ಲಾಲ್‌ಬಾಗ್‌ನಲ್ಲಿ ಜ. 2ರಿಂದ 'ಕಿತ್ತಳೆ ಹಬ್ಬ'

ಈ ಮೇಳದಲ್ಲಿ ಮಹಾರಾಷ್ಟ್ರ,ಆಂಧ್ರಪ್ರದೇಶ, ಕರ್ನಾಟಕ, ಪಂಜಾಬ್, ರಾಜಸ್ಥಾನ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಿತ್ತಳೆ ಜಾತಿಯ ಹಣ್ಣುಗಳನ್ನು ಮುಖ್ಯವಾಗಿ ಕಿತ್ತಳೆ, ಮೂಸಂಬಿ, ಕಿನೊ ಮತ್ತು ನಿಂಬೆ ಗಳನ್ನು ಬೆಳೆಯುವ ರೈತರುಗಳನ್ನು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಸಲು ಹಾಗೂ ಮಾರಾಟ ಮಾಡಲು ಆಹ್ವಾನಿಸಿದೆ. ಈ ರೈತರುಗಳಿಗೆ ಅವರು ಬೆಳೆಯುವ ಬೆಳೆಗಳಿಗೆ ಅನುಸಾರವಾಗಿ ಕೊಯ್ಲು, ವಿಂಗಡನೆ, ಪ್ಯಾಕಿಂಗ್, ಮಾರುಕಟ್ಟೆಯನ್ನೊಳಗೊಂಡ ಕೊಯ್ಲೋತ್ತರ ನಿರ್ವಹಣೆಯಲ್ಲಿನ ನೂತನ ತಂತ್ರಜ್ಞಾನಗಳ ಕುರಿತು ಈ ಸಂದರ್ಭದಲ್ಲಿ ಅರಿವು ಮೂಡಿಸಲಾಗುವುದು.
ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚು ಲಾಭಗಳಿಸುವಂತೆ ಮಾಡುವುದು ಹಾಗೂ ತೋಟಗಾರಿಕೆ ಉತ್ಪಾದಕರು, ಮಾರುಕಟ್ಟೆದಾರರು ಮತ್ತು ಬಳಕೆದಾರರ ನಡುವಿನ ಕೊಂಡಿಯನ್ನು ಬಲಪಡಿಸುವುದು ಈ ಮೇಳದ ಉದ್ದೇಶವಾಗಿರುತ್ತದೆ.ಈ ಪ್ರದರ್ಶನಕ್ಕೆ ಪ್ರತ್ಯೇಕ ಪ್ರವೇಶ ಶುಲ್ಕವಿರುವುದಿಲ್ಲ. ವಾಡಿಕೆಯ ಗೇಟು ಶುಲ್ಕವನ್ನು ತೆತ್ತು ಲಾಲ್‌ಬಾಗ್ ಪ್ರವೇಶಿಸಿ ಈ ಮೇಳವನ್ನು ನೋಡಿ, ಹಣ್ಣುಗಳನ್ನು ಖರೀದಿಸಿ, ಸಂತೋಷಿಸಲು ಇದೊಂದು ಅಪೂರ್ವ ಅವಕಾಶವಾಗಿದೆ.
Horti Sangam 2009 ಪ್ರಮುಖ ಆಕರ್ಷಣೆಗಳು:
*ಈ ಮೇಳದಲ್ಲಿ ಕಿತ್ತಳೆ, ವಿವಿಧ ತಾಜಾ ಹಣ್ಣು, ತರಕಾರಿಗಳು, ಒಣಹಣ್ಣುಗಳು, ಇತ್ಯಾದಿಗಳನ್ನೊಳಗೊಂಡ 46 ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು.
*ಈ ಮೇಳದಲ್ಲಿ ಭಾಗವಹಿಸುವ ರೈತರಿಗೆ ಹಾಗೂ ಇತರರಿಗೆ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಹಾಗೂ ವಿವಿಧ ಸಂಸ್ಥೆಗಳ 6 ವಿಶೇಷ ಮಳಿಗೆಗಳಿರುತ್ತವೆ
*ಈ ಮೇಳವನ್ನು ಬಿಂಬಿಸುವ ಹಾಗೂ ಉದ್ದೇಶವನ್ನು ಸಾರುವ ಒಂದು ಪ್ರತ್ಯೇಕ ಮಳಿಗೆಯಿರುತ್ತದೆ.
* ನಾಗಪುರ ಕಿತ್ತಳೆ, ಕಿನೋ ಕಿತ್ತಳೆ, ಕೊಡಗು ಕಿತ್ತಳೆ, ನಿಂಬೆ, ಇತ್ಯಾದಿಗಳ ಕುರಿತು ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಹಾಗೂ ಮಾರುಕಟ್ಟೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲು ಎರಡು ದಿನಗಳ ಕಾಲ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಈ ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿನ ವಿಶಿಷ್ಟ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನವನ್ನು ಒಂದೇ ಸೂರಿನಡಿ (ಗಾಜಿನ ಮನೆ, ಲಾಲ್‌ಬಾಗ್, ಬೆಂಗಳೂರು) ಏರ್ಪಡಿಸಲಾಗಿದೆ. ಅಂದರೆ, ಈಶಾನ್ಯ ಭಾಗದ ಕಾಶೀ ಕಿತ್ತಳೆ, ಸಿಕ್ಕಿಂ ಕಿತ್ತಳೆ, ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ರಾಜ್ಯಗಳ ಕಿನೋ ಕಿತ್ತಳೆ, ಕರ್ನಾಟಕ ರಾಜ್ಯದ ಕೊಡಗು ಕಿತ್ತಳೆ ಮತ್ತು ಮಹರಾಷ್ಟ್ರ ರಾಜ್ಯದ ನಾಗಪುರ ಕಿತ್ತಳೆ, ನಿಂಬೆ, ಮೂಸಂಬಿ, ಚಕ್ಕೋತಗಳನ್ನು ಪ್ರದರ್ಶಿಸಲಾಗುವುದು.
ದೇಶದ ರೈತರುಗಳಿಗೆ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ ಕುರಿತು ನೂತನ ತಂತ್ರಜ್ಞಾನಗಳ ಬಗ್ಗೆ ತಿಳಿಸಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ಶ್ರಮಿಸುತ್ತಿದೆ. ಇದರಿಂದ ರೈತರು ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಅವಕಾಶವಿರುತ್ತದೆ. ಇದರಿಂದ ರೈತರುಗಳು ಹೊಸಬಗೆಯ ಪ್ಯಾಕಿಂಗ್, ವಸ್ತುಗಳ ಬಗ್ಗೆ ಅರಿವನ್ನು ಪಡೆದುಕೊಂಡು, ದೂರದ ಊರುಗಳಿಗೆ ತಮ್ಮ ಕಿತ್ತಳೆ ಜಾತಿಯ ಉತ್ಪನ್ನಗಳನ್ನು ಸಾಗಾಣಿಕೆ ಮಾಡಿ, ಮಾರಾಟ ಮಾಡುವ ಬಗ್ಗೆ ತಿಳಿವಳಿಕೆಯನ್ನು ಪಡೆಯಬಹುದಾಗಿರುತ್ತದೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications