ಮೋದಿ ಸರ್ಕಾರದಿಂದ ₹1.52 ಲಕ್ಷ ಕೋಟಿ ಕೃಷಿ ಅನುದಾನ- ಲೋಕಸಭೆಯಲ್ಲಿ ಬಜೆಟ್ ಕುರಿತು ಶ್ಲಾಘಿಸಿದ ಸಂಸದ ಡಾ.ಕೆ.ಸುಧಾಕರ್
ನವದೆಹಲಿ ಜುಲೈ 30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿರುವ ಆಯವ್ಯಯ ಕುರ್ಚಿ ಉಳಿಸುವ ಬಜೆಟ್ ಅಲ್ಲ. ಬದಲಾಗಿ ಇದು ರೈತರನ್ನು, ನಾರಿ ಶಕ್ತಿಯನ್ನು, ಯುವಶಕ್ತಿಯನ್ನು, ಬಡವರನ್ನು ಉಳಿಸುವ ಬಜೆಟ್ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಲೋಕಸಭೆಯಲ್ಲಿ ಆಯವ್ಯಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಆಯವ್ಯಯವನ್ನು ಕುರ್ಚಿ ಬಚಾವೋ, ಮಿತ್ರಪಕ್ಷಗಳ ಬಜೆಟ್, ಎಂದು ನಕಾರಾತ್ಮಕವಾಗಿ ವಿರೋಧ ಪಕ್ಷಗಳು ಹೇಳಿರುವುದು ವಿಷಾದನೀಯ. ಆದರೆ ಇದು ರೈತರನ್ನು ಉಳಿಸುವ ಬಜೆಟ್, ನಾರಿ ಶಕ್ತಿ ಉಳಿಸುವ ಬಜೆಟ್, ಯುವಶಕ್ತಿ ಉಳಿಸುವ ಬಜೆಟ್, ಬಡವರನ್ನು ಉಳಿಸುವ ಬಜೆಟ್, ಭಾರತದ ಆರ್ಥಿಕತೆ ಉಳಿಸುವ ಬಜೆಟ್ ಹಾಗೂ ದೇಶ ಉಳಿಸುವ ಬಜೆಟ್ ಎಂದು ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿರುವ ಆಯವ್ಯಯ ಆರ್ಥಿಕತೆ ಹಾಗೂ ಸಮಾಜ ಕಲ್ಯಾಣದ ನಡುವೆ ಸಮತೋಲನ ಸಾಧಿಸಿದೆ. ಇದು ಪ್ರಧಾನಿ ಮೋದಿಯವರ 'ವಿಕಸಿತ ಭಾರತ'ದ ದೂರದೃಷ್ಟಿಯನ್ನು ತೋರುತ್ತಿದ್ದು, ಇದರಲ್ಲಿ ರೈತರ ಸಮೃದ್ಧಿ, ಬಡವರ ಗೌರವಯುತ ಬದುಕು, ಮಧ್ಯಮ ವರ್ಗದವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಉದ್ಯಮಿಗಳಿಗೆ ಪ್ರೋತ್ಸಾಹ ಸಿಗಲಿದೆ. ಸಮಾಜದ ಎಲ್ಲ ವರ್ಗಗಳಿಗೆ ಲಾಭ ದೊರೆಯುವಂತೆ ಈ ಬಜೆಟ್ ರೂಪಿಸಲಾಗಿದೆ ಎಂದರು.
ಗರೀಬಿ ಹಟಾವೋ, ದೇಶ್ ಬಚಾವೋ ಎಂಬುದು 1971 ರ ಚುನಾವಣೆಯ ವಿಷಯವಾಗಿತ್ತು. ಆದರೆ 113 ದಶಲಕ್ಷ ಜನರನ್ನು ಬಡತನದಿಂದ ಹೊರಗೆ ತಂದಿದ್ದು, ಸಮರ್ಥ ನಾಯಕ ಪ್ರಧಾನಿ ಮೋದಿ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ ಎಂದರು.
ಕಾಂಗ್ರೆಸ್ ತನ್ನ ಸಂಪೂರ್ಣ ಬಲದಿಂದ ಎಂದೂ ಅಧಿಕಾರಕ್ಕೆ ಬರಲಿಲ್ಲ. ಇಂದಿರಾಗಾಂಧಿ ಹತ್ಯೆಯಾದಾಗ ಕಾಂಗ್ರೆಸ್ ಗೆ 415 ಸ್ಥಾನ ಬಂದಿತ್ತು. 1999 ರಲ್ಲಿ 114, 2004 ರಲ್ಲಿ 145 ಆಗಿತ್ತು. ಆಗ ಬಿಜೆಪಿಯ ಬಲ 138. ಆದರೂ ಕಾಂಗ್ರೆಸ್ ಮಿತ್ರಪಕ್ಷಗಳ ಸಹಾಯದಿಂದ ಆಡಳಿತ ನಡೆಸಿತ್ತು. 2009 ರಲ್ಲಿ 206 ಸೀಟುಗಳು ಬಂದಾಗಲೂ ಮಿತ್ರಪಕ್ಷಗಳ ನೆರವಿನಿಂದ ಆಡಳಿತ ಮಾಡಿತ್ತು. 2014 ರಲ್ಲಿ ಬಿಜೆಪಿ 282 ಗಳಿಸಿದರೆ, ಕಾಂಗ್ರೆಸ್ 44 ಕ್ಕೆ ಕುಸಿಯಿತು. 2019 ರಲ್ಲಿ ಬಿಜೆಪಿ 303 ಗಳಿಸಿತು. ಈ ಬಾರಿ ಬಿಜೆಪಿಗೆ ಕೆಲವು ಸೀಟುಗಳು ನಷ್ಟವಾಗಿದೆ ಎಂದರು.

ರೈತರಿಗೆ ನೆರವು
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ನೆರವು ನೀಡಿದ್ದಾರೆ. ಈವರೆಗೆ 11 ಕೋಟಿ ರೈತರಿಗೆ ₹3.24 ಲಕ್ಷ ಕೋಟಿ ನೀಡಿದ್ದಾರೆ. ಯುಪಿಎ ಇದ್ದಾಗ 2014 ರಲ್ಲಿ ಕೃಷಿಗೆ ಕೇವಲ ₹22,000 ಕೋಟಿ ನೀಡಲಾಗಿತ್ತು. ಈ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ 2024 ರಲ್ಲಿ ₹1.52 ಲಕ್ಷ ಕೋಟಿಗೆ ಏರಿಸಿದ್ದಾರೆ. ಆದರೂ ಬಿಜೆಪಿ ರೈತ ವಿರೋಧಿ ಎಂದು ವಿರೋಧ ಪಕ್ಷಗಳು ಹೇಳುತ್ತವೆ. 2013-14 ರಲ್ಲಿ ಯುಪಿಎ ರೈತರಿಗೆ ₹7 ಲಕ್ಷ ಕೋಟಿ ಸಾಲ ನೀಡಿದ್ದರೆ, ನರೇಂದ್ರ ಮೋದಿ ಸರ್ಕಾರವೀಗ ₹19 ಲಕ್ಷ ಕೋಟಿ ಸಾಲ ನೀಡಲಿದೆ. ಕೋವಿಡ್ ಹಾಗೂ ರಷ್ಯಾ-ಉಕ್ರೇನ್ ಯುದ್ಧದಿಂದ ರಸಗೊಬ್ಬರ, ತೈಲ ದರ ಏರಿಕೆಯಾದರೂ ಅದರ ಹೊರೆಯನ್ನು ರೈತರ ಮೇಲೆ ಹೇರಿಲ್ಲ ಎಂದರು.
2013-14 ರಲ್ಲಿ ಯುಪಿಎ ರಸಗೊಬ್ಬರಕ್ಕೆ ₹73,000 ಕೋಟಿ ಸಹಾಯಧನ ನೀಡಿದ್ದರೆ, ಮೋದಿ ಸರ್ಕಾರ ಅದನ್ನು ₹2.55 ಲಕ್ಷ ಕೋಟಿಗೆ ಏರಿಸಿದೆ. ಹಿಂದಿನ ಸರ್ಕಾರ ಭತ್ತಕ್ಕೆ ಕ್ವಿಂಟಾಲ್ ಗೆ ₹1310 ನೀಡಿದರೆ, ಅದನ್ನು ಮೋದಿ ಸರ್ಕಾರ 67% ಏರಿಸಿ, ₹2300 ನೀಡಲಾಗುತ್ತಿದೆ. ಜೋಳಕ್ಕೆ ಹಿಂದಿನ ಸರ್ಕಾರ ₹1500 ನೀಡಿದರೆ, ನಮ್ಮ ಸರ್ಕಾರ ಅದನ್ನು 112% ಏರಿಸಿ, ₹3371 ನೀಡುತ್ತಿದೆ. ಹೆಸರುಕಾಳಿಗೆ ಹಿಂದಿನ ಸರ್ಕಾರ ₹4500 ನೀಡಿದರೆ, ನಮ್ಮ ಸರ್ಕಾರ ಅದನ್ನು 124% ಏರಿಸಿ, ₹8680 ನೀಡುತ್ತಿದೆ ಎಂದರು.
ಮೋದಿ ಸರ್ಕಾರ 14 ಮತ್ತು 15 ನೇ ಆರ್ಥಿಕ ಆಯೋಗದ ವರದಿಯನ್ನು ಸ್ವೀಕಾರ ಮಾಡಿದೆ. ಕಳೆದೊಂದು ದಶಕದಲ್ಲಿ 41-42% ತೆರಿಗೆ ರಾಜ್ಯಗಳೊಂದಿಗೆ ಹಂಚಿಕೆಯಾಗಿದೆ. ಹಿಂದೆ ಅದು 30-32% ಇತ್ತು ಎಂದರು. ಮೋದಿ ಸರ್ಕಾರ ಯುವಜನರ ಸಬಲೀಕರಣಕ್ಕೆ ಸದಾ ಶ್ರಮಿಸಲಿದೆ. ಇದಕ್ಕೆ ವಿರೋಧ ಪಕ್ಷಗಳು ಟೀಕೆ ಮಾಡಲಿ, ಬಿಡಲಿ, ಬಿಜೆಪಿ ಸದಾ ರೈತರು, ಮಹಿಳೆಯರು, ಯುವಜನರಿಗಾಗಿ ಬದ್ಧತೆಯಿಂದ ದುಡಿಯಲಿದೆ ಎಂದರು.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ












Click it and Unblock the Notifications