Get Updates
Get notified of breaking news, exclusive insights, and must-see stories!

ಆ.8 ರಿಂದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ

ಬೆಂಗಳೂರು, ಜು. 13 : ಲಾಲಾ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ತಯಾರಿಗಳು ಆರಂಭಗೊಂಡಿವೆ. ಆ.8ರಿಂದ 15ರವರೆಗೆ ಈ ಬಾರಿಯ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮೈಸೂರು ಅರಮನೆ ಅಥವಾ ಶಿವಪುರದ ಸತ್ಯಾಗ್ರಹ ಸೌಧ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುತ್ತದೆ.

ರಾಜ್ಯ ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸೊಸೈಟಿಗಳು ಫಲಪುಷ್ಪ ಪ್ರದರ್ಶನದ ಸಿದ್ಧತೆಗಳನ್ನು ಆರಂಭಿಸಿವೆ. ಆ.8 ರಿಂದ 15ರವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಲಾಲ್‌ ಬಾಗ್ ಪಕ್ಕದಲ್ಲೇ ಇರುವ ಸಿದ್ದಾಪುರದ ನರ್ಸರಿ, ಊಟಿ, ನಂದಿಬೆಟ್ಟ ಹೀಗೆ ಹಲವೆಡೆಗಳಿಂದ ಅಪರೂಪದ ಆಕರ್ಷಕ ಹೂವುಗಳನ್ನು ಪ್ರದರ್ಶನಕ್ಕಾಗಿ ತರಿಸಲಾಗುತ್ತದೆ.

Lal Bagh

ಫಲಪುಷ್ಪ ಪ್ರದರ್ಶನವನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆಗಳು ಆರಂಭವಾಗಿವೆ. ಏಪ್ರಿಲ್‌ ತಿಂಗಳಿನಿಂದಲೇ ಅಲಂಕಾರಿಕ ಹೂವಿನ ಬೀಜಗಳನ್ನು ಬಿತ್ತಿ ಉಳುಮೆ ಮಾಡಲಾಗುತ್ತಿದೆ. ಕುಂಡಗಳಿಗೆ ಫಲವತ್ತಾದ ಮಣ್ಣು ಸೇರಿಸುವುದು, ಗೊಬ್ಬರ ಹಾಕಿ ಸಸಿಗಳನ್ನು ನೆಡುವುದು ಮುಂತಾದ ಕಾರ್ಯಗಳು ನಡೆಯುತ್ತಿವೆ. ಉದ್ಯಾನದ ಪ್ರವೇಶದ್ವಾರಗಳು ಹಾಗೂ ಪ್ರಮುಖ ತಾಣಗಳ ಅಲಂಕಾರಿಕ ಗಿಡಗಳನ್ನು ಟ್ರಿಮ್‌ ಮಾಡಿ ಅಂದಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ.

ಫಲಪುಷ್ಪ ಪ್ರದರ್ಶನದ ಜೊತೆಗೆ ಇದೇ ಮೊದಲ ಬಾರಿಗೆ ಲಾಲ್‌ ಬಾಗ್ ಮತ್ತು ತೋಟಗಾರಿಕೆ ಇಲಾಖೆಗೆ ಅವಿಸ್ಮರಣೀಯ ಕೊಡುಗೆ ನೀಡಿದ ಜಾನ್ ಕೆಮರಾನ್, ಡಾ. ಎಂ.ಎಚ್. ಮರಿಗೌಡ ಸೇರಿದಂತೆ ಸುಮಾರು 10 ಮಂದಿ ನಿರ್ದೇಶಕರ ಕೊಡುಗೆ, ಸಾಧನೆಗಳ ಬಗ್ಗೆ ಧ್ವನಿ ಪ್ರಸಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.[2012ರ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಚಿತ್ರಗಳು]

ಸುಮಾರು 20 ಸಾವಿರ ಹೂವಿನ ಕುಂಡಗಳನ್ನು ಫಲಪುಷ್ಪ ಪ್ರದರ್ಶನದಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ಆಂಥೋರಿಯಂ ಹೂವುಗಳು, ಗುಲಾಬಿ, ಜರ್ಬೇರಾ, ಆರ್ಕಿಡ್, ನಂದಿ ಗಿರಿಧಾಮದ ವಿಶೇಷ ಹೂವುಗಳು ಪ್ರದರ್ಶನದ ಅಂದವನ್ನು ಮತ್ತಷ್ಟು ಹೆಚ್ಚಿಸಲಿವೆ. [ಜುಲೈ 17 ರಂದು ತರಕಾರಿಗಳ ಪ್ರದರ್ಶನ]

200ರ ಸಂಭ್ರಮ : ಲಾಲ್ ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿಯ ದ್ವಿಶತಕದ ಸಂಭ್ರಮ. ಆದ್ದರಿಂದ ಅರ್ಥಪೂರ್ಣವಾಗಿ ಪ್ರದರ್ಶನವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಲಾಲ್‌ ಬಾಗ್ ಇತಿಹಾಸ ನೆನಪಿಸುವ 200 ಛಾಯಾಚಿತ್ರಗಳ ಪ್ರದರ್ಶನವನ್ನು ಈ ಬಾರಿ ಆಯೋಜಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+