ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭತ್ತದಲ್ಲಿ ಕಂದು ಜಿಗಿ ಹುಳುವಿನ ಬಾಧೆ: ನಿಯಂತ್ರಣಕ್ಕೆ ಕ್ರಮ

|
Google Oneindia Kannada News

ಶಿವಮೊಗ್ಗ, ನವೆಂಬರ್ 06; ಭತ್ತದ ಬೆಳೆಗೆ ಕಂದು ಜಿಗಿ ಹುಳುವಿನ ಭಾದೆ ಕಂಡುಬಂದಿದೆ. ರೈತರು ಈ ಬಗ್ಗೆ ಜಾಗೃತರಾಗಿ, ಗದ್ದೆಯನ್ನು ಪ್ರತಿ ದಿನ ವೀಕ್ಷಿಸುತ್ತಿರಬೇಕು. ಕೃಷಿ ಇಲಾಖೆ ಈ ಬಾಧೆ ನಿಯಂತ್ರಣಕ್ಕೆ ರೈತರಿಗೆ ಸಲಹೆಯನ್ನು ನೀಡಿದೆ.

ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಹೆಚ್. ಎಸ್. ರೈತರು ಭತ್ತದ ಬುಡವನ್ನು ಪರೀಕ್ಷಿಸಿ ಮತ್ತು ಜಮೀನಿನಲ್ಲಿ ಹೆಚ್ಚು ದಿನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗಾಗ ಜಮೀನಿನ ನೀರನ್ನು ಬಸಿದು, ಪುನಃ ಒಂದೆರಡು ದಿನ ಬಿಟ್ಟು ನೀರನ್ನು ಹಾಯಿಸಬೇಕು ಎಂದು ಹೇಳಿದ್ದಾರೆ.

ಭಾರತದಲ್ಲಿ ಸೆ.2ರವರೆಗೆ ಶೇ.97ರಷ್ಟು ಭತ್ತ ಬಿತ್ತನೆ ಭಾರತದಲ್ಲಿ ಸೆ.2ರವರೆಗೆ ಶೇ.97ರಷ್ಟು ಭತ್ತ ಬಿತ್ತನೆ

How To Control Brown Planthopper In Paddy Crop

ಯೂರಿಯ ರಸಗೊಬ್ಬರ ಬಳಕೆ ಕಡಿಮೆ ಮಾಡಿಕೊಳ್ಳಬೇಕು. ಭತ್ತದ ಗದ್ದೆಯಲ್ಲಿ ಗಾಳಿ ಸರಾಗವಾಗಿ ಹಾದು ಹೋಗುವಂತೆ ಪ್ರತಿ 5 ಸಾಲಿಗೆ ಒಂದು ಸಾಲು ಜಾಗ ಮಾಡಬೇಕಾಗುತ್ತದೆ.

ದೇಶದಲ್ಲಿ ಮುಂಗಾರು ಚುರುಕು: ಭತ್ತ ಬಿತ್ತನೆ ಕೊರತೆ ನೀಗಲಿದೆದೇಶದಲ್ಲಿ ಮುಂಗಾರು ಚುರುಕು: ಭತ್ತ ಬಿತ್ತನೆ ಕೊರತೆ ನೀಗಲಿದೆ

ಗಿಡಗಳ ಬುಡದಲ್ಲಿ ರಸ ಹೀರುವ ಹುಳು, ಕಂದು ಜಿಗಿ ಹುಳು ಪ್ರಮಾಣ ಹೆಚ್ಚಾಗಿ ಕಂಡುಬಂದಲ್ಲಿ, ರಾಸಾಯನಿಕ ನಿಯಂತ್ರಣ ಅಗತ್ಯ ನಿಯಂತ್ರಣಕ್ಕಾಗಿ ಇಮಿಡಾಕ್ಲೋಪ್ರಿಡ್ 17.8 ಎಸ್ ಎಲ್ 0.5 ಮಿಲಿ/ ಲೀ ಅಥವಾ ಪೈಮೆಟ್ರೋಜೈನ್ 50 ಡಬ್ಲ್ಯುಜಿ 0.6 ಗ್ರಾಂ/ಲೀ ನೀರಿಗೆ ಅಥವಾ ಬುಪ್ರೋಪ್ರೇಜಿನ್ 25 ಎಸ್ ಸಿ 1 ಮಿಲಿ/ ಲೀ ನೀರಿಗೆ ಅಥವಾ ಪ್ಲೋನಿಕಾಮಿಡ್ 50 ಡಬ್ಲ್ಯುಜಿ 0.3 ಗ್ರಾಂ/ಲೀ ಅಥವಾ ಥಯೋಮಿಥೋಜಾಮ್ 25 ಡಬ್ಲ್ಯುಜಿ 0.3 ಗ್ರಾಂ/ ಲೀ ಇವುಗಳಲ್ಲಿ ಯಾವುದಾದರೂ ಒಂದನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಭತ್ತ ಬೆಳೆಯುವ ರೈತರಿಗೆ ಸಲಹೆಗಳು ಭತ್ತ ಬೆಳೆಯುವ ರೈತರಿಗೆ ಸಲಹೆಗಳು

How To Control Brown Planthopper In Paddy Crop

ಔಷಧಿ ಸಿಂಪಡಿಸುವ ಮುನ್ನ ಜಮೀನಿನಲ್ಲಿರುವ ನೀರನ್ನು ಬಸಿದು, ರಾಸಾಯನಿಕ ಸಿಂಪಡಿಸಿದ 24 ತಾಸುಗಳ ನಂತರ ನೀರನ್ನು ಹಾಯಿಸಬೇಕು.

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ; ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2022-23 ನೇ ಸಾಲಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕ ಅಳವಡಿಸಲು ಸಹಾಯಧನ ನೀಡುತ್ತಿದೆ.

ಸಾಮಾನ್ಯ ವರ್ಗಕ್ಕೆ ಗರಿಷ್ಟ 2 ಹೆಕ್ಟರ್ ಪ್ರದೇಶಕ್ಕೆ ಶೇ 75 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ 90 ಸಹಾಯಧನವನ್ನು ನೀಡಲಾಗುತ್ತದೆ.

ಆಸಕ್ತ ರೈತರು ನಿಗದಿತ ನಮೂನೆ ಅರ್ಜಿಯನ್ನು ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ 19/11/2022 ರೊಳಗಾಗಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ, ಭದ್ರಾವತಿ ತಾಲೂಕು ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08282-295029.

ಕೃಷಿ ಸಂಚಾಯಿ ಯೋಜನೆ; ಶಿಕಾರಿಪುರದ ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲಿದೆ. ಅರ್ಹ ರೈತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಹಾಯಧನವನ್ನು ಕಾಲಕಾಲಕ್ಕೆ ಪರಿಷ್ಕರಿಸುವ ಮಾರ್ಗಸೂಚಿ, ಅನುದಾನ ಲಭ್ಯತೆ ಹಾಗೂ ಜೇಷ್ಠತೆ ಅನುಸಾರವಾಗಿ ಒದಗಿಸಲಾಗುವುದು. ಅರ್ಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಅಥವಾ ಶಿಕಾರಿಪುರದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 15ರೊಳಗಾಗಿ ಸಲ್ಲಿಸಬೇಕು.

ರೈತರಿಂದ ಅರ್ಜಿ ಆಹ್ವಾನ; ಶಿವಮೊಗ್ಗ ತಾಲೂಕು ತೋಟಗಾರಿಕೆ ಇಲಾಖೆಯು 2022-23 ನೇ ಸಾಲಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕ ಅಳವಡಿಸಲು ಸಹಾಯಧನ ನೀಡುತ್ತಿದೆ.

ಸಾಮಾನ್ಯ ವರ್ಗಕ್ಕೆ ಗರಿಷ್ಟ 2 ಹೆಕ್ಟರ್ ಪ್ರದೇಶಕ್ಕೆ ಶೇ 75 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ 90 ಸಹಾಯಧನವನ್ನು ನೀಡಲಾಗುವುದು.

ಆಸಕ್ತ ರೈತರು ನಿಗಧಿತ ನಮೂನೆ ಅರ್ಜಿಯನ್ನು ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ 19/11/2022 ರೊಳಗಾಗಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

English summary
Agriculture department tips for the farmers to control planthopper in Paddy crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X