ಕೋಲಾರದಿಂದ ಮಾವು ಹೊತ್ತು ದೆಹಲಿಗೆ ಹೊರಟ ಕಿಸಾನ್ ರೈಲು
ಕೋಲಾರ, ಜೂನ್ 29: ಕರ್ನಾಟಕದ ಕೋಲಾರ ಜಿಲ್ಲೆಯ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುತ್ತಿರುವ 'ಕಿಸಾನ್ ರೈಲ್'ಗೆ ಮಂಗಳವಾರ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
"ಅನ್ನದಾತ ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ 'ಕಿಸಾನ್ ರೈಲು' ಮಹತ್ವದ ಪಾತ್ರ ವಹಿಸುತ್ತಿದ್ದು, ನಮ್ಮ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,'' ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
ಬೇಗ ಕೆಟ್ಟುಹೋಗುವ ಕೃಷಿ ಉತ್ಪನ್ನಗಳನ್ನು ಉತ್ಪಾದನೆಯ ಸ್ಥಳದಿಂದ ದೇಶದ ವಿವಿಧ ಭಾಗಗಳಿಗೆ ಅಡಚಣೆ ಇಲ್ಲದೆ ಸಾಗಣೆ ಮಾಡಲು ಅನುಕೂಲ ಕಲ್ಪಿಸುವುದಕ್ಕಾಗಿ 'ಕಿಸಾನ್ ರೈಲು' ಪ್ರಾರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಬಜೆಟ್‌ನಲ್ಲಿ ಘೋಷಿಸಿದ್ದರು.

ಭಾರತದ ಸಾಗಣೆ ಕ್ಷೇತ್ರದಲ್ಲಿಯೇ ಅತ್ಯಂತ ಉತ್ತಮವಾದ ಸಂಪನ್ಮೂಲಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ರೈಲು ಸಂಪರ್ಕ ಜಾಲವನ್ನು ಉಪಯೋಗಿಸಿ ರೈತರ ಆದಾಯವನ್ನು ಹೆಚ್ಚಿಸುವ ಕ್ರಮವಾಗಿ ರೈಲ್ವೆ ಸಚಿವಾಲಯ ಆಗಸ್ಟ್ 2020ರಲ್ಲಿ ಕಿಸಾನ್ ರೈಲು ಅನ್ನು ಪರಿಚಯಿಸಿದೆ.
ಶೀಘ್ರವಾಗಿ ಕೆಟ್ಟುಹೋಗುವ ಕೃಷಿ ಉತ್ಪನ್ನಗಳಾದ ಹಾಲು, ಮಾಂಸ, ಮೀನು, ಹಣ್ಣುಗಳು ಮತ್ತು ತರಕಾರಿಗಳು ಇತ್ಯಾದಿಯನ್ನು ರಿಯಾಯಿತಿ ದರದಲ್ಲಿ ಸಾಗಣೆ ಮಾಡಲು ಮತ್ತು ದೇಶದಲ್ಲಿ ಇದುವರೆಗೆ ಸಂಪರ್ಕರಹಿತವಾಗಿದ್ದ ಮಾರುಕಟ್ಟೆಗಳನ್ನು ತಲುಪಲು ಇದರಿಂದ ರೈತರಿಗೆ ಅನುಕೂಲವಾಗಿದೆ.

ಕಿಸಾನ್ ರೈಲ್‌ನ ವೈಶಿಷ್ಟ್ಯತೆ
1. ಹಣ್ಣುಗಳು ಮತ್ತು ತರಕಾರಿಗಳ ಸಾಗಾಣಿಕೆಗಾಗಿ ಸಾಗಣೆ ದರದಲ್ಲಿ ಶೇ.50ರಷ್ಟು ಸಬ್ಸಿಡಿ. (Operation Greens- Top to Tatal ಯೋಜನೆ ಅಡಿಯಲ್ಲಿ ಆಹಾರ ಸಂಸ್ಕರಣೆ ಕೈಗಾರಿಕಾ ಸಚಿವಾಲಯವು ಇದನ್ನು ಭರಿಸುವುದು)
2. ದೂರದ, ದೊಡ್ಡ ಮತ್ತು ಅಧಿಕ ಲಾಭದಾಯಕ ಮಾರುಕಟ್ಟೆಗಳನ್ನು ತಲುಪಲು ರೈತರಿಗೆ ಅನುಕೂಲ.
3. ತ್ವರಿತ ರವಾನೆ ಸೌಲಭ್ಯದಿಂದ ಸಾಗಣೆ ಸಮಯದಲ್ಲಿ ಸರಕುಗಳಿಗೆ ಕನಿಷ್ಠ ಹಾನಿ.

4. ನಿಗದಿತ ಸಮಯದ ರೈಲುಗಳಲ್ಲಿ ವಿವಿಧ ಪದಾರ್ಥಗಳಲ್ಲಿ ವಿಭಿನ್ನ ರವಾನೆದಾರರು ಮತ್ತು ವಿಭಿನ್ನ ಗ್ರಾಹಕರು ಬಹು ನಿಲುಗಡೆ ವ್ಯವಸ್ಥೆಯೊಡನೆ ಸಾಗಣೆ ಮಾಡುವ ಸೌಲಭ್ಯ.
ನೈಋತ್ಯ ರೈಲ್ವೆಯು 19ನೇ ಜೂನ್ 2021ರಿಂದ ಐದು ಕಿಸಾನ್ ರೈಲು ಸೇವೆಗಳನ್ನು ಪ್ರಾರಂಭಿಸಿದೆ. ಸುಮಾರು 1250 ಮೆಟ್ರಕ್ ಟನ್‌ಗಳ (ರೈಲು ಒಂದರಲ್ಲಿ 250) ಮಾವು ಸಾಗಣೆ ಮಾಡಿದೆ. ಬೇಡಿಕೆಯ ಮೇಲೆ ಅವಲಂಬಿತವಾಗಿ ಮಾವು ಸಾಗಣೆಗೆ ಪ್ರತೀ 2- 3 ದಿನಗಳಲ್ಲಿ ಕನಿಷ್ಠ 1 ಕಿಸಾನ್ ರೈಲು ಓಡಿಸಲು ಎಸ್‌ಡಬ್ಲ್ಯೂಆರ್ ಉದ್ದೇಶಿಸಿದೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications