ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದ ಪ್ರಖ್ಯಾತ ಹಲಸಿನ ತೋಟದಲ್ಲೀಗ ಹಲಸಿನ ಖಾದ್ಯಗಳೂ ರೆಡಿ...

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 12: ಇದು ಏಷ್ಯಾದಲ್ಲೇ ಪ್ರಖ್ಯಾತಿ ಪಡೆದಿರುವ ಹಲಸಿನ ತೋಟ. ಈ ಪ್ರಖ್ಯಾತಿಗೂ ಒಂದು ಕಾರಣವಿದೆ. ಆಧುನಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದಿರುವ ಈ ತೋಟದ ಹಣ್ಣುಗಳು ತನ್ನ ವಿಶಿಷ್ಟ ಸ್ವಾದದಿಂದಲೇ ಬೇಡಿಕೆ ಕುದುರಿಸಿಕೊಂಡಿರುವಂಥವು. ಈ ಹಲಸಿನ ಹಣ್ಣಿನ ರುಚಿಗೆ ಫಿದಾ ಆಗದವರೇ ಇಲ್ಲ.

Recommended Video

Bengaluru corona cases are getting scarier everyday | Bengaluru | Oneindia Kannada

40 ಎಕರೆ ಬೃಹತ್ ಪ್ರದೇಶದಲ್ಲಿ ಬೆಳೆಯಲಾಗಿರುವ ಈ ಹಲಸಿನ ಮರಗಳು ಇರುವುದು ಕೋಲಾರ ತೋಟಗಾರಿಕಾ ಮಹಾ ವಿಶ್ವವಿದ್ಯಾಲಯದ ಆವರಣದಲ್ಲಿ. ಕೋಲಾರ ನಗರಕ್ಕೆ ಹೊಂದಿಕೊಂಡಂತೆ ಇರುವ ಈ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಬೆಳೆಯುತ್ತಿರುವ ಈ ಹಲಸಿನ ಹಣ್ಣಿಗೆ ಭಾರೀ ಬೇಡಿಕೆ ಇದೆ. ಈ ತೋಟದ ಹೆಗ್ಗಳಿಕೆ ಹಿಂದೆ ಒಂದು ವಿಶೇಷ ಸಂಗತಿಯೂ ಇದೆ. ಹಲಸಿನ ಹಣ್ಣು ಮಾತ್ರವಲ್ಲ, ಹಲಸಿನ ಸಂಸ್ಕರಣಾ ಘಟಕವೂ ಇಲ್ಲಿದ್ದು, ಹಲಸಿನ ವಿವಿಧ ಖಾದ್ಯಗಳ ತಯಾರಿಯೂ ಇಲ್ಲಿ ನಡೆಯುತ್ತಿದೆ...

 ಏಷ್ಯಾದಲ್ಲಿಯೇ ಅತಿ ದೊಡ್ಡ ಹಲಸಿನ ತೋಟ

ಏಷ್ಯಾದಲ್ಲಿಯೇ ಅತಿ ದೊಡ್ಡ ಹಲಸಿನ ತೋಟ

ಏಷ್ಯಾದಲ್ಲಿಯೇ ಅತಿ ದೊಡ್ಡ ಹಲಸಿನ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಲಸಿನ ತೋಟದಲ್ಲಿ 1800ಕ್ಕೂ ಹೆಚ್ಚು ಹಲಸಿನ ಮರಗಳಿವೆ. ಏಷ್ಯಾದಲ್ಲಿ, ಒಂದೇ ಸ್ಥಳದಲ್ಲಿ ಅತಿಹೆಚ್ಚು ಹಲಸಿನ ಮರಗಳನ್ನು ಹೊಂದಿರುವ ತೋಟ ಎಂಬ ಹೆಗ್ಗಳಿಕೆಯೂ ಈ ತೋಟಕ್ಕಿದೆ.

ಹಲಸಿನ ಹಣ್ಣಿನ ಚಾಕೋಲೇಟ್: ಕೊಕೊ ನಂತರ ಕ್ಯಾಂಪ್ಕೋ ಹೊಸ ಸಾಹಸಹಲಸಿನ ಹಣ್ಣಿನ ಚಾಕೋಲೇಟ್: ಕೊಕೊ ನಂತರ ಕ್ಯಾಂಪ್ಕೋ ಹೊಸ ಸಾಹಸ

 39 ವಿವಿಧ ಜಾತಿಯ ಹಲಸಿನ ಮರ

39 ವಿವಿಧ ಜಾತಿಯ ಹಲಸಿನ ಮರ

ಈ ನಲವತ್ತು ಎಕರೆ ಪ್ರದೇಶದಲ್ಲಿ ಸುಮಾರು 39 ವಿವಿಧ ಜಾತಿಯ ಹಲಸಿನ ಮರಗಳನ್ನು ಬೆಳೆಸಲಾಗಿದೆ. ಜಾಣಗೆರೆ, ತೂಗುಗೆರೆ, ಸಿಂಗಾಪುರ ಹಸಲು, ಚಂದ್ರಹಲಸು, ಅಂಟಿಲ್ಲದ ಹಲಸು ಹೀಗೆ ವಿವಿಧ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಅದೇ ಈ ತೋಟದ ವೈಶಿಷ್ಯವೂ ಆಗಿದೆ.

 ಹಲಸು ಸಂಸ್ಕರಣಾ ಘಟಕ ಸ್ಥಾಪನೆ

ಹಲಸು ಸಂಸ್ಕರಣಾ ಘಟಕ ಸ್ಥಾಪನೆ

ಇಷ್ಟು ವರ್ಷಗಳಲ್ಲಿ ಇಲ್ಲಿ ಬೆಳೆಯಲಾಗುತ್ತಿದ್ದ ಹಲಸನ್ನು ಮಾರಾಟ ಮಾಡಲಾಗುತ್ತಿತ್ತು. ಇದೀಗ ವಿಶೇಷವಾಗಿ ಹಲಸು ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ, ಹಲಸಿನ ವಿವಿಧ ಖಾದ್ಯಗಳನ್ನು, ವಿವಿಧ ಉತ್ಪನ್ನಗಳನ್ನು ಇಲ್ಲೇ ತಯಾರು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಹಲಸಿನ ಹಣ್ಣಿನ ಐಸ್ ಕ್ರೀಂ, ಬರ್ಫಿ, ಚಿಪ್ಸ್, ಜಾಮ್, ಪಲ್ಪಿ ಜ್ಯೂಸ್ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸುವ ಮೂಲಕ ಹಲಸಿನ ಮಹತ್ವವನ್ನು ಪ್ರಚುರಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿದ ವಿಟ್ಲದ ಅಪರ್ಣಾಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿದ ವಿಟ್ಲದ ಅಪರ್ಣಾ

 ಪ್ರವಾಸಿ ಕೇಂದ್ರ ಮಾಡುವ ಚಿಂತನೆ

ಪ್ರವಾಸಿ ಕೇಂದ್ರ ಮಾಡುವ ಚಿಂತನೆ

ಅಲ್ಲದೆ ಈ ಹಲಸಿನ ತೋಟವನ್ನು ಒಳ್ಳೆಯ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಕುರಿತು ಚಿಂತನೆ ಮಾಡಲಾಗಿದೆ. ಇಷ್ಟು ದಿನ ಕೇವಲ ಹಳ್ಳಿಯ ಹಣ್ಣಾಗಿದ್ದ ಹಲಸಿನ ಹಣ್ಣಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಕುದುರಿಸುವ ಹಲವು ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಆ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಕರ್ನಾಟಕದ ಈ ಹಲಸಿನ ತೋಟ ಇನ್ನಷ್ಟು ಮನೆ ಮಾತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

English summary
Jack fruit processing plant has been started in asia's largest jackfruit farm in kolar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X