ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ. ಎಂಡಿಎನ್ ಚಳವಳಿ ಮಾರ್ಗದ ಕುತೂಹಲಕಾರಿ ಘಟನೆಗಳು

|
Google Oneindia Kannada News

ಇಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಜನ್ಮದಿನ. ತಮ್ಮ ವಿಚಾರ ಲಹರಿ, ರೈತ ಪರ ನಿಲುವಿನಿಂದ ಸಮಾಜದ ಗಮನ ಸೆಳೆದಿದ್ದ ಅವರು, ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿಯೂ ಹೌದು. ಹಸಿರು ಸೇನಾನಿ ಎಂದೇ ಕರೆಸಿಕೊಂಡಿದ್ದ ಅವರು, ರೈತರು ಸರ್ಕಾರದ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಸದಾ ಪ್ರತಿಪಾದಿಸುತ್ತಿದ್ದರು.

ಪ್ರಸ್ತುತ ಕೇಂದ್ರ ಪರಿಚಯಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ದೇಶಾದ್ಯಂತ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ನಂಜುಂಡಸ್ವಾಮಿ ಅವರ ನಿಲುವು ಅತಿ ಅವಶ್ಯಕವೆನಿಸಿದೆ. ಪ್ರೊ. ಎಂಡಿಎನ್ ಚಳವಳಿ ಮಾರ್ಗದ ಕೆಲವೊಂದು ಕುತೂಹಲಕಾರಿ ಘಟನೆಗಳು ಇಲ್ಲಿವೆ...

'ನಮ್ದು': ನಮ್ಮ ಬೆಳೆ... ನಮ್ಮ ಬೆಲೆ... ನಮ್ಮ ಮಾರುಕಟ್ಟೆ.. 'ನಮ್ದು': ನಮ್ಮ ಬೆಳೆ... ನಮ್ಮ ಬೆಲೆ... ನಮ್ಮ ಮಾರುಕಟ್ಟೆ..

ಪತ್ರಕರ್ತೆ: Mr. Professor You have broken Mansanto.., You have broken Kargil.., You have broken KFC.., and you tell us your movement believes in nonviolence... What right you have to say so...?
MDN: ಒಂದೆರಡು ಸೆಕೆಂಡ್ ಮೌನ. See. You are scribbling something in your note pad, If I grab your pen and make you not to write.., if I break your glasses and make you not to see properly .., it is non-violent direction action against you. If I slap you, it's a violence. You should understand the difference between violence and nonviolent direct action.
ಈಗ ಪತ್ರಕರ್ತೆ ಮೌನ.

Interesting Incidents Of Prof MN Nanjundaswamy Farmer Movements

**
ಅದೊಂದು ದಿನ ಚಾಮರಾಜನಗರದ ರೈತ ಸಂಘದ ಕಾರ್ಯಕರ್ತ (ಪ್ರೊ ಶಾಲು ಹಾಕಿ ಚಳವಳಿಯಲ್ಲಿ ತೊಡಗಿರುವವರನ್ನು ರೈತ ಸತ್ಯಾಗ್ರಹಿಗಳು ಎಂದು ಕರೆಯುತ್ತಿದ್ದರು. ಎಲ್ಲರಿಗೂ ಅರ್ಥವಾಗಲೆಂದು ಕಾರ್ಯಕರ್ತ ಎಂದು ಬರೆದಿರುವೆ) ಎಂಡಿಎನ್ ಅವರ ಮನೆಯ ಬಳಿ ಅವರ ಮುಂದೆ ಶಥಪಥ ತುಳಿದಾಡುತ್ತಿದ್ದ. ಪ್ರೊ ಏನೆಂದರು. ಆತ ಸಾರ್ ನಮ್ಮೂರತ್ರ ಕ್ವಾರೆ ನಡೀತಿದೆ. Illegal. ಅದನ್ನ ನಿಲ್ಸೋಕೆ ಹೋರಾಟ ಮಾಡ್ಬೇಕು. ಸರಿ ಮಾಡಿ ಎಂದರು ಪ್ರೊ. ಅದಕ್ಕವರು ಸಾರ್ ಆ ಕ್ವಾರೆ ಮಾಡೋವ್ರಿಗೆ ಡಿಸಿ ಎಸ್ಪಿ ಎಲ್ಲಾ ಸಪೋರ್ಟ್‌ ಇದೆ ಅಂದನು.

ನೋಡಿ ಆ ಡಿಸಿ ಎಸ್ಪಿಗೆ ನಾವು ಸಂಬಳ ಕೊಡೋದು ಕ್ವಾರೆ ಮಾಡೋಕೆ ಸಪೋರ್ಟ್ ಮಾಡಿ ಅಂತಲ್ಲಾ. ಹಂಗೇನಾದ್ರೂ ಮಾಡಿದ್ರೆ ಕಪಾಳಕ್ಕೊಡೀರಿ ಅಂದರು ಸಿಟ್ಟಲ್ಲಿ.

ದೆಹಲಿ ರೈತ ಚಳುವಳಿ: ಮರಬಗ್ಗಿ ಶಿರದ ಮೇಲೆ ಒರಗಿತು ಹರಿಯೇ…!ದೆಹಲಿ ರೈತ ಚಳುವಳಿ: ಮರಬಗ್ಗಿ ಶಿರದ ಮೇಲೆ ಒರಗಿತು ಹರಿಯೇ…!

ಆ ಕಾರ್ಯಕರ್ತ ಹೋದ ಎಸ್ ಪಿಗೆ ಕಪಾಳಕ್ಕೆ ಹೊಡೆದು ಅರೆಸ್ಟ್ ಆದ. ಆ ಮುಗ್ದ ಕಾರ್ಯಕರ್ತ ಪ್ರೊ ಮಾತನ್ನ ಯಥಾವತ್ತಾಗಿ ತೆಗೆದುಕೊಂಡು ಫಜೀತಿಗೆ ಸಿಲುಕಿದ್ದ. ಮತ್ತೆ ಪ್ರೊ. ಸ್ಥಳಕ್ಕೆ ಹೋಗಿ ಎಲ್ಲಾ ವಾತಾವರಣ ತಿಳಿ ಮಾಡಿ. ಕಾರ್ಯಕರ್ತನನ್ನು ಕರೆತಂದರೆನ್ನಿ.

**

Interesting Incidents Of Prof MN Nanjundaswamy Farmer Movements

ಹೊಸದುರ್ಗ ಕೋರ್ಟಿನಲ್ಲಿ ರೈತ ಸಂಘದ ಕಾರ್ಯಕರ್ತರ ಯಾವುದೋ ಒಂದು ಕೇಸ್ ವಿಚಾರಣೆ ಇತ್ತು. ಕಾರ್ಯಕರ್ತರೆಲ್ಲರೂ ಕೋರ್ಟಿಗೆ ಹಾಜರಾದರು. ಎಂದಿನಂತೆ ಅವರ ಹೆಗಲ ಮೇಲೆ ಹಸಿರು ಶಾಲುಗಳಿದ್ದವು. ಕೋರ್ಟ್ ಹಾಲಿಗೆ ಹಾಜರಾದ ನ್ಯಾಯಾಧೀಶರು ಎಲ್ಲಾ ಕಾರ್ಯಕರ್ತರಿಗೂ ಶಾಲು ತೆಗೆದು ಬರಲು ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ. ಒಬ್ಬ ಕಾರ್ಯಕರ್ತ ಈ ವಿಷಯವನ್ನು ಪ್ರೊ. ಎಂಡಿಎನ್ ಅವರಿಗೆ ಮುಟ್ಟಿಸುತ್ತಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಪ್ರೊ. ಅಲ್ಲೇನು ಗಲಾಟೆ ಮಾಡಬೇಡಿ. ನಾನು ಬರುತ್ತೇನೆ ಎಂದು ಮಧ್ಯಾಹ್ನದ ವೇಳೆಗೆ ತಲುಪಿದ್ದಾರೆ.
ನ್ಯಾಯಾಧೀಶರು ಅವರ ಕೊಠಡಿಯೊಳಗಿದ್ದಾರೆ. ಪ್ರೊ ಅಲ್ಲಿಗೇ ನೇರ ಹೋದವರು (ಯಾವ ಅಡಚಣೆಯೂ ಇಲ್ಲದೆ) ಯಾವ ಕಾನೂನಿನಲ್ಲಿ ಶಾಲು ಹಾಕಬಾರದೆಂದಿದೆ ಎಂದು ಜಡ್ಜ್‌ "ವಿಚಾರಣೆ" ಆರಂಭಿಸಿದ್ದಾರೆ. ತಬ್ಬಿಬ್ಬಾದ ಜಡ್ಜ್‌ಗೆ ಮಾತಿಲ್ಲ. See you are young man. I am a law professor. Do you want me to speak to chief justice regarding your action.," ನ್ಯಾಯಾಧೀಶರು ಸುಮ್ಮನಾದರು. ಎಲ್ಲಾ ರೈತ ಸಂಘದ ಕಾರ್ಯಕರ್ತರು ಶಾಲು ಹೆಗಲಿಗೇರಿಸಿಕೊಂಡೇ ಮಧ್ಯಾಹ್ನದ ವಿಚಾರಣೆಯಲ್ಲಿ ಭಾಗಿಯಾದರು.
English summary
Today is farmer leadder Prof MD Nanjundaswamy birth anniversary. Here is some interesting incidents of his farmer movements...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X