ಬೆಲೆ ಏರಿಕೆ ನಡುವೆ ಟೊಮೆಟೋಗೆ ಬಿಳಿನೊಣದ ಕಾಟ, ಪರಿಹಾರಕ್ಕೆ ಸಲಹೆಗಳು
ಕೋಲಾರ, ಜುಲೈ 04; ಟೊಮಾಟೋ ಬೆಲೆ 120ರ ಗಡಿ ದಾಟಿದೆ. ಉತ್ತಮ ಲಾಭ ಸಿಗುತ್ತಿದೆ ಎಂದು ರೈತರು ಸಂತಸ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಳಿನೊಣದ ಕಾಟವು ಬೆಳೆಯನ್ನು ಕಾಡುತ್ತಿದೆ. ಈ ರೋಗ ನಿರ್ವಹಣೆಯ ಬಗ್ಗೆ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೋಲಾರ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿವೆ. ರೈತರು ಈ ಕೆಳಕಂಡ ಕ್ರಮಗಳನ್ನು ಕೈಗೊಂಡು ರೋಗವನ್ನು ಹತೋಟಿ ಮಾಡಬಹುದು ಎಂದು ಹೇಳಿವೆ.

ಇತ್ತೀಚಿನ ದಿನಗಳಲ್ಲಿ, ಕೋಲಾರ ಜಿಲ್ಲೆಯ ಟೊಮಾಟೋ ಬೆಳೆಯಲ್ಲಿ ಬಿಳಿ ನೊಣ ಹಾಗೂ ಎಲೆ ಮುಟುರು ರೋಗದ ತೀವ್ರತೆಯು ಹೆಚ್ಚಾಗಿರುವುದರಿಂದ ರೈತರು ರೋಗದ ಸಮಗ್ರ ನಿರ್ವಹಣೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ರೋಗ ನಿರ್ವಹಣೆ ಕ್ರಮಗಳು
* ರೋಗಮುಕ್ತ, ಆರೋಗ್ಯವಂತ ಸಸಿಗಳನ್ನು ನಾಟಿಗೆ ಬಳಸುವುದು
* ಸಸಿಮಡಿಗಳಲಿ 40 ಮೇಷ ನೈಲಾನ್ ಪರದೆಯನ್ನು ಹಾಕುವುದು
* ಇಮಿಡಾಕೊಪ್ರಿಡ್ 70 WS (10 ಗ್ರಾಂ, ಪ್ರತಿ ಕೆಜಿ, ಬೀಜಕ್ಕೆ) ಕೀಟನಾಶಕದಿಂದ ಬೀಜೋಪಚಾರ ಮಾಡುವುದು
* ಮುಖ್ಯ ಬೆಳೆ ಕ್ಷೇತ್ರದಲ್ಲಿ ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಿ ಬಿಳಿ ನೊಣಗಳನ್ನು ಹಿಮ್ಮೆಟ್ಟಿಸುವುದು.
* ಟೊಮಾಟೋ ಸಸಿಗಳನ್ನು ನಾಟಿ ಮಾಡುವ 30 ದಿನಗಳ ಮುಂಚಿತವಾಗಿ ಹೊಲದ ಸುತ್ತಲೂ ಮೆಕ್ಕೆ,
ಜೋಳ ಅಥವಾ ಸಜ್ಜೆ ಅಥವಾ ಮೇವಿನ ಜೋಳವನ್ನು ತಡೆ ಬೆಳೆಯಾಗಿ 2 ರಿಂದ 3 ಸಾಲು ದಟ್ಟವಾಗಿ ಬೆಳೆಯುವುದು. ಇದರಿಂದ ಬಿಳಿ ನೊಣಗಳ ಹರಡುವಿಕೆ ಕುಂಠಿತವಾಗುವುದರಿಂದ ಎಲೆ ಮುಟುರು ರೋಗದ ಪ್ರಮಾಣ ಕಡಿಮೆಯಾಗುತ್ತದೆ.
* ಪಾರ್ಥೇನಿಯಮ್, ಕಡ್ಲೆ ಮುಳ್ಳು, ಅಲ್ಪ ಭೇದಿ ಸೊಪ್ಪು, ಗಬ್ಬು ಸೊಪ್ಪು, ಸೀಮೆ ಎಣ್ಣೆ ಗಿಡ ಮುಂತಾದ ಕಳೆ ಗಿಡಗಳನ್ನು ಟೊಮಾಟೋ ಬೆಳೆಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಿತ್ತು ತೆಗೆಯುವುದು.
* ಒಂದು ಬಾರಿ ಟೊಮಾಟೋ ಬೆಳೆದ ನಂತರ ಬಿಳಿ ನೊಣಗಳ ತೀವ್ರತೆ ಕಡಿಮೆಯಿರುವ ಪರ್ಯಾಯ ಬೆಳೆಗಳಾದ ಮೆಕ್ಕೆ ಜೋಳ, ಸಜ್ಜೆ, ರಾಗಿ, ಮುಂತಾದವುಗಳನ್ನು ಬೆಳೆಯುವುದು.
* ಪ್ರತಿ ಎಕರೆಗೆ 10 ರಿಂದ 12 ಹಳದಿ ಅಂಟು ಬಲೆಗಳನ್ನು ತೂಗುಹಾಕುವುದು ಹಾಗೂ ಅವುಗಳನ್ನು 15 ದಿನಗಳಿಗೊಮ್ಮೆ ಬದಲಾಯಿಸುವುದು.
* ಆರಂಭಿಕ ಹಂತದಲ್ಲಿಯೇ ರೋಗಣೆ, ತುತ್ತಾದ ಸಸಿಗಳನ್ನು ಕಿತ್ತು ಸುಟ್ಟು, ಹಾಕುವುದರಿಂದ ನಂಜಾಣು ರೋಗ ಹರಡುವಿಕೆಯನ್ನು ನಿಯಂತ್ರಣದಲ್ಲಿಡಬಹುದು.
* Vegetable Special kg 5 ಗ್ರಾಂ/ ಲೀಟರ್ ಸಿಂಪಡಿಸುವುದರಿಂದ ಇಳುವರಿ ಕಡಿಮೆಯಾಗುವುದನ್ನು ತಡೆಯಬಹುದು.
* ಬಿಳಿ ನೊಣಗಳನ್ನು ನಿಯಂತ್ರಣದಲ್ಲಿಡಲು ನಾಟಿ ಮಾಡಿದ 15 ದಿನಗಳ ನಂತರ ಇಮಿಡಾಕ್ಲೋಪ್ರಿಡ್ 17.8 SL@ 0.4 ಮಿ. ಲೀ. ಅಥವ ಥೈಯೋಮಿತೋಗ್ಸಾಮ್ 25 WG @ 0.3 ಗ್ರಾಂ ಅಥವ ಫಿಪ್ರೋನಿಲ್ 5% SC @1.5 ಮಿ.ಶೇ, ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. Azadirachtin 1% @ 2.5 ಮಿ.ಲೀ/ ಲೀಟರ್ ಅನ್ನು ಇದರೊಂದಿಗೆ ಸಿಂಪಡಿಸುವುದು.
* ನಾಟಿ ಮಾಡಿದ 40 ದಿನಗಳ ನಂತರ ಇಮಿಡಾಕ್ಲೋಪ್ರಿಡ್ 70% WG @ 2.0 ಗ್ರಾಂ/ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications