ರೈತರ ಮಾರಣ ಹೋಮದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ; SKM ಆಗ್ರಹ
ಲಖಿಂಪುರ್ ಖೇರಿಯಲ್ಲಿ ರೈತರ ಶಾಂತಿಯುತ ಕಾಲ್ನಡಿಗೆ ಜಾಥಾ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಬೆಂಗಾಲು ವಾಹನ ಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವರ ಮಗ ಆಶಿಶ್ ಮಿಶ್ರಾ ಶುಕ್ರವಾರ ಖೇರಿಯ ಕ್ರೈಂ ಬ್ರಾಂಚ್ ಕಚೇರಿಗೆ ಬೆಳಿಗ್ಗೆ 10 ಗಂಟೆಗೆ ಹಾಜರಾಗಬೇಕೆಂಬ ಸಮನ್ಸ್ ಗೆ ಪ್ರತಿಕ್ರಿಯೆ ಇಲ್ಲ. ಮಾಧ್ಯಮದ ವರದಿಗಳ ಪ್ರಕಾರ ಆತ ಆಗಿಂದಾಗ್ಗೆ ಸ್ಥಳ ಬದಲಾಯಿಸುತ್ತಿದ್ದಾನೆ, ಪೊಲೀಸರ ಹಲವು ತಂಡಗಳು ಆತನ ತಲಾಷ್‌ನಲ್ಲಿವೆ.
ಲಖೀಂಪುರದ ರೈತರ ಮಾರಣ ಹೋಮದಲ್ಲಿ ಭಾಗಿಯಾದ ಆಶಿಶ್ ಮಿಶ್ರಾ, ಸುಮಿತ್ ಜೈಸ್ವಾಲ್, ಅಂಕಿತ್ ದಾಸ್ ಇನ್ನಿತರೆ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ. ಆ ಬಗ್ಗೆ ಎಸ್.ಕೆ.ಎಂ. ಆತಂಕ ವ್ಯಕ್ತಪಡಿಸಿದೆ. ಆಶಿಶ್ ಮಿಶ್ರಾ ಅವರಿಗೆ ಸಮನ್ಸ್ ಜಾರಿ ಮಾಡಿರುವುದು ಪ್ರಶ್ನೆಸಲಷ್ಟೇ ಎಂಬುದು ತಿಳಿದುಬಂದಿದೆ. ಇದನ್ನು ಗಮನಿಸಿದರೆ ಯು.ಪಿ ಸರ್ಕಾರ ಮತ್ತು ಆರೋಪಿಯ ತಂದೆ ಅಜಯ್ ಮಿಶ್ರಾ ಆಶಿಶ್‌ನಲ್ಲಿ ಆರಾಮವಾಗಿ ತಿರುಗಾಡಲು ಬಿಟ್ಟಂತಿದೆ.
ಸುಮಿತ್ ಜಸ್ವಾಲ್ 'ಥಾರ್' ವಾಹನದಲ್ಲಿದ್ದದ್ದು ಸ್ಪಷ್ಟವಾಗಿ ಕಂಡಿದೆ. ಘಟನೆ ನಂತರ ಆತ ವಾಹನದಿಂದ ತಪ್ಪಿಸಿಕೊಂಡು ಮಾಧ್ಯಮಗಳಿಗೆ ಬೈಟ್ ಕೊಟ್ಟಿರುವುದೂ ಇದೆ. ಆದರೂ ಆತನನ್ನು ಈವರೆಗೆ ಬಂಧಿಸಿಲ್ಲ. ಈ ಘಟನೆ ನಂತರ ಸಿಕ್ಕಿಬಿದ್ದ ವ್ಯಕ್ತಿಯ ಬಳಿ ಪೊಲೀಸರು ಪ್ರಶ್ನಿಸಿದಾಗ ರೈತರ ಮಾರಣಹೋಮಕ್ಕೆ ಕಾರಣವಾದ ಮತ್ತೊಂದು ಎಸ್ ಯು ವಿ ಫಾರ್ಚುನರ್‌ನಲ್ಲಿ ಆಂಕಿತ್ ದಾಸ್ ಇದ್ದುದಾಗಿ ಹೇಳಿದ್ದಾನೆ. ಇಷ್ಟಾದರೂ ಅಂಕಿತ್ ದಾಸ್‌ನನ್ನು ಕೂಡ ಈವರೆಗೆ ಬಂಧಿಸಿಲ್ಲ.

ಇವೆಲ್ಲವನ್ನೂ ಮನಗಂಡ ಎಸ್.ಕೆ.ಎಂ ರೈತರ ಮಾರಣಹೋಮಕ್ಕೆ ಕಾರಣಕರ್ತರಾದ ಆಶಿಶ್ ಮಿಶ್ರಾ, ಸುಮಿತ್ ಜಸ್ವಾಲ್, ಅಂಕಿತ್ ದಾಸ್ ಇನ್ನಿತರರನ್ನು ಕೂಡಲೇ ಬಂಧಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದೆ.












Click it and Unblock the Notifications