Karnataka Dam Water Level: ಜೂನ್ 16 ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ಸಂಪೂರ್ಣ ವಿವರ
ಬೆಂಗಳೂರು, ಜೂನ್ 16: ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಉತ್ತಮ ಮಳೆಯಾಗುತ್ತಿದೆ. ಮಳೆ ಬರುತ್ತಿರುವ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ. ಶಿವಮೊಗ್ಗದ ತುಂಗಾ ಜಲಾಶಯ ಭರ್ತಿಯಾಗಿದೆ.
ಜೂನ್ 19ರ ಬಳಿಕ ಮಳೆರಾಯನ ಆರ್ಭಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಈಗಾಗಲೇ ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಹಾರಂಗಿ, ಆಲಮಟ್ಟಿ, ತುಂಗಭದ್ರಾ, ಘಟಪ್ರಭ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಜೂನ್ 16 ರಂದು ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೂನ್ 16 ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ
1. ಕೆಆರ್‌ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ -38.04 ಮೀಟರ್
ಇಂದಿನ ನೀರಿನ ಮಟ್ಟ- 13.96 ಟಿಎಂಸಿ
ಒಳಹರಿವು - 2426 ಕ್ಯೂಸೆಕ್
ಹೊರಹರಿವು - 456 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 519.60 ಮೀಟರ್
ಇಂದಿನ ನೀರಿನ ಮಟ್ಟ - 26.31 ಟಿಎಂಸಿ
ಒಳಹರಿವು - 13335 ಕ್ಯೂಸೆಕ್
ಹೊರಹರಿವು - 430 ಕ್ಯೂಸೆಕ್
3. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 871.38 ಮೀಟರ್
ಇಂದಿನ ನೀರಿನ ಮಟ್ಟ - 3.22 ಟಿಎಂಸಿ
ಒಳಹರಿವು -408 ಕ್ಯೂಸೆಕ್
ಹೊರಹರಿವು - 200 ಕ್ಯೂಸೆಕ್

4. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 ಮೀಟರ್
ಇಂದಿನ ನೀರಿನ ಮಟ್ಟ- 6.02 ಟಿಎಂಸಿ
ಒಳಹರಿವು - 1676 ಕ್ಯೂಸೆಕ್
ಹೊರಹರಿವು - 354 ಕ್ಯೂಸೆಕ್
5. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 633.80 ಮೀಟರ್
ಇಂದಿನ ನೀರಿನ ಮಟ್ಟ - 6.54 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44 ಮೀಟರ್
ಇಂದಿನ ನೀರಿನ ಮಟ್ಟ - 14.74 ಟಿಎಂಸಿ
ಒಳಹರಿವು - 314 ಕ್ಯೂಸೆಕ್
ಹೊರಹರಿವು - 1749 ಕ್ಯೂಸೆಕ್
7. ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 696.13 ಮೀಟರ್
ಇಂದಿನ ನೀರಿನ ಮಟ್ಟ - 8.77 ಟಿಎಂಸಿ
ಒಳಹರಿವು - 1530 ಕ್ಯೂಸೆಕ್
ಹೊರಹರಿವು - 300 ಕ್ಯೂಸೆಕ್
8. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 657.73 ಮೀಟರ್
ಇಂದಿನ ನೀರಿನ ಮಟ್ಟ - 15.05 ಟಿಎಂಸಿ
ಒಳಹರಿವು - 967 ಕ್ಯೂಸೆಕ್
ಹೊರಹರಿವು - 342 ಕ್ಯೂಸೆಕ್
9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 662.91 ಮೀಟರ್
ಇಂದಿನ ನೀರಿನ ಮಟ್ಟ - 7.98 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 223 ಕ್ಯೂಸೆಕ್












Click it and Unblock the Notifications