇಂದ್ರ ಸರ್ಕಾರ 2022-23 ಸಾಲಿನಲ್ಲಿ ಕೇಂದ್ರ ಸರ್ಕಾರ 100 ಕೆಜಿ ಗೋಧಿ ಎಂಎಸ್‌ಪಿಯನ್ನು ರೂ.2,125ಗೆ ಹೆಚ್ಚಿಸಿದೆ.

Sufficient supply of rice and wheat has been stocked for 2023

2023ರಲ್ಲಿ ಗೋಧಿ ಉತ್ಪಾದನೆ, ಸಂಗ್ರಹಣೆ ಅಧಿಕ
ಹೀಗಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಲ್ಲಿನ ಏರಿಕೆ ರೈತರಿಗೆ ಆದಾಯ ತರಲಿದೆ. ಜೊತೆಗೆ ಉತ್ತಮ ಹವಾಮಾನ ಪರಿಸ್ಥಿತಿಗಳಿಂದಾಗಿ ಮುಂದಿನ ಋತುವಿನಲ್ಲಿ ಗೋಧಿಯ ಉತ್ಪಾದನೆ ಹಾಗೂ ಸಂಗ್ರಹಣೆ ಇನ್ನೂ ಉತ್ತಮವಾಗಿರಲಿದೆ ಎಂದು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಏಪ್ರಿಲ್ 2023 ರಿಂದ ರೈತರಿಂದ ಸೂಕ್ತ ಎಂಎಸ್‌ಪಿ ನೀಡಿಗೋಧಿ ಸಂಗ್ರಹಣೆ ಪ್ರಾರಂಭವಾಗಲಿದೆ. ಆರಂಭಿಕ ಮೌಲ್ಯಮಾಪನದ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಬೆಳೆಗಳ ಬಿತ್ತನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ರಾಬಿ ಬೆಳೆಯಾದ ಗೋಧಿಯನ್ನು ಹೆಚ್ಚಾಗಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಿತ್ತಲಾಗುತ್ತದೆ. ಮಾರ್ಚ್‌ ವೇಳೆಗೆ ಕೊಯ್ಲು ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+