• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿಲ್ಲಿ ಗಡಿಗಳಲ್ಲಿ ಮುಂದುವರೆದ ರೈತ ಚಳವಳಿ-ಮೌನ ಮುಂದುವರಿಸಿದ ಮೋದಿ

|

ಶಹಜಹಾನ್ ಪುರ್ ಗಡಿಯಲ್ಲಿ ಎರಡು ದಿನಗಳ ಹಿಂದೆ ಚಂಡಮಾರುತಕ್ಕೆ ಸಿಲುಕಿ ರೈತರ ಟೆಂಟುಗಳು, ಸಭೆಗಳಿಗಾಗಿ ನಿರ್ಮಿಸಿದ್ದ ವೇದಿಕೆಗಳು ಇನ್ನಿತರ ಸೌಕರ್ಯಗಳು ತೀವ್ರ ಹಾನಿಗೊಳಗಾಗಿವೆ. ರೈತರು ತಂಗಲು ನಿರ್ಮಿಸಿಕೊಂಡಿದ್ದ ಟೆಂಟುಗಳು ತಲೆಕೆಳಗಾಗಿವೆ. ಚಂಡಮಾರುತದ ಹೊಡೆತದಿಂದಾಗುವ ಹಾನಿ ತಡೆಯಲು ಬರಿಗೈಲಿ ಪ್ರಯತ್ನಿಸಿದ ರೈತರನೇಕರಿಗೆ ಪೆಟ್ಟಾಗಿದೆ. ಪರಿಸ್ಥಿತಿ ಹೀಗಿರುವಾಗ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಸಮಾಜ ಕಲ್ಯಾಣ ಸಂಸ್ಥೆಗಳು, ನಾಗರೀಕರು ಶಹಜಹಾನ್ ಪುರ್ ಗಡಿಯಲ್ಲಿ ಚಳವಳಿ ನಿರತ ರೈತರಿಗೆ ಎಲ್ಲಾ ರೀತಿಯ ಸಹಾಯ ಮಾಡಬೇಕಾಗಿ ಕೋರಿದೆ.

ಮನ್ ಕಿ ಬಾತ್
ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರೈತರು ಮತ್ತು ಕೃಷಿ ಕ್ಷೇತ್ರದ ಬಗ್ಗೆ ಒಂದೆರಡು ಮಾತುಗಳನ್ನಾಡಿದ್ದಾರೆ. ಆದರೆ ರೈತರ ಬೇಡಿಕೆಯಾದ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವುದು ಮತ್ತು ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡುವ ವಿಷಯದ ಪ್ರಸ್ತಾಪವೇ ಇಲ್ಲ. ಸರ್ಕಾರವನ್ನು ಪ್ರತಿನಿಧಿಸುವ ಅಧಿಕಾರಿಗಳು, ಮಂತ್ರಿಮಹೋದಯರು ಒಂದೆರಡು ಬೆಳೆಗಳ ಬಗ್ಗೆ ಸಾಂಕೇತಿಕವಾಗಿ ಮಾತನಾಡುತ್ತಾ ಮಾಧ್ಯಮಗಳ ಹೆಡ್ ಲೈನ್ ಗಳಿಗೆ ಆಹಾರ ಒದಗಿಸುತ್ತಿದ್ದಾರೆ. ವಾಸ್ತವದಲ್ಲಿ ಅವರ್ಯಾರೂ ಎಲ್ಲಾ ಬೆಳೆಗಳು ಮತ್ತು ಎಲ್ಲಾ ರೈತರ ಬಗ್ಗೆ ಮಾತನಾಡುತ್ತಿಲ್ಲ.

 ಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳು ಕರಾಳ ದಿನ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 6 ತಿಂಗಳು

ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ಮಾಡಿರುವ ಅಧ್ಯಯನದಂತೆ ಮೂರೂ ಕೃಷಿ ಕಾಯಿದೆಗಳು ದೇಶದ ರೈತರು ಮತ್ತು ಶ್ರೀಸಾಮಾನ್ಯರ ವಿರುದ್ಧವೇ ಇದೆ. ನಮ್ಮ ಪ್ರಧಾನ ಮಂತ್ರಿಗಳು ಮಾತ್ರ ಯಾರ ಮಾತೂ ಕೇಳದೆ ತಮ್ಮದೇ ಮನ್ ಕಿ ಬಾತ್ ಆಡುತ್ತಿದ್ದಾರೆ. ಕಿಸಾನ್ ಮೋರ್ಚಾ ವೇದಿಕೆಯಿಂದ ನಾವು ಈ ದೇಶದ ರೈತರ ಮತ್ತು ಶ್ರೀಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ ಈ ಕಾಯಿದೆಗಳನ್ನು ಹಿಂಪಡೆದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ.

ರೈತ ಚಳವಳಿಗೆ ಸಾತ್ ನೀಡಿದ ಕುಸ್ತಿಪಟು
ಭಾರತದ ಬಾಕ್ಸರ್ (ಕುಸ್ತಿ ಪಟು) ಸವೀತಿ ಬೂರಾ ಇತ್ತೀಚೆಗೆ ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಮೆಡಲ್ ಗೆದ್ದಿದ್ದಾರೆ. ಅವರು ಆ ಮೆಡಲನ್ನು ರೈತರಿಗೆ ಸಮರ್ಪಿಸಿರುವುದಲ್ಲದೆ ಚಳವಳಿನಿರತ ಹುತಾತ್ಮ ರೈತರಿಗೆ ಗೌರವಸೂಚಕವಾಗಿ ಅರ್ಪಿಸಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿಗಳು ರೈತರೊಂದಿಗೆ ಸಮಾಲೋಚನೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

ಧೃತಿಗೆಡದ ರೈತ ಹೋರಾಟ-ದಿಲ್ಲಿ ಗಡಿಗಳಲ್ಲಿ ಜಮಾಯಿಸುತ್ತಿರುವ ರೈತರು
ರೈತರು ಯುದ್ಧೋಪಾದಿಯಲ್ಲಿ ದಿಲ್ಲಿಯ ಗಡಿಗಳಿಗೆ ಬಂದು ಸೇರಿತ್ತಿದ್ದಾರೆ. ನಿನ್ನೆ ಆಲ್ ಇಂಡಿಯಾ ಕಿಸಾನ್ ಸಭಾ ನೇತೃತ್ವದಲ್ಲಿ ರೋಟಕ್ ನಿಂದ ಟಿಕ್ರಿ ಗಡಿಗೆ ಅತಿ ದೊಡ್ಡ ಸಂಖ್ಯೆಯಲ್ಲಿ ರೈತರು ಬಂದು ಸೇರಿದ್ದಾರೆ. ಅದೇ ರೀತಿ ನೂರಾರು ರೈತ ಹೋರಾಟಗಾರರು ನಿನ್ನೆ ಸಿಂಘು ಗಡಿಗೂ ಬಂದು ಸೇರಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಬಲ್ ಬೀರ್ ಸಿಂಗ್ ರಾಜೇವಾಲ್, ಡಾ ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Prime minister Narendra modi continues his silence towards farmers protest in delhi. Protest against farm laws steps to sixth month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X