ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿವೃಷ್ಠಿ: ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಏರಿಕೆ

|
Google Oneindia Kannada News

ಕೊಲ್ಕತ್ತಾ ಆಗಸ್ಟ್ 12: ನಿರಂತರ ಮಳೆ ಅತಿವೃಷ್ಠಿಯಿಂದಾಗಿ ಶಿಮ್ಲಾ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಟೊಮೆಟೊ ಸೇರಿದಂತೆ ಆಗಸ್ಟ್ ಎರಡನೇ ವಾರದಿಂದ ತರಕಾರಿ ಬೆಲೆಗಳು ಶೇ.50ರಷ್ಟು ಬೆಲೆ ಹೆಚ್ಚಳವಾಗಿವೆ.

ಕಳೆದ ತಿಂಗಳು ಜುಲೈನಲ್ಲಿ ಸಾಮಾನ್ಯ ದರದಲ್ಲಿದ್ದ ತರಕಾರಿಗಳು ಎರಡು ಮೂರು ವಾರದ ಸುರಿದ ಮಳೆಗೆ ತರಕಾರಿ ಬೆಳೆಗೆ ಹಾನಿ ಉಂಟಾಗಿದೆ. ಇರುವ ಬೆಳೆಗಳನ್ನು ಕಾಪಾಡಿಕೊಳ್ಳುವುದೇ ಸವಾಲು ಎಂಬಂತಾಗಿದೆ. ಈ ಪರಿಸ್ಥಿತಿ ಹಿನ್ನೆಲೆ ರೈತರ ಕಂಗಾಲಾಗಿದ್ದು, ಅತ್ಯಂತ ಕಡಿಮೆ ಬೆಲೆ ಟೊಮೆಟೊ ದರದಲ್ಲಿ ಸಹ ಏರಿಕೆ ಆಗಿದೆ. ಹೊಸ ಬೆಳೆಗಳು ಬರುವವರೆಗೆ ಇನ್ನೂ ಕೆಲವು ದಿವಸಗಳು ತರಕಾರಿಗಳ ದುಬಾರಿ ಬೆಲೆಗೆ ಕೊಳ್ಳಬೇಕಾದ ಅನಿವಾರ್ಯ ಎದುರಾಗಲಿದೆ.

ಬೆಂಗಳೂರಿನ ವಿವಿಧ ಮಾರುಕಟ್ಟೆಗಳಿಗೆ ತಮಿಳುನಾಡು, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲಾ ಭಾಗಗಳಿಂದ ಬರುತ್ತಿದ್ದ ಟೊಮೆಟೊ ಪ್ರಮಾಣ ಸಾಮಾನ್ಯವಾಗಿದ್ದು, ಬೆಲೆಯು ತುಸು ಹೆಚ್ಚಾಗಿದೆ. ಮತ್ತೆ ಮಳೆ ಮುಂದುವರಿದರೆ ರಾಜ್ಯ ರಾಜಧಾನಿಗೆ ಟೊಮೆಟೊ ಪೂರೈಕೆ ಮತ್ತಷ್ಟು ಇಳಿಕೆ ಆಗುವ ಸಂಭವವಿದೆ. ಇನ್ನು ನಗರದಲ್ಲಿ ವಾರದ ಹಿಂದಷ್ಟೆ 10ರೂ. ಆಸುಪಾಸಿಗೆ ಸಿಗುತ್ತಿದ್ದ ಪ್ರತಿ ಕೇಜಿ ಟೊಮೆಟೊಗೆ ಇಂದು ಸುಮಾರು 18ರೂ.ನಿಂದ 24 ರೂ.ವರೆಗೆ ಹೆಚ್ಚಾಗಿದೆ. ಈ ದರ ಹೀಗೆ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಮಾರುಕಟ್ಟೆಗಳಲ್ಲಿ ಕೇಜಿ ತರಕಾರಿಗಳ ಚಿಲ್ಲರೆ ಬೆಲೆ 40ರೂ. ಆಸುಪಾಸು ಇತ್ತು. ಇದೀಗ ಆ ಬೆಲೆ ಕಳೆದೊಂದು ವಾರದಿಂದ 60ರೂ.ನಷ್ಟಕ್ಕೆ ಏರಿಕೆ ಆಗಿದೆ. ಮಳೆ, ಅತೀವೃಷ್ಟಿಯಿಂದಾಗಿ ತರಕಾರಿಗಳು ಅಗತ್ಯದಷ್ಟು ಸಿಗುವುದು, ಮಾರುಕಟ್ಟೆಗಳಿಗೆ ಪೂರೈಕೆಯಾಗುವುದರಲ್ಲಿ ಸ್ವಲ್ಪ ಕೊರತೆ ಕಂಡು ಬರುವ ಸಾಧ್ಯತೆ ಇದೆ. ಇದರಿಂದ ಬೆಲೆ ಏರಿಕೆ ಆಗಿವೆ.

Heavy rains: vegetables Prices rise including tomatoes

ಪ್ರಸಕ್ತ ಆರ್ಥಿಕ ವರ್ಷ 2022 ರಲ್ಲಿ ಭಾರತವು 20 ಮಿಲಿಯನ್ ಮೆಟ್ರಿಕ್ ಟನ್ ಟೊಮೆಟೊ ಉತ್ಪಾದಿಸಲಾಗಿದೆ. ಮಳೆ ಕಾರಣದಿಂದ ಕೊಲ್ಕತ್ತಾ ಪಟ್ಟಣದಲ್ಲಿರುವ ಆಜಾದ್‌ಪುರದ ಏಷ್ಯಾದ ಅತಿದೊಡ್ಡ ಮಂಡಿಗೆ ಟೊಮೆಟೊ ಪೂರೈಕೆ ಕಡಿಮೆಯಾಗಿದೆ ಎಂದು ಅಲ್ಲಿನ ಟೊಮೆಟೊ ಟ್ರೇಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಅಶೋಕ್ ಕೌಶಿಕ್ ಮಾಹಿತಿ ನೀಡಿದರು.

ಸದ್ಯಕ್ಕೆ ಟೊಮೆಟೊ ಬೆಲೆ ಇಳಿಕೆ ಅನುಮಾನ

ಭಾರತೀಯ ತರಕಾರಿ ಬೆಳೆಗಾರರ ​​ಸಂಘದ ಅಧ್ಯಕ್ಷರಾದ ಶ್ರೀರಾಮ್ ಗಧಾವೆ ಎಂಬುವವರು, ಸದ್ಯ ಏರಿಕೆಯಾಗಿರುವ ಟೊಮೆಟೊ ಬೆಲೆ ಮತ್ತೆ ಯಾವಾಗ ಇಳಿಕೆ ಆಗಲಿದೆ ಎಂದು ಈಗ ಹೇಳುವುದು ಕಷ್ಟವಾಗಿದೆ. ಹದ ನೋಡಿಕೊಂಡು ರೈತರು ಹೊಸ ಬೀಜಗಳನ್ನು ಹಾಕುತ್ತಿದ್ದಾರೆ, ಈ ಮಧ್ಯೆ ಮತ್ತೆ ಮಳೆ ಅಬ್ಬರ ಶುರುವಿಟ್ಟುಕೊಂಡ ಟೊಮೆಟೊ ಇನ್ನಿತರ ತರಕಾರಿಗಳ ಬೆಲೆ ಇನ್ನಷ್ಟು ಏರಿಕೆ ಕಾಣಲೂ ಬಹುದು ಎಂದು ಅವರು ತಿಳಿಸಿದ್ದಾರೆ.

Heavy rains: vegetables Prices rise including tomatoes

ದೇಶದಲ್ಲಿ ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಭಾರೀ ಮಳೆಯು ಹೆಚ್ಚು ಪ್ರಭಾವ ಭೀರುತ್ತದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಏರಿಕೆಯಲ್ಲಿದ್ದರೂ ಸಹ ರೈತರಿಗೆ ಅದರ ಲಾಭದಾಯಕ ಬೆಲೆ ಸಿಗುವುದೇ ಇಲ್ಲ. ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ತೇವಾಂಶದ ಪ್ರಮಾಣ ಹೆಚ್ಚಾಗುವುದು ಇಲ್ಲವೆಲ್ಲ ತರಕಾರಿ ಇಳುವರಿಗೆ ಹಾನಿ ಉಂಟು ಮಾಡಲು ಕಾರಣವಾಗುತ್ತವೆ.

ಇನ್ನು ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಲ್ಲಿನ ಬದಲಾವಣೆ ಕಾರಣಗಳಿಂದ ದಿನಕ್ಕೆ 2,000 ಟನ್‌ಗಳಷ್ಟಿದ್ದ ಟೊಮೆಟೊ ಇಳುವರಿ ಈಗ ನಿತ್ಯ 500ಟನ್‌ ಆಸುಪಾಸಿಗೆ ಇಳಿಕೆ ಆಗಿದೆ ಎಂದು ಅವರು ವಿವರಿಸಿದರು.

Recommended Video

ಭ್ರಷ್ಟರ ಬೇಟೆಯಾಡೋಕೆ ಮತ್ತೆ ರೆಡಿಯಾದ ಲೋಕಾಯುಕ್ತ: ಹಾಗಾದ್ರೆ ACB ಕತೆಯೇನು? | Oneindia Kannada

English summary
All Vegetables including tomatoes Price rise from due to heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X