Arecanut Price: ಅಡಿಕೆ ಮತ್ತು ಕೊಬ್ಬರಿ ದರ ಹೇಗಿದೆ

ಅಂತೂ ಇಂತೂ 55,000 ಗಡಿ ತಲುಪಿ ಅಡಿಕೆ ಬೆಳೆಗಾರರಲ್ಲಿ ಸ್ವಲ್ಪ ಆಶಾಭಾವನೆ ಮೂಡಿಸಿದ್ದ ರಾಶಿ ಅಡಿಕೆ ಬೆಲೆ ಮತ್ತೆ ಇಳಿಕೆಯಾಗಿದೆ. ಸದ್ಯ 50,000 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದು, ಮತ್ತೆ ಏರಿಕೆಯಾಗುವ ಬಗ್ಗೆ ಅಡಿಕೆ ಬೆಳೆಗಾರರು ಆಶಾಭಾವನೆ ಹೊಂದಿದ್ದಾರೆ.

ಚಿತ್ರದುರ್ಗ ಅಡಿಕೆ ಮಾರುಕಟ್ಟೆಯಲ್ಲಿ ಶನಿವಾರ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 47,600 ರೂಪಾಯಿ ಇದ್ದರೆ ಗರಿಷ್ಠ 48,000 ರೂಪಾಯಿಗೆ ಮಾರಾಟವಾಗಿದೆ. ಕೆಂಪುಗೋಟು ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹28,600 ಇದ್ದರೆ ಗರಿಷ್ಠ ₹29,000 ಆಗಿತ್ತು.

Latest Arecanut amp amp Copra Prices in Karnataka on July 21st

ಹೊಸನಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹47,699 ಮತ್ತು ಗರಿಷ್ಠ ₹52,011 ಆಗಿತ್ತು. ಕೆಂಪುಗೋಟು ಅಡಿಕೆ ಧಾರಣೆ ಕನಿಷ್ಠ ₹24,899 ಇದ್ದರೆ ಗರಿಷ್ಠ ಬೆಲೆ ₹32,111 ಆಗಿತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 26500 ರೂಪಾಯಿ ಇದ್ದು ಗರಿಷ್ಠ ಬೆಲೆ 50199 ರೂಪಾಯಿ ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಚಿತ್ರದುರ್ಗ ಅಪಿ ₹48,100 ₹48,500 ₹48,300
2 ಚಿತ್ರದುರ್ಗ ಬೆಟ್ಟೆ ₹35,100 ₹35,500 ₹35,300
3 ಚಿತ್ರದುರ್ಗ ಕೆಂಪು ಗೋಟು ₹28,600 ₹29,000 ₹28,800
4 ಚಿತ್ರದುರ್ಗ ರಾಶಿ ₹47,600 ₹48,000 ₹47,800
5 ಹೊಳಲ್ಕೆರೆ ರಾಶಿ ₹43,029 ₹51,829 ₹50,456
6 ಹೊಸನಗರ ಚಾಲಿ ₹28,929 ₹31,051 ₹30,585
7 ಹೊಸನಗರ ಕೆಂಪು ಗೋಟು ₹24,899 ₹32,111 ₹30,569
8 ಹೊಸನಗರ ರಾಶಿ ₹47,699 ₹52,011 ₹49,538
9 ಕೊಪ್ಪ ಬೆಟ್ಟೆ ₹28,199 ₹54,199 ₹50,285
10 ಕೊಪ್ಪ ಇಡಿ ₹32,199 ₹51,709 ₹47,109
11 ಕೊಪ್ಪ ಸರಕು ₹54,199 ₹74,099 ₹63,174
12 ಕುಮಟಾ ಫ್ಯಾಕ್ಟರಿ ₹9,099 ₹19,390 ₹18,799
13 ಮಡಿಕೇರಿ ಕಚ್ಚಾ ₹36,236 ₹38,244 ₹38,244
14 ಶಿವಮೊಗ್ಗ ಸರಕು ₹56,699 ₹84,610 ₹60,500
15 ಶಿವಮೊಗ್ಗ ರಾಶಿ ₹26,500 ₹50,199 ₹48,950
16 ಶಿವಮೊಗ್ಗ ಬೆಟ್ಟೆ ₹45,199 ₹54,300 ₹53,019
17 ಸಿದ್ದಾಪುರ ಬಿಳೆ ಗೊಟು ₹25,899 ₹29,489 ₹27,899
18 ಸಿದ್ದಾಪುರ ಚಾಲಿ ₹32,729 ₹35,099 ₹34,399
19 ಸಿದ್ದಾಪುರ ರಾಶಿ ₹43,899 ₹47,299 ₹46,899
20 ಶಿರಸಿ ಚಾಲಿ ₹33,399 ₹36,211 ₹35,174
21 ಶಿರಸಿ ರಾಶಿ ₹45,199 ₹47,439 ₹46,252
22 ಯಲ್ಲಾಪುರ ಕೆಂಪು ಗೋಟು ₹24,899 ₹31,757 ₹30,127
23 ಯಲ್ಲಾಪುರ ರಾಶಿ ₹43,899 ₹52,619 ₹49,169
24 ಯಲ್ಲಾಪುರ ತಟ್ಟಿ ಬೆಟ್ಟೆ ₹33,899 ₹43,319 ₹40,119

ಕೊಬ್ಬರಿ ಬೆಲೆ ಹೇಗಿದೆ?

ರಾಜ್ಯದಲ್ಲಿ ಕೊಬ್ಬರಿ ಬೆಲೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. 10 ಸಾವಿರದ ಗಡಿ ದಾಟಿದ್ದ ಕೊಬ್ಬರಿ ಬಳಿಕ ಅಲ್ಪಕುಸಿತ ಕಂಡಿದ್ದರು ಹೆಚ್ಚಿನ ಕುಸಿತವಾಗಿಲ್ಲ. ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ 8200 ರೂಪಾಯಿ ಗರಿಷ್ಠ 9510 ರೂಪಾಯಿ ಆಗಿತ್ತು. ಕೆಆರ್ ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 9455 ರೂಪಾಯಿ ಮತ್ತು ಗರಿಷ್ಠ 9455 ರೂಪಾಯಿ ಆಗಿತ್ತು.

ರಾಜ್ಯದ ಪ್ರಮುಖ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 9100 ರೂಪಾಯಿ ಆಗಿದ್ದರೆ ಗರಿಷ್ಠ 9750 ರೂಪಾಯಿ ಆಗಿತ್ತು.

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹8,200 ₹9,510 ₹9,024
2 ಅರಸೀಕೆರೆ ಬೇರೆ ₹4,500 ₹7,800 ₹6,800
3 ಕೆ.ಆರ್.ಪೇಟೆ ಕೊಬ್ಬರಿ ₹9,455 ₹9,455 ₹9,455
4 ಕೆ.ಆರ್.ಪೇಟೆ ಬೇರೆ ₹6,000 ₹6,000 ₹6,000
5 ತಿಪಟೂರು ಕೊಬ್ಬರಿ ₹9,100 ₹9,750 ₹9,500
6 ತುರುವೇಕೆರೆ ಕೊಬ್ಬರಿ ₹8,000 ₹9,500 ₹9,300

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+