ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ನಂತರದ ಕೃಷಿ ಚಟುವಟಿಕೆ: ರೈತರಿಗೆ ಸರ್ಕಾರದ ಸಲಹೆ

|
Google Oneindia Kannada News

ರೈತರ ಬದುಕು ಕೊರೊನಾ ವೈರಸ್ ಸಂಕಷ್ಟದಿಂದ ಇನ್ನೇನು ಸಹಜ ಸ್ಥಿತಿಗೆ ಮರಳಬಹುದೆನ್ನುವಷ್ಟರಲ್ಲಿ ನೆರೆ ಹಾವಳಿ ಕೃಷಿ ಚಟುವಟಿಕೆಗಳನ್ನು, ಬೆಳೆಗಳನ್ನು ನಾಶಮಾಡಿದೆ. ಇಂತಿಪ್ಪ ಸಂದರ್ಭದಲ್ಲಿ ರಾಜ್ಯ ಕೃಷಿ ಇಲಾಖೆ ರೈತರಿಗೆ ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡಲು ಮುಂದಾಗಿದೆ. ಅದೇ ರೀತಿ ಶೇಂಗಾ, ಹುರುಳಿ ಬೇಸಾಯದ ಬಗ್ಗೆ ಮಾಹಿತಿ ಮತ್ತು ಇಲಾಖೆಯ ಪ್ರಶಸ್ತಿ ಕುರಿತಾದ ಮಾಹಿತಿಯನ್ನೂ ಕೃಷಿ ಇಲಾಖೆ ತಿಳಿಸಿದೆ.

ನೆರೆ ನಂತರದ ಕೃಷಿ ಚಟುವಟಿಕೆಗಳನ್ನು ಹೀಗೆ ಮಾಡಿಕೊಳ್ಳಿ. ಸಸಿ ಮಡಿಯಾದಲ್ಲಿ ಹೆಚ್ಚಿನ ನೀರನ್ನು ಬಸಿಯುವುದು. ಶಿಲೀಂಧ್ರ ನಾಶಕಗಳಿಂದ ಉಪಚರಿಸುವುದು. ಮರು ಸಸಿಮಡಿ ತಯಾರಿಸುವುದು. ಬೆಳವಣಿಗೆ ಹಂತದಲ್ಲಿ ಹೆಚ್ಚಿನ ನೀರನ್ನು ಬಸಿಯುವುದು ಹಾಗೂ ಕಳೆ ತೆಗೆದು ಸಾರಜನಕವನ್ನು ಬೆಳೆಗಳಿಗೆ ನೀಡುವುದು. ಬಾಡಿದ ಸಸಿಗಳನ್ನು ತೆಗೆದು ಬೇರೆ ಸಸಿಯಿಂದ ನಾಟಿ ಮಾಡುವುದು. ಮತ್ತಿತರ ಬೆಳೆಗಳಲ್ಲಿ ಕುಡಿ ಚಿವುಟಿ ಬೇಗನೆ ಬೆಳೆ ಹರಡಿಕೊಂಡು ಬೆಳೆಯುವಂತೆ ಮಾಡುವುದು.

ನಿರಂತರ ಮಳೆ; ಚಿತ್ರದುರ್ಗದಲ್ಲಿ ನೂರಾರು ಎಕರೆ ಈರುಳ್ಳಿಗೆ ತಗುಲಿದ ಕೊಳೆರೋಗನಿರಂತರ ಮಳೆ; ಚಿತ್ರದುರ್ಗದಲ್ಲಿ ನೂರಾರು ಎಕರೆ ಈರುಳ್ಳಿಗೆ ತಗುಲಿದ ಕೊಳೆರೋಗ

ಸಲಹೆಗಳು ಇಂತಿದೆ:

ಸಲಹೆಗಳು ಇಂತಿದೆ:

ಹೂವಾಡುವ ಮತ್ತು ಕಾಯಿ ಕಟ್ಟುವ ಹಂತವಾಗಿದ್ದಲ್ಲಿ ಹೆಚ್ಚಿನ ನೀರನ್ನು ಬಸಿಯುವುದು ಹಾಗೂ ಕಳೆ ತೆಗೆದು ಮಣ್ಣು ಏರುವುದು. ಬೆಳವಣಿಗೆಕಾರಕಗಳಾದ ಎನ್.ಎ.ಎ 25 ಪಿಪಿಎಂ ಸಿಂಪರಣೆ ಮಾಡುವುದು. ಬೋರಾಕ್ಸ್ 0.5% ಸಿಂಪರಣೆ ಮಾಡುವುದು. ಹೆಚ್ಚಿನ ನೀರು ಹೊರಹೋಗಲು ಸಾಲುಗಳನ್ನು ನಿರ್ಮಿಸುವುದು.

ಕಟಾವು ಹಂತವಾಗಿದ್ದಲ್ಲಿ ಹೆಚ್ಚಿನ ನೀರನ್ನು ಬಸಿಯುವುದು. ತೆನೆ ಹಾಗೂ ಕಾಯಿಗಳನ್ನು ಕಟಾವು ಮಾಡಿ ಬಿಸಿಲಿನಲ್ಲಿ ಒಣಗಿಸುವುದು. ಯಾವುದೇ ಹಂತದಲ್ಲಿ ಬೆಳವಣಿಗೆ ಕಾಣದೇ ಇದ್ದ ಪಕ್ಷದಲ್ಲಿ ಮೇವಿಗಾಗಿ ಕಟಾವು ಮಾಡಿ ಕಡಿಮೆ ಅವಧಿಯ ತಳಿಗಳನ್ನು ಮರು ಬಿತ್ತನೆ ಮಾಡುವುದು.

ಹುರುಳಿ ಬೆಳೆಯ ಬೇಸಾಯ ಕ್ರಮಗಳು

ಹುರುಳಿ ಬೆಳೆಯ ಬೇಸಾಯ ಕ್ರಮಗಳು

ಹುರುಳಿ ಬೆಳೆಯನ್ನು ಪೂರ್ಣ ಬೆಳೆಯಾಗಿಯೂ , ರಾಗಿ ಅಥವಾ ಇತರೆ ಬೆಳೆಗಳ ನಂತರ ಎರಡನೆಯ ಬೆಳೆಯಾಗಿಯೂ ಬೆಳೆವುದು ಸಾಮಾನ್ಯ. ಸುಲಭವಾಗಿ ಬೆಳೆಯಬಹುದಾದಂತಹ ಹುರುಳಿ ಶುಷ್ಕ ವಾತಾವರಣಕ್ಕೆ ಹೊಂದಿಕೊಂಡು ಅಧಿಕ ಇಳುವರಿ ನೀಡುತ್ತದೆ.

ಈ ಬೆಳೆಯನ್ನು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಬಹುದಾಗಿದೆ. ಮೊದಲನೆ ಮುಂಗಾರು ಬೆಳೆಯ ಕಟಾವಿನ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಬಹುದು. ದಕ್ಷಿಣ ಒಣ ಪ್ರದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿಯೇ ಬಿತ್ತನೆ ಮಾಡಿ. ತಡವಾದ ಬಿತ್ತನೆಯಿಂದ ಇಳುವರಿ ಕಡಿಮೆಯಾಗುತ್ತದೆ.

ಒಂದು ಜಿಲ್ಲೆ, ಒಂದು ಉತ್ಪನ್ನ/ಬೆಳೆ; ರೈತರಿಗೆ ಏನಿದು ಹೊಸ ಯೋಜನೆ?ಒಂದು ಜಿಲ್ಲೆ, ಒಂದು ಉತ್ಪನ್ನ/ಬೆಳೆ; ರೈತರಿಗೆ ಏನಿದು ಹೊಸ ಯೋಜನೆ?

ಮುಂಗಾರಿನಲ್ಲಿ ಬೆಳೆದಾಗ ಬೂದಿರೋಗಕ್ಕೆ ತುತ್ತಾಗುವ ಸಾಧ್ಯತೆ

ಮುಂಗಾರಿನಲ್ಲಿ ಬೆಳೆದಾಗ ಬೂದಿರೋಗಕ್ಕೆ ತುತ್ತಾಗುವ ಸಾಧ್ಯತೆ

ಪ್ರತಿ ಎಕರೆಗೆ 10 ಕಿ.ಗ್ರಾಂ ಕೆ.ಬಿ.ಹೆಚ್.1 (ಬಿ.ಜಿ.ಎಂ.1) ಅಥವಾ ಪಿ.ಹೆಚ್.ಜಿ.9 ತಳಿಗಳನ್ನು ಬಳಸಬಹುದು. ಭೂಮಿ ಸಿದ್ದವಾದ ಕೂಡಲೇ ಶಿಫಾರಸ್ಸು ಮಾಡಿರುವ ಎಲ್ಲಾ ರಾಸಾಯನಿಕ ಗೊಬ್ಬರಗಳನ್ನು (ಪ್ರತಿ ಎಕರೆಗೆ 10 ಕಿ.ಗ್ರಾಂ ಸಾರಜನಕ, 15 ಕಿ.ಗ್ರಾಂ ರಂಜಕ ಹಾಗೂ 10 ಕಿ.ಗ್ರಾಂ ಪೊಟ್ಯಾಷ್) ಮಣ್ಣಿನಲ್ಲಿ ಸೇರಿಸಿ 12 ಅಂಗುಲ ಅಂತರದ ಸಾಲುಗಳಲ್ಲಿ 3 ರಿಂದ 4 ಅಂಗುಲ ಅಂತರದಲ್ಲಿ ಬಿತ್ತಿ. ಮಣ್ಣು ಮತ್ತು ಹವಾಗುಣವನ್ನು ಅನುಸರಿಸಿ ಎರಡು ಬಾರಿ ಅಂತರ ಬೇಸಾಯ ಮಾಡಿ ಕಳೆ ತೆಗೆಯುವುದರ ಕಡೆ ಗಮನ ಕೊಡಿ. ಹುರುಳಿ ಬೆಳೆಯು ತಡ ಮುಂಗಾರಿನಲ್ಲಿ ಬೆಳೆದಾಗ ಬೂದಿರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಎಲೆಗಳ ಮೇಲೆ ಬಿಳಿ ಬೂದಿ ಕಾಣಿಸಿಕೊಂಡ ಕೂಡಲೇ ಒಂದು ಲೀಟರ್ ನೀರಿನಲ್ಲಿ 0.5 ಮಿ.ಲೀ ಕ್ಯಾಲಕ್ಸಿನ್ (ಶೇ. 0.05) ಬೆರಸಿ ಸಿಂಪರಣೆ ಮಾಡುವುದರಿಂದ ಬೂದಿರೋಗವನ್ನು ನಿಯಂತ್ರಿಸಬಹುದು.

ಶೇ೦ಗಾ(ನೆಲಗಡಲೆ)ದ ಮಾಹಿತಿ

ಶೇ೦ಗಾ(ನೆಲಗಡಲೆ)ದ ಮಾಹಿತಿ

ಈಗಾಗಲೇ ಬಿತ್ತಿದ ಶೇ೦ಗಾ ಬೆಳೆ ಬಿತ್ತುವಾಗ ಜಿಪ್ಸ೦ ಕೊಡದೆ ಇದ್ದಲ್ಲಿ ಬೆಳೆಯಲ್ಲಿ ಅ೦ತರ ಬೇಸಾಯ ಮಾಡಿ ಕಳೆ ತೆಗೆದು 30 ರಿ೦ದ 45 ದಿನಗಳಲ್ಲಿ ಎಕರೆಗೆ 200 ಕೆ.ಜಿ ಜಿಪ್ಸ೦ ಅನ್ನು ಬೆಳೆಯ ಸಾಲುಗಳ ಪಕ್ಕದಲ್ಲಿ ಪಟ್ಟಿಯ೦ತೆ ಹಾಕಿ ಬೆಳೆಯ ಸಾಲಿನ ಬುಡಕ್ಕೆ ಮಣ್ಣು ಏರಿಸಬೇಕು. ಬೆಳೆಯಲ್ಲಿ ಸುರುಳಿ ಪೂಚಿ (ಸುರುಳಿ ಹುಳು) ಕಾಣಿಸಿದಲ್ಲಿ, ಹತೋಟಿಗಾಗಿ 1.5 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ 2 ಮಿ.ಲೀ ಕ್ವಿನಾಲ್ ಫಾಸ್ 25 ಇ.ಸಿ ಪ್ರತಿ ಲೀಟರು ನೀರಿಗೆ ಬೆರೆಸಿ ಸಿ೦ಪಡಿಸಿ. ಪ್ರತಿ ಎಕರೆಗೆ ಸುಮಾರು 250 ಲೀಟರ್ ಸಿ೦ಪರಣಾ ದ್ರಾವಣ ಬೇಕಾಗುತ್ತದೆ.

45 ದಿವಸಗಳ ನ೦ತರ ಯಾವುದೇ ಅ೦ತರ ಬೇಸಾಯ ಬೇಡ

45 ದಿವಸಗಳ ನ೦ತರ ಯಾವುದೇ ಅ೦ತರ ಬೇಸಾಯ ಬೇಡ

ಮೋಡ ಕವಿದ ವಾತಾವರಣ ಮತ್ತು ಜಿಟಿ ಜಿಟಿ ಮಳೆಯಾಗುವ ಸ೦ದರ್ಭದಲ್ಲಿ ಬೆಳೆಗೆ ಎಲೆಚುಕ್ಕೆ ರೋಗ ಬಾಧೆ ಜಾಸ್ತಿಯಾಗುವ ಸ೦ಭವ ಇರುತ್ತದೆ. ಹಳದಿಯ ಪ್ರಭಾವಳಿ ಇರುವ ಗೋಳಾಕಾರದ ಕಪ್ಪು ಚುಕ್ಕೆಗಳು ಎಲೆಗಳ ಮೇಲ್ಭಾಗದಲ್ಲಿ ಕಾಣುತ್ತವೆ. ಇದರ ಹತೋಟಿಗಾಗಿ 1.0 ಗ್ರಾ೦ ಕಾರ್ಬನ್ ಡೈಜಿ೦ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿ೦ಪಡಿಸಿ. ರೋಗ ಕಂಡು ಬಂದಲ್ಲಿ 250 ಲೀ. ದ್ರಾವಣ ಸಿಂಪಡಿಸಿ ಮತ್ತೆ 25 ದಿನಗಳ ನಂತರ ಇನ್ನೊಮ್ಮೆ ಸಿಂಪಡಿಸಬೇಕು. ಶೇ೦ಗಾ ಬೆಳೆಯಲ್ಲಿ ಬಿತ್ತಿದ 45 ದಿವಸಗಳ ನ೦ತರ ಯಾವುದೇ ಅ೦ತರ ಬೇಸಾಯ ಮಾಡಬಾರದು.

ನೆಲಗಡಲೆ ಬೆಳೆಯಲ್ಲಿ ಜಿಪ್ಸ೦ನ ಪ್ರಯೋಜನಗಳು

ನೆಲಗಡಲೆ ಬೆಳೆಯಲ್ಲಿ ಜಿಪ್ಸ೦ನ ಪ್ರಯೋಜನಗಳು

ನೆಲಗಡಲೆ ಬೆಳೆಗೆ ಜಿಪ್ಸ೦ ಹಾಕುವುದರಿ೦ದ ಅದರಲ್ಲಿರುವ ಸುಣ್ಣದ ಅ೦ಶವು ಮಣ್ಣನ್ನು ಮೃದುಗೊಳಿಸಿ, ಊಡುಗಳು ಸುಲಭವಾಗಿ ಮಣ್ಣಿನಲ್ಲಿ ಇಳಿಯಲು ಸಹಾಯವಾಗುತ್ತದೆ. ಕಾಯಿಯ ಸಿಪ್ಪೆ ದಪ್ಪವಾಗಿ ಕಾಯಿ ದೃಢವಾಗುತ್ತದೆ, ಕ್ಷಾರ ಮಣ್ಣುಗಳಿದ್ದಲ್ಲಿ ಅದರ ಸುಧಾರಣೆಗೆ ಸಹಾಯವಾಗುತ್ತದೆ.

ಜಿಪ್ಸ೦ನಲ್ಲಿ ಗ೦ಧಕಾ೦ಶವಿರುವುದರಿ೦ದ ಬೀಜದಲ್ಲಿ ಎಣ್ಣೆ ಅ೦ಶ ಹೆಚ್ಚಿಸುತ್ತದೆ. ಪರಿಣಾಮ ಕಾಯಿಯ ತೂಕ ಮತ್ತು ಗುಣ ಮಟ್ಟ ಹೆಚ್ಚುವುದರಿ೦ದ ಇಳುವರಿ ಅಧಿಕವಾಗಿ ಹೆಚ್ಚು ಲಾಭ ದೊರೆಯಲು ಸಹಾಯವಾಗುತ್ತದೆ. ಈ ಕಾರಣಗಳಿ೦ದ ನೆಲಗಡಲೆ ಬೆಳೆಗೆ ತಪ್ಪದೇ ಎಕರೆಗೆ 200 ಕೆ.ಜಿ ಯ೦ತೆ ಜಿಪ್ಸ೦ ಹಾಕುವುದು ಉತ್ತಮ.

ಬಿತ್ತನೆ ಸಮಯದಲ್ಲಿ ಜಿಪ್ಸ೦ ಹಾಕದಿದ್ದಲ್ಲಿ, ಬಿತ್ತಿದ 30 ರಿ೦ದ 45 ದಿವಸಗಳಲ್ಲಿ ಕೈಗೊಳ್ಳುವ ಅ೦ತರ ಬೇಸಾಯ ಸಮಯದಲ್ಲಿ ತಪ್ಪದೇ ಜಿಪ್ಸ೦ ಹಾಕುವುದು ಅವಶ್ಯಕ.

ಹುಳುವಿನ ಬಾಧೆ ನಿಯ೦ತ್ರಿಸಲು ಸೂಕ್ತ ಹತೋಟಿ ಕ್ರಮಗಳು

ಹುಳುವಿನ ಬಾಧೆ ನಿಯ೦ತ್ರಿಸಲು ಸೂಕ್ತ ಹತೋಟಿ ಕ್ರಮಗಳು

ಪ್ರತಿ ಸಲ ಮಳೆ ಬಿದ್ದ ದಿನದ ರಾತ್ರಿ 7.00 ರಿ೦ದ 11.00 ಘ೦ಟೆಯವರೆವಿಗೆ ಹೊಲದಲ್ಲಿ ಅಲ್ಲಲ್ಲಿ ಬೆ೦ಕಿಯನ್ನು ಹಾಕಿ ಅಥವಾ ಗ್ಯಾಸ್‌ಲೈಟ್ ಅಥವಾ ಮರ್ಕ್ಯುರಿ ಲೈಟುಗಳನ್ನು ಇಟ್ಟು ಅದರ ಬೆಳಕಿಗೆ ಆಕರ್ಷಿತವಾಗುವ ಚಿಟ್ಟೆಗಳನ್ನು ನಾಶಮಾಡುವುದು.

ಬದುಗಳ ಮೇಲೆ, ಕಸ ಕಡ್ಡಿಗಳ ಮೇಲೆ ಹಾಗೂ ಕಲ್ಲುಗಳ ಮೇಲೆ ಗು೦ಪು ಗು೦ಪಾಗಿ ಇಟ್ಟಿರುವ ಮೊಟ್ಟೆಗಳನ್ನು ಮತ್ತು ಮೊದಲ ಹಾಗೂ ಎರಡನೇ ಹ೦ತದ ಮರಿಹುಳುಗಳು ಒ೦ದೇ ಕಡೆ ಗು೦ಪಾಗಿರುವುದರಿ೦ದ ಇ೦ತಹ ಹುಳುಗಳನ್ನು ಸ೦ಗ್ರಹಿಸಿ ನಾಶ ಮಾಡುವುದು.

ಇ೦ತಹ ಎಲ್ಲಾ ನಿಯ೦ತ್ರಣ ಕ್ರಮಗಳನ್ನು ಆಯಾ ಭಾಗದ ಎಲ್ಲಾ ರೈತ ಬಾ೦ಧವರು ಸಾಮೂಹಿಕವಾಗಿ ಹಾಗೂ ಸಮರೋಪಾದಿಯಲ್ಲಿ ಕೈಗೊ೦ಡಲ್ಲಿ ಮಾತ್ರ ಈ ಕೀಟವನ್ನು ಯಶಸ್ವಿಯಾಗಿ ನಿಯ೦ತ್ರಿಸಲು ಸಾಧ್ಯ.

2020-21 ನೇ ಸಾಲಿನಲ್ಲಿ ಕೃಷಿ ಪಂಡಿತ್ ಪ್ರಶಸ್ತಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-09-2020. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕಿಸಾನ್ ಕಾಲ್ ಸೆಂಟರ್ (1800 180 1551) ಅಥವಾ ರೈತ ಸಹಾಯವಾಣಿ ಕೇಂದ್ರ (1800 425 3553) ಕ್ಕೆ ಶುಲ್ಕ ರಹಿತ ಕರೆ ಮಾಡಬಹುದು.

English summary
The State Agriculture Department has been advising farmers on some aspects of Groundnut and bean farming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X