ದೇಶಾದ್ಯಂತ 40 ಲಕ್ಷ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ: ಟಿಕಾಯತ್

ನವದೆಹಲಿ, ಫೆಬ್ರವರಿ 9: ರೈತರ ಪ್ರತಿಭಟನೆಯು ಮತ್ತಷ್ಟು ಮುಂದುವರಿಯುತ್ತಲೇ ಇರುತ್ತದೆ ಮತ್ತು ದೇಶದ ಉಳಿದ ಭಾಗಗಳಿಗೂ ಹರಡಲಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿದ್ದಾರೆ. ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿನ ಪೆಹೋವಾದಲ್ಲಿ ಆಯೋಜಿಸಲಾಗಿದ್ದ ಕಿಸಾನ್ ಮಹಾಪಂಚಾಯತ್‌ನಲ್ಲಿ ಅವರು ಮಾತನಾಡಿದರು.

'ಪ್ರತಿಭಟನೆಯನ್ನು ದೇಶದಾದ್ಯಂತ ಹರಡಿಸಲಾಗುವುದು. ಈಗ ನಾಲ್ಕು ಲಕ್ಷವಲ್ಲ, 40 ಲಕ್ಷ ಟ್ರ್ಯಾಕ್ಟರ್‌ಗಳ ಮೆರವಣಿಗೆ ನಡೆಯಲಿದೆ' ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು 'ಆಂದೋಲನಾಜೀವಿಗಳನ್ನು' ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಟಿಕಾಯತ್, 'ಅವರು (ಮೋದಿ) ತಮ್ಮ ಜೀವನದಲ್ಲಿ ಯಾವುದೇ ಪ್ರತಿಭಟನೆಯ ಭಾಗವಾಗಿರಲಿಲ್ಲ. ವಾಸ್ತವವಾಗಿ, ಅವರು ದೇಶವನ್ನು ವಿಭಜಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಆಂದೋಲನಾಜೀವಿಗಳ ಬಗ್ಗೆ ಏನು ಗೊತ್ತಿದೆ?' ಎಂದು ಟೀಕಿಸಿದ್ದಾರೆ.

Rakesh Tikait Says Farmers Protest Will Spread To All Of India

ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯು ಈ ವರ್ಷದ ಅಕ್ಟೋಬರ್ 2ರವರೆಗೂ ಮುಂದುವರಿಯಲಿದೆ. ಆದರೆ ಅದರ ಬಳಿಕವೂ ಹೋರಾಟಗಳು ನಿಲ್ಲುವುದಿಲ್ಲ. ರೈತರು ಪಾಳಿಗಳಲ್ಲಿ ಪ್ರತಿಭಟನಾ ಸ್ಥಳಗಳಿಗೆ ಮರಳಿ ಬರುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+