ಮಾವಿನ ಗಿಡಗಳ ಆರೈಕೆ; ರೈತರಿಗೆ ಸಲಹೆಗಳು

ಬೆಂಗಳೂರು, ಆಗಸ್ಟ್ 08; ಮಾವಿನ ಹಣ್ಣಿನ ಕೊಯ್ಲು ಮುಗಿದ ಬಳಿಕ ಮುಂಗಾರು ಹಂಗಾಮಿನಲ್ಲಿ ಮಾವಿನ ಗಿಡಗಳ ರಕ್ಷಣೆಗೆ ರೈತರು ಗಮನ ಕೊಡಬೇಕಿದೆ. ರೆಂಬೆ ತೆರವುಗೊಳಿಸುವಿಕೆ, ಗೊಬ್ಬರ ನೀಡುವುದು, ತೋಟಗಳ ಕಳೆ ನಿರ್ವಹಣೆ ಬಗ್ಗೆ ತೋಟಗಾರಿಕಾ ಇಲಾಖೆ ಮಾವು ಬೆಳೆಗಾರರಿಗೆ ಕೆಲವು ಸಲಹೆಗಳನ್ನು ನೀಡಿದೆ.

ಮರದ ಮಧ್ಯದ 1 ರಿಂದ 2 ರೆಂಬೆಗಳನ್ನು ತೆಗೆದು ಮೇಲ್ಭಾಗದಿಂದ ಸೂರ್ಯ ಕಿರಣಗಳು ಮರದ ಒಳಗಿನ ಎಲ್ಲಾ ಭಾಗಗಳನ್ನು ತಲುಪುವಂತೆ ಮಾಡಬೇಕು. ಇದಾದ ನಂತರ ಮರದ ಬದಿಗಳ ದಟ್ಟತೆಯನ್ನು ಕಡಿಮೆ ಮಾಡಲು ಹಲವಾರು ಬದಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ಒಟ್ಟಾರೆ ಈ ಕ್ರಮಗಳಿಂದ ಗಿಡದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಗಾಳಿಯಾಡುವಿಕೆ ಉತ್ತಮಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

maintenance-of-mango-tree

ಮಾವು ಬೆಳೆಗಾರರು ಆಗಸ್ಟ್ ತಿಂಗಳಿನಲ್ಲಿ ರೆಂಬೆಗಳನ್ನು ತೆರವುಗೊಳಿಸಿ ಮರದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಹಾಗೂ ಗಾಳಿಯಾಡುವಿಕೆ ಉತ್ತಮಗೊಳಿಸಬೇಕು. ಇದರಿಂದಾಗಿ ಹೂ ಬಿಡುವಿಕೆ, ಫಸಲಿನ ಪ್ರಮಾಣ ಮತ್ತು ಹಣ್ಣಿನ ಗುಣಮಟ್ಟವನ್ನು ಅಧಿಕಗೊಳಿಸಲು ಸಾಧ್ಯವಾಗುತ್ತದೆ.

ಕತ್ತರಿಸುವಿಕೆಗೆ ಒಳಗಾದ ಮಾವಿನ ಗಿಡದ ಕಾಂಡದ ತುದಿಗಳಿಗೆ ಕಾಪರ್ ಆಕ್ಸಿ ಕ್ಲೋರೈಡ್ 50 ಗ್ರಾಂ ಮತ್ತು ಕ್ಲೋರೋಪೈರಿಪಾಸ್ 5 ಮಿ.ಲಿ.ಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬ್ರಶ್ ಮೂಲಕ ಲೇಪಿಸುವುದು.

ಕಾಂಡ ಕೊರಕದ ಹಾವಳಿ; ಮುಖ್ಯವಾಗಿ ಮಾವಿನ ಬಾದಾಮಿ ತಳಿಯಲ್ಲಿ ಕಾಂಡ ಕೊರಕದ ಹಾವಳಿ ಬಹು ಸಾಮಾನ್ಯವಾಗಿದೆ. ಕಾಂಡದ ಬುಡದಲ್ಲಿ ಮರದ ಹೊಟ್ಟು ಕಾಣಿಸಿಕೊಂಡಲ್ಲಿ ಕಾಂಡ ಕೊರಕವು ಇರುತ್ತದೆ. ಅಂತಹ ಮರಗಳಲ್ಲಿ ಉಂಟಾಗಿರುವ ರಂಧ್ರಗಳಲ್ಲಿ ಚೂಪಾದ ತಂತಿಯನ್ನು ತೂರಿಸಿ ಒಳಗಿರುವ ಹುಳುವನ್ನು ನಾಶ ಪಡಿಸುವುದು. ಅಲ್ಲದೇ ಆ ರಂಧ್ರಗಳ ಒಳಗೆ ಡೈಕ್ಲೋರೋವಾಸ್ (ನುವಾನ್) ರಾಸಾಯನಿಕವನ್ನು ಹತ್ತಿಯಲ್ಲಿ ನೆನಸಿ ಒಳ ತೂರಿಸಿ ರಂಧ್ರದ ಬಾಯಿಯನ್ನು ಹಸಿಮಣ್ಣಿನಿಂದ ಮುಚ್ಚುವುದು. ಇದರಿಂದ ಒಳಗಿರುವ ಕಾಂಡ ಕೊರಕ ಸಾಯುತ್ತದೆ ಎಂದು ತಿಳಿಸಲಾಗಿದೆ.

ಕಾಂಡ ಕೊರಕದ ಪುನರಾವರ್ತನೆಯನ್ನು ತಪ್ಪಿಸಲು ಮಾವಿನ ಗಿಡದ ಕಾಂಡಕ್ಕೆ ಕಾಂಡ ರಕ್ಷಣಾ ಪೇಸ್ಟ್ ಲೇಪಿಸುವ ಅಗತ್ಯತೆ ಇದೆ. ಈ ಪದಾರ್ಥಗಳನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ 3 ಬ್ರಶ್ ಸಹಾಯದಿಂದ ಮಾವಿನ ಕಾಂಡದ ಬುಡಕ್ಕೆ ಮೂರು ಅಡಿ ಎತ್ತರದವರೆಗೆ ಚೆನ್ನಾಗಿ ಲೇಪಿಸುವುದು.

ಮಾವಿನ ಮರದಲ್ಲಿ ಪರಾವಲಂಬಿ (ಬದನಿಕೆ) ಸಸ್ಯಗಳು ಬೆಳೆದಿರುವುದು ಕಂಡು ಬಂದಲ್ಲಿ ಅವುಗಳನ್ನು ಸಂಪೂರ್ಣವಾಗಿ ಕತ್ತರಿಸಿ ನಾಶಪಡಿಸುವುದು. ಈ ಪರಾವಲಂಬಿ ಸಸ್ಯಗಳು ಯಾವುದೇ ಕಾರಣಕ್ಕೂ ಹೂ ಬಿಟ್ಟು ಕಾಯಿ ಕಚ್ಚದಂತೆ ನೋಡಿಕೊಳ್ಳುವುದರಿಂದ ಇವುಗಳನ್ನು ಇತರೆ ಮರಗಳಿಗೆ ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು.

ಈ ಸಮಯದಲ್ಲಿ ಗಿಡಗಳಿಗೆ ನೀಡುವ ಗೊಬ್ಬರಗಳಲ್ಲಿ ಸೇಂದ್ರೀಯ ಗೊಬ್ಬರಗಳಲ್ಲಿ ಬೇವಿನ ಹಿಂಡಿ, ತಿಪ್ಪೆಗೊಬ್ಬರ ಕಾಂಪೋಸ್ಟ್‌ಗಳು ಪ್ರಮುಖ. ಬೇವಿನ ಹಿಂಡಿಯನ್ನು ಪ್ರತಿ ವಯಸ್ಕ ಮರಕ್ಕೆ ಒಂದು ಕೆ.ಜಿ. ಪ್ರಮಾಣದಲ್ಲಿ ನೀಡುವುದರಿಂದ ಪೋಷಕಾಂಶಗಳ ಜೊತೆಗೆ ಹಣ್ಣಿನ ನೊಣಗಳ ಕೋಶ, ಗೆದ್ದಲು, ಗೊಣ್ಣೆಹುಳು ಮುಂತಾದವುಗಳು ಸಹ ನಿವಾರಣೆಯಾಗುತ್ತದೆ.

ತೋಟವನ್ನು ಚೆನ್ನಾಗಿ ಉಳುಮೆ ಮಾಡಿಸಿ ಕಸ, ಕಡ್ಡಿ, ಹುಲ್ಲುಗಳನ್ನು ತೆಗೆದು ಸ್ವಚ್ಛವಾಗಿಡಬೇಕು. ಮಾವಿನ ಮರಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ಸೂಕ್ತ ಅಳತೆಯ ಪಾತಿ ಮಾಡಬೇಕು ಎಂದು ಸಲಹೆ ನೀಡಲಾಗಿದೆ.

ಮಾವು ಬೆಳೆಯುವ ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಜಿಲ್ಲಾ/ ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳು ಮತ್ತು ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+