ತುಂಡಾದ ಆನೆಯ ಅಂತ್ಯಕ್ರಿಯೆ ಮಾಡಿದ ಅರಣ್ಯಾಧಿಕಾರಿಗಳು
ಚಾಮರಾಜನಗರ, ಡಿಸೆಂಬರ್, 24: ತುಂಡು ತುಂಡಾಗಿ ಕತ್ತರಿಸಿ ಜಮೀನಿನ ಪಾಳುಬಾವಿಯಲ್ಲಿ ಹೂತು ಹಾಕಿದ್ದ ಆನೆ ಕಳೇಬರವನ್ನು ಜೆಸಿಬಿ ಮೂಲಕ ಹೊರ ತೆಗೆದ ಅರಣ್ಯಾಧಿಕಾರಿಗಳು ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಶಿಲುಬೆಪುರ ಗ್ರಾಮದ ಬಳಿ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಆನೆ ಮೃತಪಟ್ಟಿತು. ಜಮೀನು ಮಾಲೀಕ ಚಿನ್ನಸ್ವಾಮಿ ಅಲಿಯಾಸ್ ಜಪಮಾಲೆ ಎಂಬಾತ ಕಾರ್ಮಿಕರ ಸಹಾಯದಿಂದ ಆನೆಯನ್ನು ಕತ್ತರಿಸಿ ತುಂಡುಗಳಾಗಿ ಮಾಡಿ ಪಾಳು ಬಾವಿಯಲ್ಲಿ ಹಾಕಿ ಮಣ್ಣು ಮುಚ್ಚಿದ್ದನು.[ಆನೆಯನ್ನು ತುಂಡರಿಸಿ ಬಾವಿಗೆ ಹಾಕಿದ ರೈತ]

ಈತ 15 ದಿನಗಳ ಹಿಂದೆ ಹೆಣ್ಣಾನೆಯನ್ನು ಸಾಯಿಸಿದ್ದು, ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಪಾಳು ಬಾವಿಗೆ ಹಾಕಿ ಮಣ್ಣು ಮುಚ್ಚಿದ್ದನು. ಆದರೆ ಮಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಮುಚ್ಚದ ಕಾರಣ ವಾಸನೆ ಬರತೊಡಗಿತ್ತು. ಈ ಸಂದರ್ಭ ಜೆಸಿಬಿ ಮೂಲಕ ಮಣ್ಣು ಮುಚ್ಚಿಸಲು ಮುಂದಾಗಿದ್ದನು.
ಸ್ಥಳಕ್ಕೆ ಬಂದ ಜೆಸಿಬಿ ಚಾಲಕ ಇಷ್ಟೊಂದು ವಾಸನೆ ಬರುತ್ತಿದೆ ಏನಿದೆ ಎಂದು ಕೇಳಿದನು. ಆದರೆ ಮಾಲೀಕ ಜಪಮಾಲೆ ಸಮರ್ಪಕ ಉತ್ತರ ನೀಡಲಿಲ್ಲ. ಇದರಿಂದ ಸಂಶಯಗೊಂಡ ಚಾಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದನು.[ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]
ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಸ್ಧಳಕ್ಕೆ ತೆರಳಿ ಆನೆ ಕಳೇಬರ ಪತ್ತೆ ಹಚ್ಚಿ ಪ್ರಕರಣದ ಸಂಬಂಧ ಜಮೀನಿನ ಮಾಲೀಕ ಜಪಮಾಲೆ ಎಂಬಾತನನ್ನು ತಮ್ಮ ವಶಕ್ಕೆ ತೆಗೆದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆತ ಕೃತ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದನು.












Click it and Unblock the Notifications