ಹುತ್ತರಿ ಹಬ್ಬಕ್ಕೆ ಜಲ್ ಚಂಡಮಾರುತದ ಕಾರ್ಮೋಡ

Huttari festival
ಮಡಿಕೇರಿ, ನ. 9 : ಕೊಡವ ಜನಾಂಗದ ಹುತ್ತರಿ ಹಬ್ಬದಾಚರಣೆ ಹತ್ತಿರ ಬರುತ್ತಿದ್ದಂತೆ ಮಡಿಕೇರಿಯ ರೈತರು, ಬೆಳೆಗಾರರ ಮೊಗದಲ್ಲಿ ಕಾರ್ಮೋಡ ಮುಸುಕಿದಂತಾಗಿದೆ. 'ಜಲ್' ಚಂಡಮಾರುತದ ಹಾವಳಿಯಿಂದಾಗಿ ಕಾಫಿ ಮತ್ತು ಬತ್ತದ ಬೆಳೆಗಳೆಲ್ಲ ಹಾಳಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಹವಾಮಾನದ ದೃಷ್ಟಿಯಿಂದ ಅತ್ಯಂತ ಆಹ್ಲಾದಕರವಾಗಿರುತ್ತವೆ. ಹಿತವಾಗಿ ಮೈಗೆ ಕಚಗುಳಿ ಇಡುವ ಮಂಜು ಮುಸುಕಿದ ತಣ್ಣನೆಯ ವಾತಾರವಣ ಪ್ರವಾಸಿಗರ ದೃಷ್ಟಿಯಿಂದಲೂ ಹಿತಕರವಾಗಿರುತ್ತದೆ. ಆದರೆ, ಅಚಾನಕ್ಕಾಗಿ ಸುರಿದ ಭಾರೀ ಮಳೆ ಸಾವಿರಾರು ಎಕರೆಗಳಷ್ಟು ಬೆಳೆಗಳನ್ನು ಹಾಳು ಮಾಡಿದ್ದಷ್ಟೇ ಅಲ್ಲ ವ್ಯಾಪಾರ ಕೂಡ ಡಲ್ ಆಗುವಂತೆ ಮಾಡಿದೆ.

ಇದೇ ನವೆಂಬರ್ 22ರಂದು ಹುತ್ತರಿ ಹಬ್ಬ ಆಚರಿಸಲಾಗುತ್ತಿದೆ. ಹುತ್ತರಿ ಎಂದರೆ ಹೊಸ ಬತ್ತ ಎಂದರ್ಥ. ಈ ಮಹತ್ವದ ಹಬ್ಬಕ್ಕಾಗಿ ಕೊಡವರು ಸಾಕಷ್ಟು ಸಿದ್ಧತೆಗಳನ್ನೂ ನಡೆಸಿದ್ದರು. ಜಲ್ ಚಂಡಮಾರುತ ಎಲ್ಲ ಸಿದ್ಧತೆಗಳಿಗೆ ಬ್ರೇಕ್ ಹಾಕಿದೆ. ಬಿಸಿಲು ಅಪರೂಪವಾಗಿರುವುದರಿಂದ ಮಳೆಗೆ ಹಾಳಾಗದೆ ನಿಂತಿರುವ ಬೆಳೆಯನ್ನು ಕಟಾವು ಮಾಡಿ ಬೆಳೆಯನ್ನು ಒಣಗಿಸಲು ರೈತರು ಕಷ್ಟಪಡುತ್ತಿದ್ದಾರೆ.

ಕಾಫಿ ಬೆಳೆಗಾರರು ಕೂಡ ಇದೇ ತೊಂದರೆಯನ್ನು ಎದುರಿಸುತ್ತಿದ್ದಾರೆ. ಕಾಫಿ ಬೀಜಗಳನ್ನು ಒಣಗಿಸಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಕಿತ್ತಿರುವ ಚೆರ್ರಿ ಕೆಂಪು ಬಣ್ಣದ ಬೀಜಗಳು ಕಪ್ಪಾಗುತ್ತಿವೆ. ಇದರಿಂದಾಗಿ, ಕಾಫಿಯ ಬೆಲೆಯಲ್ಲಿ ಭಾರೀ ಕುಸಿತ ಕಾಣಬಹುದು ಎಂಬ ಆತಂಕಕ್ಕೆ ಬೆಳೆಗಾರರು ಈಡಾಗಿದ್ದಾರೆ. ಕೆಲ ಎಸ್ಟೇಟುಗಳಲ್ಲಿ ಕರಿಮೆಣಸು ಸಂಪೂರ್ಣ ಹಾಳಾಗಿದೆ. ಕುಶಾಲನಗರ ಮತ್ತು ಪಿರಿಯಾಪಟ್ಟಣದಲ್ಲಿ ಜೋಳ ಮತ್ತು ರಾಗಿ ಬೆಳೆಗಳು ಕೂಡ ನೆಲಸಮವಾಗಿವೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+