• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ,ಇರಾನ್ ಸಹಕಾರ ಕೇಳಿದ ಭಾರತ

|

ನವದೆಹಲಿ, ಮೇ 22: ಕೊರೊನಾದ ಜೊತೆ ಜೊತೆಗೆ ಮರುಭೂಮಿ ಮಿಡತೆ ಭಯ ಹೆಚ್ಚಾಗಿದೆ. ಈ ಮಿಡತೆಗಳು ವೇಗವಾಗಿ ವೃದ್ಧಿಯಾಗುತ್ತಿದ್ದು ಇದು ಗಂಭೀರ ಅಪಾಯವನ್ನುಂಟುಮಾಡಲಿದೆ ಎಂದು ಇದರ ತಡೆಗೆ ಸಂಘಟಿತ ಸಹಕಾರ ನೀಡುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ಗೆ ಪ್ರಸ್ತಾವನೆ ಸಲ್ಲಿಸಿದೆ.

   ನಾವೇನ್ ಪಾಕಿಸ್ಥಾನದವ್ರಾ? ವಿದೇಶದಲ್ಲಿರೋರು ಬರಬಹುದು ನಾವು ಬರೋ ಹಾಗಿಲ್ವಾ? | Mumbai | Karnataka

   ಬಲೂಚಿಸ್ತಾನದ ಸಂತಾನೋತ್ಪತ್ತಿ ಪ್ರದೇಶಗಳಿಂದ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಮರುಭೂಮಿ ಮಿಡತೆಗಳ ಗುಂಪುಗಳು ಭಾರತಕ್ಕೆ ವಲಸೆ ಹೋಗುತ್ತಿವೆ.

   ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನದ ಕ್ರಿಶ್ಚಿಯನ್ ಸ್ಮಶಾನ ಧ್ವಂಸಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನದ ಕ್ರಿಶ್ಚಿಯನ್ ಸ್ಮಶಾನ ಧ್ವಂಸ

   ಭಾರತದಲ್ಲಿ, ಕಳೆದ ವಾರಗಳಲ್ಲಿ ಹೆಚ್ಚು ಮಿಡತೆಯ ಗುಂಪುಗಳು ಮತ್ತು ಸಣ್ಣ ಹಿಂಡುಗಳು ಪಾಕಿಸ್ತಾನದಿಂದ ರಾಜಸ್ಥಾನದ ಜೋಧಪುರವನ್ನು ತಲುಪಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

   ವಿನಾಶಕಾರಿ ವಲಸೆ ಕೀಟಗಳು ಆಫ್ರಿಕಾ ಸೇರಿದಂತೆ ಜಗತ್ತಿನ ಹಲವಾರು ಭಾಗಗಳಲ್ಲಿ ಆಹಾರ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಿದೆ. ಇದರ ತಡೆಗಟ್ಟುವಿಕೆಗೆ ಸಮನ್ವಯದ ಸಹಕಾರ, ಪ್ರತಿಕ್ರಿಯೆ ನೀಡುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ನ್ನು ಕೇಳಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಭಾರತದ ಪ್ರಸ್ತಾವನೆಗೆ ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಪಾಕಿಸ್ತಾನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೆ ಬಂದಿಲ್ಲ. ಭಾರತ ತನ್ನ ಸಿಸ್ತಾನ್-ಬಲೂಚಿಸ್ತಾನ್ ಮತ್ತು ದಕ್ಷಿಣ ಖೋರಾಸಾನ್ ಪ್ರಾಂತ್ಯಗಳಲ್ಲಿ ಮರುಭೂಮಿ ಮಿಡತೆಗಳ ಹರಡುವಿಕೆಯನ್ನು ತಡೆಗಟ್ಟಲು ಇರಾನ್‌ಗೆ ಕೀಟನಾಶಕವನ್ನು ಪೂರೈಸಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಜಗತ್ತಿನ ಅರ್ಧ ಭಾಗವೀಗ ಮಿಡತೆಗಳ ದಾಳಿಗೆ ಬೆಚ್ಚಿಬಿದ್ದಿದೆ. ಬೆಳೆಗಳಿಗೆ ಮಿಡತೆಗಳ ಕಾಟವೇನೂ ಹೊಸತಲ್ಲವಾದರೂ, ಕೆಲವು ತಿಂಗಳಿಂದ ಪ್ರಪಂಚದ ಹಲವು ಭಾಗಗಳಲ್ಲಿ ಸಾಗರೋಪಾದಿಯಲ್ಲಿ ದಾಂಗುಡಿಯಿಡುತ್ತಿರುವ ಮರುಭೂಮಿಯ ಮಿಡತೆಗಳು ಸಾಕಷ್ಟು ಅನಾಹುತವನ್ನು ಸೃಷ್ಟಿಸಿವೆ.

   English summary
   India is yet to hear from Pakistan on a proposal for a coordinated response along with Iran to control the problem of desert locusts, people familiar with developments said on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X