ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ ತೀರ್ಪು ಪ್ರಕಟ: ಉ.ಕರ್ನಾಟಕ ಹೋರಾಟಗಾರರಿಗೆ ಸಂದ ಜಯ

By Manjunatha
|
Google Oneindia Kannada News

ನವದೆಹಲಿ, ಆಗಸ್ಟ್ 14: ಉತ್ತರ ಕರ್ನಾಟಕದ ಕೋಟ್ಯಂತರ ರೈತರ ಬದುಕು ನಿರ್ಣಯಿಸುವ ಮಹತ್ವದ ಮಹದಾಯಿ ವಿವಾದದ ತೀರ್ಪು ಪ್ರಕಟವಾಗಿದ್ದು. ರಾಜ್ಯಕ್ಕೆ ಅಲ್ಪ ತೃಪ್ತಿ ದೊರತಿದೆ.

ತೀರ್ಪಿನಿಂದಾಗಿ ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ಅಡಿ ನೀರು ದೊರೆತಿದೆ. ಕುಡಿಯಲು 5.5 ಟಿಎಂಸಿ ಅಡಿ ನೀರು ನೀಡಿದ್ದು, 8.2 ಟಿಎಂಸಿ ಅಡಿ ನೀರನ್ನು ವಿದ್ಯುತ್‌ಗೆ ಉತ್ಪಾದನೆಗೆ ಬಳಸಿಕೊಳ್ಳಲು ಹೇಳಲಾಗಿದೆ. 5.5 ಟಿಎಂಸಿ ಅಡಿ ನೀರಿನಲ್ಲಿ 4 ಟಿಎಂಸಿ ನೀರನ್ನು ಮಲಪ್ರಭಾ ಅಣೆಕಟ್ಟೆಗೆ ಹಾಗೂ 1.5 ಟಿಎಂಸಿ ಅಡಿ ನೀರನ್ನು ಕಳಸಾ-ಬಂಡೂರಾ ಯೋಜನೆಗೆ ಬಳಸಿಕೊಳ್ಳುವಂತೆ ಹೇಳಿದೆ.

ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

Mahadayi verdict out Karnataka gets 13.5 TCM feet water

ರಾಜ್ಯವು 36.55 ಟಿಎಂಸಿ ನೀರಿಗಾಗಿ ನ್ಯಾಯಾಧಿಕರಣಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಈಗ ಕೇವಲ 13.5 ಟಿಎಂಸಿ ನೀರು ಮಾತ್ರವೇ ದೊರೆತಿದೆ. ಆದರೆ ಮಹದಾಯಿ ಕಣಿವೆಯಲ್ಲಿ ನೀರು ಬಳಸಲು ಕರ್ನಾಟಕಕ್ಕೆ ಅವಕಾಶವೇ ಇರಲಿಲ್ಲ ಆದರೆ ನ್ಯಾಯಾಧಿಕರಣವು ಈಗ ರಾಜ್ಯಕ್ಕೆ ಮಹದಾಯಿ ನೀರು ಬಳಸಿಕೊಳ್ಳಲು ಅವಕಾಶ ನೀಡಿದೆ.

ಕಳೆದ 5 ವರ್ಷದಲ್ಲಿ 105 ದಿನಗಳ ಕಾಲ ವಿಚಾರಣೆ ನಡೆದಿತ್ತು. ಕರ್ನಾಟಕದ ಪರ ಅಶೋಕ್ ದೇಸಾಯಿ, ಮೋಹನ್ ಕಾತರಕಿ, ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದರು.

ಕಳಸಾ ಬಂಡೂರಿ ಯೋಜನೆ, ವಿವಾದ ಮತ್ತು ನಾವುಕಳಸಾ ಬಂಡೂರಿ ಯೋಜನೆ, ವಿವಾದ ಮತ್ತು ನಾವು

ರಾಜ್ಯಕ್ಕೆ ಕುಡಿಯುವ ನೀರಿಗಾಗಿ 7 ಟಿಎಂಸಿ ನೀರನ್ನು ನ್ಯಾಯಾಧಿಕರಣ ಮುಂದೆ ಕೇಳಿದ್ದರು. ರಾಜ್ಯದ ಮನವಿಯಲ್ಲಿ 7 ಟಿಎಂಸಿ ಹೆಚ್ಚುವರಿ ನೀರಿನ ಬೇಡಿಕೆಯಿತ್ತು. ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ನೀರು ಹಂಚಿಕೆಯಾಗಿದೆ.

100 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇಟ್ಟಿದ್ದ ಗೋವಾಕ್ಕೆ 24 ಟಿಎಂಸಿ ಅಡಿ ನೀರು ನೀಡಿದ್ದರೆ, ಮಹಾರಾಷ್ಟ್ರಕ್ಕೆ 1.2 ಟಿಎಂಸಿ ಅಡಿ ನೀರು ನೀಡಲಾಗಿದೆ. ನ್ಯಾಯಾಧಿಕರಣವು ತೀರ್ಪಿನ ಪ್ರತಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ತಲುಪಿಸಿದೆ.

English summary
Mahadayi issue verdict out. Court instructed to give total 13.5 TMC feet water to Karnataka. 5.5 TMC for drinking water, 8 TMC for agriculture, 8.5 for power plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X