ಮಲ್ಲಿಗೆ ಹೂ ಕೃಷಿಯಲ್ಲಿ ಯಶಸ್ಸು ಕಂಡ ಮಾದರಿ ರೈತ
ರಾಯಚೂರು ಜನವರಿ 4: ರೈತರ ಜೀವನ ಸಂಕಷ್ಟದಲ್ಲಿದೆ. ಸಮಸ್ಯೆಗಳ ಆಗರವಾಗಿದೆ. ಕೃಷಿಯಲ್ಲಿ ಆಗುವ ಆರ್ಥಿಕ ನಷ್ಟಕ್ಕೆ ಅದೆಷ್ಟೋ ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗಿರುವಾಗ ರಾಯಚೂರಿನ ರೈತರೊಬ್ಬರು ಹೂವು ಬೆಳೆಸುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.
ಹೌದು... ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ರೈತ ತಿಪ್ಪಣ್ಣ ಹೂಗಾರ ಮಲ್ಲಿಗೆ ಹೂ ಕೃಷಿಯಲ್ಲಿ ಯಶಸ್ಸು ಕಾಣುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಮೂಲಕ ನರೇಗಾ ಯೋಜನೆಯ ನೆರವಿನಿಂದ ತಮ್ಮ ಮಳೆ ಆಶ್ರಿತ ಕಪ್ಪು ಮಣ್ಣಿನ ಒಂದು ಎಕರೆ ಜಮೀನಿನಲ್ಲಿ ಮಲ್ಲಿಗೆ ಹೂ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಅಂದಾಜು ಮೊತ್ತ ₹46,378 ವೆಚ್ಚದಲ್ಲಿ ಮಲ್ಲಿಗೆ ಹೂ ಕೃಷಿ ಆರಂಭಿಸಿದ್ದರು. ನರೇಗಾ ಯೋಜನೆಯ ಅಡಿಯಲ್ಲಿ ಸದರಿ ಕಾಮಗಾರಿಯನ್ನು ಮೂರು ಜನರ ಕೂಲಿಕಾರ್ಮಿಕರ 90 ಮಾನವ ದಿನಗಳನ್ನು ಸೃಜನೆ ಮಾಡಿ ಮೊದಲ ಹಂತದಲ್ಲಿ 300 ಸಸಿಗಳನ್ನು ನೆಟ್ಟಿದ್ದರು. ₹28,201 ಕೂಲಿ ಜೊತೆಗೆ ಸಾಮಗ್ರಿ ವೆಚ್ಚವಾಗಿ ₹18,276 ಒಟ್ಟು ₹46,377 ಪಡೆದಿದ್ದರು.
ಎರಡನೇ ಹಂತದಲ್ಲಿಯೂ ಅರ್ಧ ಎಕರೆ ಜಮೀನಿನಲ್ಲಿ 300 ಸಸಿಗಳನ್ನು ನೆಡುವ ಕಾಮಗಾರಿ ನಿರ್ವಹಣೆಗೆ ಮೂರು ಜನರ ಕೆಲಸಕ್ಕೆ 90 ಮಾನವ ದಿನಗಳನ್ನು ಸೃಜನೆ ಮಾಡಿ ₹28,201 ಕೂಲಿ ಹಣ ಜೊತೆಗೆ ಸಾಮಗ್ರಿ ವೆಚ್ಚವಾಗಿ ₹18,276 ಒಟ್ಟು ₹46,377 ಪಡೆದಿದ್ದರು. ಮಳೆ ಕೊರತೆಯಾದಾಗ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರಿನ ಸೌಲಭ್ಯ ದೊರೆತಿದೆ.

ಈ ವರ್ಷ ತೋಟದಲ್ಲಿ ಮಲ್ಲಿಗೆ ಹೂಗಳು ಅರಳಿ ಮಾರಾಟ ಆರಂಭಿಸಿದ್ದಾರೆ. ಪ್ರತಿ ದಿನ 4ರಿಂದ 5 ಕೆ.ಜಿ ಹೂವುಗಳ ಮಾರಾಟದಿಂದ ಮಾಡಿ ಒಂದು ವರ್ಷದಲ್ಲಿ ಎಲ್ಲಾ ಖರ್ಚು ವೆಚ್ಚಗಳನ್ನು ತೆಗೆದು ₹1 ಲಕ್ಷ ಆದಾಯ ಗಳಿಸಿದ್ದಾರೆ. 'ಈ ಮೊದಲ ನಮ್ಮ ಹೊಲದಲ್ಲಿ ತೊಗರಿ, ಸಜ್ಜೆ, ಹತ್ತಿ ಬಿತ್ತನೆ ಮಾಡಿದರೆ, ಒಂದು ಎಕರೆಗೆ ₹25 ಸಾವಿರ ಆದಾಯ ಬರುತ್ತಿತ್ತು. ಆದರೆ, ಮಲ್ಲಿಗೆ ಹೂವು ಬೆಳೆಯಿಂದ ₹1 ಲಕ್ಷ ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ' ಎಂದು ತಿಪ್ಪಣ್ಣ ಹೂಗಾರ ಹೇಳುತ್ತಾರೆ.
ನರೇಗಾ ಯೋಜನೆಯ ನೆರವನ್ನು ಸದ್ಬಳಕೆ ಮಾಡಿಕೊಂಡಿರುವ ರೈತ ತಿಪ್ಪಣ್ಣ ಹೂಗಾರ ಸಾಧನೆಗೆ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ಕುರ್ಡಿ ರೈತ ತಿಪ್ಪಣ್ಣ ಹೂಗಾರ, 'ನರೇಗಾ ಯೋಜನೆಯ ನೆರವಿನಿಂದ ಮಲ್ಲಿಗೆ ಹೂವು ಕೃಷಿಯಲ್ಲಿ ಯಶಸ್ಸು ಗಳಿಸಲು ಅಧಿಕಾರಿಗಳ ಪ್ರೋತ್ಸಾಹ ಕಾರಣ' ಎಂದರು.
'ರೈತರು ತೋಟಗಾರಿಕೆ ಕೈಗೊಳ್ಳಲು ನರೇಗಾ ಯೋಜನೆಯ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಮಾನ್ವಿ ತಾಲ್ಲೂಕು ಪಂಚಾಯಿತಿ ನರೇಗಾ ಐಇಸಿ ಸಂಯೋಜಕ ಈರೇಶ ಅವರು ಕಿವಿ ಮಾತು ಹೇಳಿದರು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications