ಗದಗದಲ್ಲಿ ಅತ್ಯಾಧುನಿಕ ನಾಸಿಕ್ ಮಾದರಿ ಈರುಳ್ಳಿ ಗೋದಾಮು ನಿರ್ಮಾಣ
ಗದಗ, ಸೆಪ್ಟೆಂಬರ್ 11: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ರಾಜ್ಯದ ಮೊದಲ ಅತ್ಯಾಧುನಿಕ ಈರುಳ್ಳಿ ಗೋದಾಮು ತಲೆ ಎತ್ತಲಿದೆ.
ಅಂದುಕೊಂಡಂತೆ ನಡೆದರೆ 2018ಕ್ಕೆ ಗದಗದಲ್ಲಿ ನಾಸಿಕ್ ಮಾದರಿಯ ಈರುಳ್ಳಿ ಗೋದಾಮು ಗದಗದಲ್ಲಿ ತಲೆ ಎತ್ತಲಿದೆ.

2016-17ನೇ ಸಾಲಿನ ಬಜೆಟ್ನಲ್ಲಿ ಈರುಳ್ಳಿ ಗೋದಾಮು ನಿರ್ಮಾಣಕ್ಕೆ 5 ಕೋಟಿ ರೂ. ಎತ್ತಿಡಲಾಗಿತ್ತು. ಈ ಹಣದಲ್ಲಿ 11 ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್ ಗೋದಾಮು ನಿರ್ಮಾಣವಾಗಲಿದೆ. ಈ ಗೋದಾಮಿನಲ್ಲಿ ಒಂದೂವರೆ ಸಾವಿರ ಟನ್ ಈರುಳ್ಳಿ ಸಂಗ್ರಹಿಸಬಹುದಾಗಿದೆ. ಈ ಅತ್ಯಾಧುನಿಕ ಗೋದಾಮು ನಿರ್ಮಾಣಕ್ಕೆ ಈಗಾಗಲೆ ಟೆಂಡರ್ ಕೂಡಾ ಕರೆಯಲಾಗಿದೆ.
ರೈತರಿಗೆ ಅನುಕೂಲ
ನಾಸಿಕ್ ಗೋದಾಮನ್ನು ಅಧ್ಯಯನ ನಡೆಸಿ ಇಲ್ಲಿಯೂ ಅದೇ ರೀತಿ ಗೋದಾಮು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಗೋದಾಮು ನಿರ್ಮಾಣವಾದರೆ ರೈತರಿಗೆ ಭಾರೀ ಅನುಕೂಲವಾಗಲಿದೆ.
ಸಾಮಾನ್ಯವಾಗಿ ಈರುಳ್ಳಿಗಳನ್ನು ಅಟ್ಟಿ ಇಟ್ಟರೆ ಮೊಳಕೆ ಬಂದು ಕೊಳೆತು ಹೋಗುತ್ತದೆ. ಇದಕ್ಕೆ ಪರಿಹಾರವಾಗಿ ಈ ಗೋದಾಮಿನಲ್ಲಿ ಅಟ್ಟಗಳನ್ನು ನಿರ್ಮಿಸಲಾಗುತ್ತದೆ. ಈ ಅಟ್ಟಗಳಲ್ಲಿ ಚೌಕಾಕಾರದ ಕಬ್ಬಿಣದ ಗ್ಯಾಲರಿ ಇರುತ್ತದೆ.
ಪ್ರತಿ ಗ್ಯಾಲರಿಯನ್ನು ಒಬ್ಬೊಬ್ಬರು ರೈತರಿಗೆ ನೀಡಲಾಗುತ್ತದೆ. ಅವುಗಳ ಕೀಲಿ ಕೈ ಕೂಡ ರೈತರ ಬಳಿಯೇ ಇರುತ್ತದೆ. ಈ ಗೋದಾಮಿನೊಳಗೆ ಸಾಕಷ್ಟು ಗಾಳಿ, ಬೆಳಕಿಗೆ ವ್ಯವಸ್ಥೆ ಇರುತ್ತದೆ. ರೈತರು ಉಚಿತವಾಗಿ ಇಲ್ಲಿ 15 ದಿನಗಳವರೆಗೆ ಈರುಳ್ಳಿಯನ್ನು ಇಡಲು ಅವಕಾಶವಿದೆ.
ಗೋದಾಮಿನಿಂದ ಖರೀದಿದಾರರಿಗೆ ಅನುಕೂಲವಾಗಿದ್ದು ನೇರವಾಗಿ ಗೋದಾಮಿಗೆ ಬಂದು ಖರೀದಿ ನಡೆಸಬಹುದಾಗಿದೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ












Click it and Unblock the Notifications