ಪಂಜಾಬ್ ಮಾದರಿಯಲ್ಲಿ ರಾಜ್ಯ ರೈತರ ಸಾಲಮನ್ನಾ, ಕರಡು ಪ್ರತಿ ಸಿದ್ಧ: ಮೊಯಿಲಿ
ಬೆಂಗಳೂರು, ಜೂನ್ 21: ಕರ್ನಾಟಕದಲ್ಲಿ, ಪಂಜಾಬ್ ರಾಜ್ಯದ ಮಾದರಿಯಲ್ಲಿ ಸಾಲಮನ್ನಾ ಮಾಡಲು ನಿರ್ಣಯ ಕೈಗೊಳ್ಳಲಾಗಿದ್ದು, ಕರಡು ಪ್ರತಿ ಸಿದ್ಧವಾಗಿದೆ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದ್ದಾರೆ.
ನಿನ್ನೆ ರಾತ್ರಿ ಒಂದುವರೆಗಂಟೆಗಳ ಸುಧೀರ್ಘ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಸಾಲಮನ್ನಾ ಯಶಸ್ವಿಯಾಗಿದೆ ಇಲ್ಲಿಯೂ ಅದೇ ರೀತಿಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದರು.
ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆಯ ಪ್ರಥಮ ಕರಡು ಪ್ರತಿ ಸಹ ಸಿದ್ಧವಾಗಿದ್ದು ಬಜೆಟ್‌ನಲ್ಲಿ ಘೋಷಣೆಗಳು ಹೊರಬೀಳಲಿವೆ ಎಂಬ ಸುಳಿವನ್ನು ವೀರಪ್ಪ ಮೋಯ್ಲಿ ನೀಡಿದರು.

ಮೊದಲ ಹಂತದಲ್ಲಿ ಸಹಕಾರಿ ವಲಯದಲ್ಲಿ ರೈತರು ಮಾಡಿರುವ 9 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಇದರಿಂದ 40 ಲಕ್ಷ ರೈತರು ಅನುಕೂಲ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ಹಿರಿಯ ನಾಗರೀಕರಿಗೆ 6 ಸಾವಿರ ಮಾಸಾಶನ ನೀಡುವ ಬಗ್ಗೆ ಜೆಡಿಎಸ್ ನಾಯಕರು ಪ್ರಸ್ತಾಪ ಮಾಡಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೊಯ್ಲಿ ಮಾಹಿತಿ ನೀಡಿದರು.












Click it and Unblock the Notifications