ರಬ್ಬರ್, ಪ್ಲಾಸ್ಟಿಕ್ ಉದ್ಯಮದಲ್ಲಿ ಉದ್ಯೋಗಾವಕಾಶ ಅಧಿಕ
ಬೆಂಗಳೂರು ಜೂ.29: ರಬ್ಬರ್ ಹಾಗೂ ಪ್ಲಾಸ್ಟಿಕ್ ಉದ್ಯಮದಲ್ಲಿ ಅಪ್ರೆಂಟಿಸ್ ಸೇರಿದಂತೆ ಸುಮಾರು 4,500ಕ್ಕೂ ಅಧಿಕ ಉದ್ಯೋಗವಕಾಶಗಳು ಇವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಈ ಉದ್ಯಮವು ಇನ್ನಷ್ಟು ಗಣನೀಯವಾಗಿ ಬೆಳೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.
ಈ ಬಗ್ಗೆ ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಕೌಶಲ ಸಭೆ (ಸ್ಕಿಲ್ ಮೀಟ್)ಯಲ್ಲಿ ಇಂಡಸ್ಟ್ರಿ ಕನೆಕ್ಟ್, ರಬ್ಬರ್, ಕೆಮಿಕಲ್ ಮತ್ತು ಪೆಟ್ರೋಕೆಮಿಕಲ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ (ಆರ್‌ಸಿಪಿಎಸ್‌ಡಿಸಿ) ಹಿರಿಯ ವ್ಯವಸ್ಥಾಪಕರಾದ ದೀಪಮಾಲಾ ಮೂರ್ಜನಿ ಅವರು ವಿವರಿಸಿದ್ದಾರೆ. ವರ್ಷದಿಂದ ವರ್ಷ ರಬ್ಬರ್ ಹಾಗೂ ಪ್ಲಾಸ್ಟಿಕ್ ಉದ್ಯಮ ಬೆಳೆಯುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಿಗಳ ಅಗತ್ಯತೆ ಉಂಟಾಗುತ್ತಿದೆ ಎಂದರು.
ದಕ್ಷಿಣದ ಪ್ರಾದೇಶಿಕ ವ್ಯವಸ್ಥಾಪಕರಾದ ಅನ್ನಮಾ ಜಾಕೋಬ್ ಅವರ ಪ್ರಕಾರ, ತಮಿಳುನಾಡು ರಾಜ್ಯವು ಸುಮಾರು ಆರು ಸಾವಿರ ರಬ್ಬರ್ ಹಾಗೂ ಪ್ಲಾಸ್ಟಿಕ್ ಉತ್ಪಾದನಾ ಕೈಗಾರಿಕೆಗಳನ್ನು ಹೊಂದಿದೆ. ರಬ್ಬರ್ ವಿಚಾರಕ್ಕೆ ಬರುವುದಾದರೆ ವಾಹನಗಳಿಗೆ ಬಳಸುವ ಟಯರ್ ಎಂಆರ್ ಎಫ್, ಸಿಯೇಟ್ ಟಯರ್, ಅಪೊಲೋ ಟಯರ್, ಸನ್‌ಡ್ರಂ ಕೈಗಾರಿಕೆ, ಜೆಬಿಎಂ ಆಟೋ ಆಂಡ್ ಎಮೆರೆಲ್ಡ ಟಯರ್ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ಕೌಶಲ್ಯಯುತ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿವೆ ಎಂದು ಹೇಳಿದರು.

ಎಂಎಸ್ಎಂಇ ಗೆ ಅರಿವು ಮೂಡಿಸಬೇಕು:
ಸಭೆಯಲ್ಲಿ ನೈಪುಣ್ಯತೆ, ಕೌಶಲ್ಯಯುತ ಮತ್ತು ವೈವಿದ್ಯಮಯ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಒಂದು ವೇದಿಕೆಯಾಗಿ ಕೌಶಲ್ಯ ಸಭೆಯನ್ನು ನಡೆಸಲಾಗುತ್ತಿದ. ಸೂಕ್ಷ್ಮ, ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ನುರಿತ ಉದ್ಯೋಗಿಗಳ ಅನುಕೂಲತೆಗಳು ಮತ್ತು ಕೌಶಲಯುತ ನೌಕರರ ಸಾಮರ್ಥ್ಯದ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ಎಂಎಸ್ಎಂಇ ವಲಯಗಳಿಗೆ ಅರಿವು ಮೂಡಿಸಬೇಕಿದೆ ಎಂಬುದರ ಕುರಿತು ಚರ್ಚೆ ನಡೆಯಿತು.

ಸೇತುವೆಯಾಗಿ ಕಾರ್ಯ ನಿರ್ವಹಣೆ:
ಸ್ಕಿಲ್ ಮೀಟ್ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಲಭ್ಯವಿರುವ ಸರ್ಕಾರದ ಯೋಜನೆಗಳು ಮತ್ತು ಕೈಗಾರಿಕೆಗಳ ಕೌಶಲ್ಯ ಆಧಾರಿತ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಕ್ಷೇತ್ರಕ್ಕೆ ಒದಗಿಸುವ ಮತ್ತು ಮಾರ್ಗಸೂಚಿ ನೀಡುತ್ತದೆ ಎಂದು ಆರ್‌ಸಿಪಿಎಸ್ ಡಿಸಿ ಯ ಅಧ್ಯಕ್ಷ ವಿನೋದ್ ಪಟ್ಕೋಟ್ವಾರ್ ಹೇಳಿದರು.

15,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳ ನೋಂದಣಿ:
ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (ಎನ್ಎಸ್ ಡಿಸಿ) ವ್ಯಾಪಾರ ಕಾರ್ಯಾಚರಣೆ ಮುಖ್ಯಸ್ಥ ಪಂಖೂರಿ ಬೋರ್ಗೊಹೆನ್ ಅವರು, ಉತ್ಪಾದನಾ ಕೈಗಾರಿಕೆಗಳನ್ನು ಉತ್ತೇಜಿಸುವ ಆರ್‌ಸಿಪಿಎಸ್ ಡಿಸಿ ಸಂಸ್ಥೆಯಡಿ 15ಸಾವಿರಕ್ಕೂ ಅಧಿಕ ಅಪ್ರೆಂಟಿಸ್ ಗಳು ಈಗಾಗಲೇ ಪ್ರಮುಖ ವಿವಿಧ ರಬ್ಬರ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ದ್ವಿಗುಣ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಈ ಎರಡು ಉದ್ಯಮದಲ್ಲಿ ಸುಮಾರು 1,000 ಕೈಗಾರಿಕೆಗಳು ಆರ್‌ಸಿಪಿಎಸ್ ಡಿಸಿ ನಲ್ಲಿ ನೋಂದಾಯಿಸಿಕೊಂಡಿವೆ" ಎಂದು ವಿವರಿಸಿದರು.

ವೆಬ್ ಪೋರ್ಟಲ್ ಲೋಕಾರ್ಪಣೆ
ಯುವ ಶಕ್ತಿ ಫೌಂಡೇಶನ್ ನಿರ್ದೇಶಕ ಸತೀಶ್ ಪವಾರ್ ಅವರು, ಎನ್ ಎಪಿಎಸ್ ಆನ್‌ಲೈನ್ ಪೋರ್ಟಲ್ ನಲ್ಲಿ ಉದ್ಯಮಗಳಿಗೆ ಪೂರಕವಾಗಿ ನಡೆಯುವ ಪೂರಕ ಚಟುವಟಿಕೆಗೆಳು ಹಾಗೂ ಥರ್ಡ್ ಪಾರ್ಟಿ ಅಗ್ರಿಗೇಟರ್ (TPA) ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು.
ಸ್ಕಿಲ್ ಮೀಟ್ ನಲ್ಲಿ ಆರ್‌ಸಿಪಿಎಸ್ ಡಿಸಿ ರಬ್ಬರ್, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ವಲಯಗಳಲ್ಲಿನ ಕಂಪನಿಗಳಿಗೆ ತನ್ನ ಪ್ಲೇಸ್ ಮೆಂಟ್ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿತು. ಉದ್ಯಮದ ವೃತ್ತಿಪರರಿಗೆ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ರಾಷ್ಟ್ರೀಯ ಅಪ್ರೆಂಟ್ ಶಿಪ್ ಉತ್ತೇಜನಾ ಯೋಜನೆಯನ್ನು ಪ್ರಸ್ತುತಿ ಪಡಿಸಿತು. ಸಭೆಯಲ್ಲಿ ರಬ್ಬರ್, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ವಲಯದ 50 ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications