Get Updates
Get notified of breaking news, exclusive insights, and must-see stories!

10 ದಿನಗಳಿಂದ 20 ಸಾವಿರ ಟನ್‌ಗೂ ಹೆಚ್ಚು ಕಬ್ಬು ಅರೆದ ಮೈಷುಗರ್‌ ಕರ್ಖಾನೆ

ಮಂಡ್ಯ, ಜುಲೈ, 18: ಪ್ರಸಕ್ತ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಿ ಹತ್ತು ದಿನಗಳು ಕಳೆದಿದ್ದು, ಈ ಅವಧಿಯಲ್ಲಿ ಸುಮಾರು 20 ಸಾವಿರ ಟನ್‌ಗೂ ಹೆಚ್ಚಿನ ಕಬ್ಬು ಅರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಳೆದ ಜುಲೈ 7ರಂದು ಮೈಷುಗರ್ ಕಬ್ಬು ಅರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, 500 ಟನ್ ಕಬ್ಬು ಅರೆಯುವ ಮೂಲಕ ಪ್ರಾರಂಭವಾದ ಕಾರ್ಖಾನೆಯಲ್ಲಿ ಇದೀದ ದಿನಕ್ಕೆ 2800ರಿಂದ 3 ಸಾವಿರ ಟನ್ ಅರೆಯಲಾಗುತ್ತಿದೆ. ಈವರೆಗೆ ಕಬ್ಬಿನ ಇಳುವಳಿ ಶೇಕಡಾ 6.5 ರಿಂದ 7ರಷ್ಟು ಬರುತ್ತಿತ್ತು. ಆದರೆ ಪ್ರಸ್ತುತ ಶೇಕಡಾ 8ಷ್ಟು ಇಳುವರಿ ಬರುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Mysugar foctory milled more than 20 thousand tons sugarcane in 10 days

ವಿದ್ಯುತ್ ಅಡಚಣೆಯಿಂದ ಕೆಲ ಗಂಟೆಗಳ ಕಾಲ ಸ್ಥಗಿತ

ಕಾರ್ಖಾನೆ ಆರಂಭ ಆದಾಗಿನಿಂದ ಇಲ್ಲಿಯವರೆಗೆ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗಿಲ್ಲ. ಕಾರ್ಖಾನೆಗೆ ವಿದ್ಯುತ್ ಸರಬರಾಜಾಗುವ ಕಾಳೇನಹಳ್ಳಿ ಗ್ರಿಡ್‌ನಲ್ಲಿ ಉಂಟಾದ ವಿದ್ಯುತ್ ಅಡಚಣೆಯಿಂದ ಕೆಲ ಗಂಟೆಗಳ ಕಾಲ ಕಾರ್ಖಾನೆ ಸ್ಥಗಿತಗೊಂಡಿದ್ದು ಸತ್ಯ. ನಂತರ ಕಾರ್ಖಾನೆಯಲ್ಲಿ ಕಬ್ಬು ಅರೆಯವಿಕೆ ನಿರಾತಂಕವಾಗಿ ಸಾಗಿದೆ ಎಂದು ತಿಳಿಸಿವೆ.

ಕಾರ್ಖಾನೆಗೆ ನಿತ್ಯ ಯಥೇಚ್ಛವಾಗಿ ರೈತರು ಕಬ್ಬು ಸರಬರಾಜು ಮಾಡುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಲಾರಿಗಳು, ಎತ್ತಿನಗಾಡಿಗಳು ಮತ್ತು ಟ್ರ್ಯಾಕ್ಟರ್‌ಗಳು ಕಬ್ಬು ತುಂಬಿಕೊಂಡು ಕಾರ್ಖಾನೆ ಯಾರ್ಡ್‌ನಲ್ಲಿ ಜಮಾವಣೆಗೊಂಡಿವೆ. ಕಾರ್ಖಾನೆಯೊಳಗಿನ ವೇ-ಬ್ರಿಡ್ಜ್‌ನಲ್ಲಿ ಕಬ್ಬು ತುಂಬಿದ ಲಾರಿಗಳು, ಎತ್ತಿನ ಗಾಡಿಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ತೂಕ ಮಾಡಿ ಕಳುಹಿಸಲಾಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆ ಕಾರ್ಯ ಸುಧಾರಣೆ ಕಂಡಿದೆ. ಕಳೆದ ಬಾರಿಗಿಂತಲೂ ಗುಣಮಟ್ಟದ ಸಕ್ಕರೆ ಉತ್ಪಾದನೆಯಾಗುತ್ತಿರುವುದು ರೈತರಲ್ಲಿ ವಿಶ್ವಾಸ ಮೂಡಿಸುವಂತೆ ಮಾಡಿದೆ.

ಪೈಪ್‌ಲೈನ್‌ಗಳ ಬದಲಾವಣೆ ಅಗತ್ಯ

ಮೈಷುಗರ್‌ನಲ್ಲಿ ಪದೇ ಪದೇ ರಿಪೇರಿಗೆ ಬರುವ ಯಂತ್ರೋಪಕರಣಗಳ ಬದಲಾವಣೆ ಮಾಡಬೇಕಿದೆ. ಸ್ಟೀಮ್ ಪೈಪ್‌ಲೈನ್ ಸೋರಿಕೆಯಾಗುತ್ತಿದ್ದು, ಅದನ್ನೂ ಬದಲಾವಣೆ ಮಾಡುವ ಅಗತ್ಯವಿದೆ. ತುಕ್ಕು ಹಿಡಿದಿರುವ ಯಂತ್ರಗಳ ಜಾಗಕ್ಕೆ ಹೊಸ ಯಂತ್ರಗಳನ್ನು ಜೋಡಣೆ ಮಾಡಬೇಕಿದೆ. ರಾಜ್ಯ ಸರ್ಕಾರ ಸಕಾಲದಲ್ಲಿ ಹಣಕಾಸನ್ನು ಬಿಡುಗಡೆ ಮಾಡಿದರೆ ಅವುಗಳ ಬದಲಾವಣೆಗೆ ಹೆಚ್ಚಿನ ಸಹಕಾರಿಯಾಗಲಿದೆ. ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆದರೆ ಕಾರ್ಖಾನೆಯನ್ನು ಯಾವುದೇ ತೊಂದರೆ ಇಲ್ಲದಂತೆ ನಡೆಸಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಗುಣಮಟ್ಟದ ಸಕ್ಕರೆ ಉತ್ಪಾದನೆ

ಕಾರ್ಖಾನೆಯೊಳಗೆ ಉತ್ಪಾದನೆ ಆಗುತ್ತಿರುವ ಸಕ್ಕರೆಯನ್ನು 50 ಕೆ.ಜಿ. ಬ್ಯಾಗ್‌ಗಳಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಕಳೆದ ಬಾರಿ ಸಕ್ಕರೆ ಕಂದು ಬಣ್ಣದಿಂದ ಕೂಡಿದ್ದು, ಇದು ಕಳಪೆ ಗುಣಮಟ್ಟದಲ್ಲಿತ್ತು. ಆದರೆ, ಈ ಬಾರಿ ಗುಣಮಟ್ಟದ ಸಕ್ಕರೆ ಉತ್ಪಾದಿಸಲಾಗುತ್ತಿದೆ. ಕಬ್ಬು ಅರೆಯುವಿಕೆ ಸುಗಮವಾಗಿ ಸಾಗುತ್ತಿರುವುದರಿಂದ ಈ ಬಾರಿ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಸಡ್ಡು ಹೊಡೆಯುವಂತೆ ಮೈಷುಗರ್ ಕಾರ್ಖಾನೆ ಕಬ್ಬು ಅರೆಯಬಹುದೆಂಬ ಭರವಸೆ ಮೂಡಿದೆ.

ಇನ್ನು ಇಲ್ಲಿನ ಕಬ್ಬು ಬೆಳೆಗಾರರು ಖಾಸಗಿ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸದೆ ಸರ್ಕಾರಿ ಸ್ವಾಮ್ಯದ ಮೈಷುಗರ್‌ ಕಾರ್ಖಾನೆಗೆ ಕಬ್ಬನ್ನು ತರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಬ್ಬು ಕಟಾವು ಮಾಡುವವರು ಮಹಾರಾಷ್ಟ್ರ, ವಿಜಯಪುರ, ಬಳ್ಳಾರಿ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದು, ನಿತ್ಯ 2000ರಿಂದ 2500 ಟನ್ ಕಬ್ಬು ಕಟಾವು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಟಾವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+