ರಾಜ್ಯದ ರೈತರ ಹೊಸ ವರ್ಷಾಚರಣೆ ಹುತಾತ್ಮ ರೈತರಿಗೆ ಅರ್ಪಣೆ
ಬೆಂಗಳೂರು, ಡಿಸೆಂಬರ್ 30: ಕೆಪಿಸಿಸಿ ಕಿಸಾನ್ ವಿಭಾಗದ ಪದಾಧಿಕಾರಿಗಳು ಮಧ್ಯ ಪ್ರದೇಶದ ಮಂಡಸೂರು ನಡೆದ ಗೋಲಿಬಾರ್ ನಲ್ಲಿ ಹುತಾತ್ಮರಾದ ರೈತರ ಕುಟುಂಬದವರ ಜತೆಗೆ ಹೊಸ ವರ್ಷ ಆಚರಣೆ ಮಾಡಲಿದ್ದಾರೆ.
ಈ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಸ್ವಾಗತಕ್ಕೆ ನಿಗದಿಯಾಗಿದ್ದ ಬ್ಯಾನರ್ ಗಳನ್ನು ರದ್ದುಮಾಡಿ, ಆರು ಹುತಾತ್ಮ ಕುಟುಂಬಗಳಿಗೆ ನೆರವು ನೀಡಲಾಗಿತ್ತು. ಡಿ.30ರ ಸಂಜೆ ಮಂಡಸೂರಿಗೆ ಕೆಪಿಸಿಸಿ ಕಿಸಾನ್ ವಿಭಾಗದ ಪದಾಧಿಕಾರಿಗಳು ತೆರಳರಿದ್ದಾರೆ.

ಡಿ.31 ರಂದು ಹುತಾತ್ಮ ರೈತರ ಕುಟುಂಬದ ಸದಸ್ಯರೊಂದಿಗೆ ಹೊಸ ವರ್ಷ ಆರಚಿಸಲಿದ್ದಾರೆ. ಕೆಪಿಸಿಸಿ ಕಿಸಾನ್ ಸಭಾದ ಅಧ್ಯಕ್ಷ ಸಚಿನವ ಮಿಗಾ, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಭಾಗವಹಿಸಲಿದ್ದಾರೆ ಎಂದು ಕಿಸಾನ್ ಸಭಾ ತಿಳಿಸಿದೆ.












Click it and Unblock the Notifications