ರೈತರು ಕಾರ್ಪೊರೇಟ್ ಜಗತ್ತಿನ ಭಾಗವಾಗ್ಲಿ, ಖುರ್ಷೀದ್
ಬೆಂಗಳೂರು,
ಡಿ. 28 : ಉದ್ದಿಮ ಕ್ಷೇತ್ರದ ಆಡಳಿತ ಹೆಚ್ಚೆಚ್ಚು ಪಾರದರ್ಶಕ ಮತ್ತು ಸಮಾಜಮುಖಿ ಆಗಿರುವಂತೆ ಮಾಡುವಲ್ಲಿ ಮಾಧ್ಯಮಗಳು ಕಾವಲುಗಾರನ ಪಾತ್ರ ನಿರ್ವಹಿಸಬಹುದಾಗಿದೆ ಎಂದು ಕೇಂದ್ರ ಕಂಪನಿ ವ್ಯವಹಾರಗಳ ಖಾತೆ ಸಚಿವ ಸಲ್ಮಾನ ಖುರ್ಷೀದ್ ಹೇಳಿದರು. id="toptextpromo">ಉದ್ದೇಶಿತ
ಕಂಪನಿ ಮಸೂದೆ 2009 ಬಗ್ಗೆ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ, ಬೆಂಗಳೂರು ವಾಣಿಜ್ಯೋದ್ಯಮ ಸಂಘ ಮತ್ತು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್ ಆಫ್ ಇಂಡಿಯಾ ಜಂಟಿಯಾಗಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಉದ್ಯಮ ಕ್ಷೇತ್ರ ಉತ್ತಮ ಆಡಳಿತ ಸೂತ್ರವನ್ನು ಅಳವಡಿಸಿಕೊಳ್ಳುವಲ್ಲೂ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಖುರ್ಷೀದ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಉದ್ದಿಮೆಗಳು
ಮತ್ತು ರೈತರ ಮಧ್ಯೆ ಮೂಡಿರುವ ಕಂದಕವನ್ನೂ ನಾವು ದೂರ ಮಾಡಬೇಕಾಗಿದೆ. ಭೂಮಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರನ್ನು ಕಾರ್ಪೊರೇಟ್ ಜಗತ್ತಿನ ಭಾಗವಾಗುವಂತೆ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.











Click it and Unblock the Notifications