ಚಿಕ್ಕೋಡಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ, ಮೂಕ ಪ್ರಾಣಿಗಳು ಸಜೀವ ದಹನ

ಬೆಳಗಾವಿ, ಡಿಸೆಂಬರ್ 26: ದನದ ಕೊಟ್ಟಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದನಕರುಗಳು ಸಚೀವ ದಹನವಾಗಿರುವ ಮನಕಲುಕುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ಘಟನೆ ನಡೆದಿದ್ದು, ಎಮ್ಮೆ,ಆಕಳು ,ಆಡು ಸೇರಿದಂತೆ ಸುಮಾರು 5 ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ.

ದತ್ತಾ ಸೂರ್ಯವಂಶಿ ಎಂಬ ರೈತರಿಗೆ ಸೇರಿದ ದನಕರುಗಳು ಅಗ್ನಿ ಅವಘಡದಲ್ಲಿ ಅಸುನೀಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಜಾನುವಾರುಗಳು ಮರಣ ಹೊಂದಿರುವುದರಿಂದ ಕುಟುಂಬದವರು ದಿಕ್ಕು ದೋಚದಂತಾಗಿದ್ದಾರೆ.

In a fire accident in Belagavi district 5 animals were burned alive

ನಿನ್ನೆ (ಡಿಸೆಂಬರ್ 25) ರಾತ್ರಿಯ ಸಮಯದಲ್ಲಿ ದನದನದ ಕೊಟ್ಟಿಗೆ ಬೆಂಕಿ ತಗುಲಿದ್ದು, ಮನೆಯಿಂದ ದೂರ ತೋಟದಲ್ಲಿ ದನದ ಕೊಟ್ಟಿಗೆ ಇರುವುದರಿಂದ ಘಟನೆ ಯಾರ ಗಮನಕ್ಕೂ ಬಂದಿಲ್ಲ, ಬೆಳಿಗ್ಗೆ ದತ್ತಾ ಸೂರ್ಯವಂಶಿಯವರು ತೋಟಕ್ಕೆ ಹೋದಾಗಲಷ್ಟೆ ವಿಷಯ ತಿಳಿದಿದೆ.

ಬೆಂಕಿ ಆಕಸ್ಮಿಕವಾಗಿ ತಗುಲಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಇಟ್ಟಿದ್ದಾರೆಯೇ ಎಂಬುದನ್ನು ಅಂಕಲಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+