ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ಡೌನ್ ಸಡಿಲಿಕೆ: ಗಗನಕ್ಕೇರಿದ ಹಣ್ಣು ತರಕಾರಿ ಬೆಲೆ!

|
Google Oneindia Kannada News

ಬೆಂಗಳೂರು, ಮೇ 26: ಲಾಕ್ ಡೌನ್ 4.0 ಜಾರಿಗೊಂಡ ಬೆನ್ನಲ್ಲೆ ಹಲವು ನಿಯಮಗಳನ್ನು ಸಡಿಲಿಕೆ ಮಾಡಿ, ವಿನಾಯತಿ ನೀಡಲಾಗಿದೆ. ಇದರಿಂದಾಗಿ ಹಣ್ಣು ಮತ್ತು ತರಕಾರಿ ದರ ಮನಬಂದಂತೆ ಏರಿಕೆಯಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ‌ ಬೀಳುತ್ತಿದೆ.

ಚಿಲ್ಲರೆ ವ್ಯಾಪಾರಿಗಳು ಒಂದಕ್ಕೆ ಎರಡರಂತೆ ಬೆಲೆ ಏರಿಕೆ ಮಾಡುತ್ತಿರುವುದು ಕಂಡು ಬಂದಿದೆ. ಬೇಸಿಗೆಯಲ್ಲಿ ಹಣ್ಣು- ತರಕಾರಿ ಬೆಲೆ ಏರಿಕೆಯಾಗೋದು ಸಾಮಾನ್ಯ, ಆದರೆ ಈ‌ ಬಾರಿ ಲಾಕ್ ಡೌನ್ ಇದ್ದ ಕಾರಣ ದರಗಳೆಲ್ಲ ಸ್ಥಿರವಾಗಿತ್ತು.

ತರಕಾರಿಯಿಂದಲೂ ಹಬ್ಬುತ್ತಿದ್ಯಾ ಕೊರೊನಾ ಸೋಂಕು?ತರಕಾರಿಯಿಂದಲೂ ಹಬ್ಬುತ್ತಿದ್ಯಾ ಕೊರೊನಾ ಸೋಂಕು?

ಶುಭಸಮಾರಂಭಗಳಿಗೆ ನಿರ್ಬಂಧ, ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಕೊರತೆಯಿಂದ ದರ ಇಳಿಕೆಯೂ ಆಗಿತ್ತು. ಆದರೆ, ಕಳೆದ ಒಂದು ವಾರದಿಂದ ತರಕಾರಿ ದರ ಗಗನಕ್ಕೇರುತ್ತಿದೆ. ಒಂದೆಡೆ ಲಾಕ್ ಡೌನ್ ನಿಂದ ನಷ್ಟ ಅನುಭವಿಸುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಲಾಭಕ್ಕಾಗಿ ಚಿಲ್ಲರೆ ವ್ಯಾಪಾರಿಗಳ ತಂತ್ರ

ಲಾಭಕ್ಕಾಗಿ ಚಿಲ್ಲರೆ ವ್ಯಾಪಾರಿಗಳ ತಂತ್ರ

ಇನ್ನೊಂದೆಡೆ, ಲಾಭಕ್ಕಾಗಿ ಚಿಲ್ಲರೆ ವ್ಯಾಪಾರಿಗಳು ಬಾಯಿಗೆ ಬಂದ ರೇಟ್ ಹೇಳುತ್ತಿದ್ದಾರೆ.

ಪ್ರತಿ ಸೊಪ್ಪಿನ ಕಟ್ಟಿಗೆ 20 ರು ದರವಿದೆ. ಒಂದು ವಾರದಿಂದ ತರಕಾರಿ, ಸೊಪ್ಪಿನ ದರ ಕೊಂಚ ಏರಿಕೆಯಾಗಿದೆ ಎಂದು ಹಾಪ್ಸ್ ಕಾಮ್ ದರ ಪಟ್ಟಿ ಕೂಡಾ ಹೇಳುತ್ತಿದೆ.

 ಕೊತ್ತಂಬರಿ ಸೊಪ್ಪಿನ ಬೆಲೆ

ಕೊತ್ತಂಬರಿ ಸೊಪ್ಪಿನ ಬೆಲೆ

ಸಗಟುದರ ಪ್ರತಿ ಕೊತ್ತಂಬರಿ ಸೊಪ್ಪಿನ ಕಟ್ಟಿಗೆ 30 ರಷ್ಟಿದೆ..! ಚಿಲ್ಲರೆ ಅಂಗಡಿಗಳಲ್ಲಿ ಕೊತ್ತಂಬರಿ ಸೊಪ್ಪಿನ ಮಧ್ಯಮ ಗಾತ್ರದ ಕಟ್ಟು ಒಂದಕ್ಕೆ 60 ರು ನಂತೆ ನಿಗದಿಯಾಗಿದೆ.

ಟೊಮಾಟೊ ಬೆಲೆ ಕೆಜಿಗೆ 1 ರೂಪಾಯಿ, ಈರುಳ್ಳಿ ಬೆಲೆ ಕೆಜಿಗೆ 8 ರೂಪಾಯಿಟೊಮಾಟೊ ಬೆಲೆ ಕೆಜಿಗೆ 1 ರೂಪಾಯಿ, ಈರುಳ್ಳಿ ಬೆಲೆ ಕೆಜಿಗೆ 8 ರೂಪಾಯಿ

ಚಿಲ್ಲರೆ ವ್ಯಾಪಾರಿಗಳು ಸಬ್ಬಕ್ಕಿ ಸೊಪ್ಪು ಅನ್ನು15 ರೂ.ಗೆ ಮಾರಾಟ ಮಾಡುತ್ತಿದ್ದರೆ, ಪಾಲಕ್ ಸೊಪ್ಪಿನ ದರ-20ರೂ ಎಂದು ನಿಗದಿ ಪಡಿಸಿದ್ದಾರೆ.

ತರಕಾರಿಗಳ ದರ

ತರಕಾರಿಗಳ ದರ

ಮೇ 26ರಂದು ದರಗಳ ಪಟ್ಟಿ (ಪ್ರತಿ ಕೆ.ಜಿ.ಗೆ) ತರಕಾರಿ-ಸಗಟುದರ-ಹಾಪ್ಕಾಮ್ಸ್‌ದರ*

ಬೀನ್ಸ್-80-80
ಬೆಳ್ಳುಳ್ಳಿ-105-118
ಮೆಣಸಿನಕಾಯಿ-40-38
ಅಲೂಗಡ್ಡೆ-20-40
ಬೆಂಡೆಕಾಯಿ-15-28
ಕ್ಯಾರೆಟ್-15-34
ಈರುಳ್ಳಿ- 10-18
ಬದನೆ-10-25
ಬಿಟ್ರೋಟ್- 10-33
ಟೊಮೆಟೊ-10-15

ಹಣ್ಣುಗಳ ದರ

ಹಣ್ಣುಗಳ ದರ

ಮೇ 26ರಂದು ದರಗಳ ಪಟ್ಟಿ (ಪ್ರತಿ ಕೆ.ಜಿ.ಗೆ)
ಹಣ್ಣುಗಳ - ಸಗಟುದರ - ಹಾಪ್ಕಾಮ್ಸ್ ದರ

ಸೇಬು-110- 168
ದಾಳಿಂಬೆ-85-128
ದ್ರಾಕ್ಷಿ-55- 96
ಕಿತ್ತಳೆ45- 102
ಮೂಸಂಬಿ-45-50
ಮಾವು- 45-65
ಸಪೊಟ- 30-35
ಎಲ್ಲಕ್ಕಿ ಬಾಳೆಹಣ್ಣು 30-44

English summary
Lock down 4.0: Vegetable and fruits price skyrocketting in Bengaluru, prices doubled in retail market all across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X