• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಣಸೂರಿನಲ್ಲಿ ಜಮೀನಿಗೆ ಬಂದಿದ್ದ ಚಿರತೆ ಕಟ್ಟಿಹಾಕಿದ ರೈತರು

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 03: ಹುಣಸೂರು ತಾಲೂಕಿನಲ್ಲಿ ರಾಮಪಟ್ಟಣ ಗ್ರಾಮದ ಮೂಕನಹಳ್ಳಿ ರವಿಪ್ರಸನ್ನ ಅವರಿಗೆ ಸೇರಿದ ಜೋಳದ ಹೊಲದಲ್ಲಿ ರೈತರು ಕೆಲಸ ಮಾಡುತ್ತಿರು ಸಂದರ್ಭ ಚಿರತೆ ಮರಿಯೊಂದು ಕಾಣಿಸಿಕೊಂಡಿದೆ.

ಚಿರತೆ ಮರಿಯನ್ನು ನೋಡುತ್ತಿದ್ದಂತೆ ಭಯಭೀತರಾದ ರೈತರು, ಗ್ರಾಮಸ್ಥರ ಸಹಾಯದಿಂದ ಅದನ್ನು ಹಗ್ಗದಿಂದ ಕಟ್ಟಿಹಾಕಿ ನಂತರ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಅವರಿಗೆ ಒಪ್ಪಿಸಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಕಂಡ ಚಿರತೆ ಮರಿ ಮುದ್ದಾಡಿದ ಗ್ರಾಮಸ್ಥರು

ಸ್ಥಳಕ್ಕೆ ಆರ್.ಎಫ್.ಒ ಸಂದೀಪ್, ಡಿಆರ್ ಎಫ್ ಒ ರಿಜ್ವಾನ್ ಅಹಮ್ಮದ್, ಸಿಬ್ಬಂದಿ ಸತೀಶ್ ಸ್ಥಳಕ್ಕಾಗಮಿಸಿ ಮೂರು ತಿಂಗಳ ಚಿರತೆ ಮರಿಯನ್ನು ವಶಕ್ಕೆ ಪಡೆದು ಸೂಕ್ತ ಚಿಕಿತ್ಸೆ ನೀಡಿದರು. ಇನ್ನೂ ಚಿರತೆಗಳು ಈ ಭಾಗದಲ್ಲಿ ಇರುವ ಶಂಕೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯಾಧಿಕಾರಿಗಳು ಗ್ರಾಮಸ್ಥ ಕುಚೇಲ ಅವರ ಜಮೀನಿನಲ್ಲಿ ಬೋನೊಂದನ್ನು ಇರಿಸಿದ್ದಾರೆ.

English summary
A leopard cub has been found while farmers are working in a cornfield in Ramapattana village in Hunsur. The farmers with the help of the villagers, tied it in a rope and then informed forest officials
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X