ಶುಂಠಿ ಬೆಳೆಗಾರರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ವಿಶೇಷ ಮನವಿ

ಶಿವಮೊಗ್ಗ, ಅಕ್ಟೋಬರ್ 13; ಬರ, ಭತ್ತ ಮತ್ತು ಇನ್ನಿತರೆ ಧಾನ್ಯಗಳ ಕ್ಷೇತ್ರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಶುಂಠಿ ಬೆಳೆಗಾರರಿಗೆ ಮನವಿಯೊಂದನ್ನು ಮಾಡಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ವಾಣಿಜ್ಯ ಬೆಳೆಯಾಗಿ ಶುಂಠಿಯನ್ನು ಬೆಳೆಯಲಾಗುತ್ತದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಜಿಲ್ಲೆಯ ಶುಂಠಿ ಬೆಳೆಗಾರರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ಶುಂಠಿ ಬೆಳೆಗೆ ಹೊದಿಕೆಗಾಗಿ ಒಣ ಹುಲ್ಲನ್ನು ಬಳಸುವುದು ಹೆಚ್ಚುತ್ತಿರುವುದರಿಂದ ಜಾನುವಾರುಗಳಿಗೆ ಒಣ ಮೇವಿನ ಕೊರತೆ ಉಂಟಾಗುವ ಸಂಭವ ಇದೆ. ಆದ್ದರಿಂದ ಒಣಹುಲ್ಲಿಗೆ ಬದಲಾಗಿ ಪರ್ಯಾಯ ವಸ್ತುಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.

Shivamogga DC Request For Ginger Growers Due To Drought

ಶಿವಮೊಗ್ಗ ಜಿಲ್ಲೆಯಾದ್ಯಂತ ತೋಟಗಾರಿಕೆ ಬೆಳೆ ಕ್ಷೇತ್ರ ಹೆಚ್ಚಾಗುತ್ತಿದೆ. ಭತ್ತ ಮತ್ತು ಇನ್ನಿತರೆ ಧಾನ್ಯಗಳ ಕ್ಷೇತ್ರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ಶಿವಮೊಗ್ಗ ಜಿಲ್ಲೆಯಾದ್ಯಂತ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲ್ಲಿ ಹೊದಿಕೆಗಾಗಿ ಒಣಹುಲ್ಲನ್ನು ಬಳಸುವುದು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ರೈತರಿಗೆ ಮೇವಿನ ಕೊರತೆ; ಇದರಿಂದ ರೈತರ ಜಾನುವಾರುಗಳಿಗೆ ಒಣಮೇವಿನ ಕೊರತೆ ಉಂಟಾಗುವ ಸಂಭವವಿರುವುದರಿಂದ ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನೋಪಾಯ ನಡೆಸುತ್ತಿರುವ ರೈತಾಪಿ ಕುಟುಂಬದ ಜಾನುವಾರುಗಳಿಗೆ ಒಣ ಮೇವಿನ ಲಭ್ಯತೆ ಕಡಿಮೆಯಾಗಿ ಒಣ ಮೇವಿನ ದರ ಹೆಚ್ಚಾಗುವುದರಿಂದ ಆರ್ಥಿಕ ಹೊರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಕಾರಣದಿಂದಾಗಿ ಜಿಲ್ಲೆಯಾದ್ಯಂತ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲ್ಲಿ ಹೊದಿಕೆಗಾಗಿ ಒಣಹುಲ್ಲನ್ನು ಬಳಸುವುದನ್ನು ನಿಯಂತ್ರಿಸಿ ಪರ್ಯಾಯವಾಗಿ ಅಡಿಕೆ ಗರಿಗಳು/ ಕಾಡಿನಲ್ಲಿ ಸಿಗುವ ದರಗಲೆ/ ಇತ್ಯಾದಿ ಜಾನುವಾರುಗಳ ಮೇವಿಗೆ ಯೋಗ್ಯವಲ್ಲದ ಪದಾರ್ಥಗಳನ್ನು ಹೊದಿಕೆಗಾಗಿ ಬಳಸಲು ಜಿಲ್ಲಾಧಿಕಾರಿಗಳು ಕರೆ ನೀಡಿದ್ದದಾರೆ.

ಜಿಲ್ಲೆಯ ಶುಂಠಿ ಬೆಳೆಗಾರ ರೈತರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡುವ ಜೊತೆಗೆ ಜಿಲ್ಲೆಯ ರೈತ ಬಾಂಧವರು ತಮ್ಮ ಜಾನುವಾರುಗಳಿಗೆ ಅಗತ್ಯವಿರುವ ಪ್ರಮಾಣದಲ್ಲಿ ಒಣ ಮೇವು ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ಶುಂಠಿಯನ್ನೆ ನೆಟ್ಟ ಬಳಿಕ ಭೂಮಿ ಮೇಲೆ ಒಣ ಹುಲ್ಲನ್ನು ಮುಚ್ಚಲಾಗುತ್ತದೆ, ಇದರಿಂದ ಮೇವಿನ ಕೊರತೆ ಉಂಟಾಗುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆ ಉಂಟಾಗಿದೆ. ಆದ್ದರಿಂದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸರಿಯಾಗಿ ಬಿತ್ತನೆಯಾಗಿಲ್ಲ. ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ. ಈ ಪೈಕಿ 161 ತಾಲೂಕು ತೀವ್ರ ಬರಪೀಡಿತ ಹಾಗೂ 34 ತಾಲ್ಲೂಕು ಸಾಧಾರಣ ಬರಪೀಡಿತ ಎಂದು ಕರ್ನಾಟಕ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಘೋಷಣೆ ಮಾಡಿದೆ.

ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಹ ಮಳೆಯ ಕೊರತೆ ಆಗಿದೆ. ಆದ್ದರಿಂದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದ್ದರಿಂದ ಭತ್ತದ ಬೆಳೆ ಕಡಿಮೆಯಾಗುವ ಸಾಧ್ಯತೆ ಇದ್ದು, ಮುಂದೆ ಭತ್ತ ಕಟಾವು ಮಾಡಿದ ಬಳಿಕ ದೊರೆಯುವ ಒಣಹುಲ್ಲಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಮತ್ತೊಂದು ಕಡೆ ಜಿಲ್ಲೆಯಾದ್ಯಂತ ತೋಟಗಾರಿಕೆ ಬೆಳೆ ಕ್ಷೇತ್ರ ಹೆಚ್ಚಾಗುತ್ತಿದೆ. ರೈತರು ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ಗದ್ದೆಗಳನ್ನು ತೋಟಗಳಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಇದು ಪಶುಸಂಗೋಪನೆ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಲವು ಮನೆಗಳಲ್ಲಿ ಹಸುಗಳನ್ನು ಸಾಕುತ್ತಿಲ್ಲ.

ಬೆಲೆ ಏರಿಕೆ, ನಷ್ಟ ಸೇರಿದಂತೆ ರೈತರು ಹೈನುಗಾರಿಕೆಯಿಂದ ದೂರವಾಗಲು ಹಲವು ಕಾರಣ ನೀಡುತ್ತಾರೆ. ಆದರೆ ಕೆಲವು ರೈತರು ಹಸುಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಸುಗಳಿಗೆ ಸದಾ ಹಸಿಹುಲ್ಲು ಒದಗಿಸುವುದು ಕಷ್ಟ. ಆದ್ದರಿಂದ ಒಣ ಭತ್ತದ ಹುಲ್ಲಿನ ಉಪಯೋಗ ಮಾಡಲೇಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+