ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ರೈತರ ಪ್ರತಿಭಟನೆ; ದೆಹಲಿ ಗಡಿಗಳಲ್ಲಿ ಭಾರಿ ಭದ್ರತೆ

|
Google Oneindia Kannada News

ನವದೆಹಲಿ, ಆಗಸ್ಟ್ 22: ದೇಶದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗದ ವಿರುದ್ಧ ಜಂತರ್ ಮಂತರ್‌ನಲ್ಲಿ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ದೆಹಲಿ ಪೊಲೀಸರು ಸೋಮವಾರ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಸಿಂಘು ಮತ್ತು ಗಾಜಿಪುರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಕಳೆದ ಬಾರಿಯಂತೆ ರೈತರು ಗಡಿಗಳಲ್ಲಿ ಬಿಡು ಬಿಡುವ ಭಯದಿಂದ ವಾಯುವ್ಯ ದೆಹಲಿ ಮತ್ತು ಗಾಜಿಪುರ ಗಡಿ, ಟಿಕ್ರಿ ಗಡಿ ಮತ್ತು ಸಿಂಘು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಭಾರಿ ಪೊಲೀಸರನ್ನು ನಿಯೋಜಿಸಲಾಗಿದೆ.

ದೆಹಲಿಗೆ ಬರುತ್ತಿದ್ದ ರೈತ ಮುಖಂಡ ಟಿಕಾಯತ್ ಪೊಲೀಸ್ ವಶಕ್ಕೆದೆಹಲಿಗೆ ಬರುತ್ತಿದ್ದ ರೈತ ಮುಖಂಡ ಟಿಕಾಯತ್ ಪೊಲೀಸ್ ವಶಕ್ಕೆ

ಸೋಮವಾರ ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡುವ ಮುನ್ನ ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಮ್ಮ ಬಾಕಿ ಇರುವ ಬೇಡಿಕೆಗಳನ್ನು ಪೂರೈಸುವಂತೆ ಮತ್ತು ಲಖಿಂಪುರ ಕೇರಿ ಹತ್ಯೆಗೆ ನ್ಯಾಯ ನೀಡುವಂತೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ 75 ಗಂಟೆಗಳ ಧರಣಿಯನ್ನು ನಡೆಸಿತ್ತು.

Farmers Protest; Security heightened At Delhi Borders

ಸಂಯುಕ್ತ ಕಿಸಾನ್ ಮೋರ್ಚಾ ಸುಮಾರು 40 ಕೃಷಿ ಸಂಘಟನೆಗಳನ್ನು ಒಳಗೊಂಡಿರುವ ಒಂದು ಸಂಯುಕ್ತ ಗುಂಪಾಗಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡವ ಭರವಸೆ ನಣಿಡಿದ್ದ ಕೇಂದ್ರ ಸರಕಾರಕ್ಕೆ ಅದರ ಭರವಸೆಯ ಅನುಷ್ಠಾನಕ್ಕೆ ಪ್ರತಿಭಟನೆ ನಡೆಸುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ, ಕೇಂದ್ರದ ಭತ್ತ ಖರೀದಿ ನೀತಿಯನ್ನು ವಿರೋಧಿಸಿ ತೆಲಂಗಾಣ ನಾಯಕರು ನವದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಪಾಲ್ಗೊಂಡಿದ್ದರು. ಈ ವೇಳೆ ದೇಶದಲ್ಲಿ ಮತ್ತೊಂದು ಪ್ರತಿಭಟನೆಯ ಅಗತ್ಯವಿದೆ ಎಂದು ಹೇಳಿದ್ದರು.

Farmers Protest; Security heightened At Delhi Borders

ರೈತರ ಸಮಸ್ಯೆಗಳಿಗಾಗಿ ಹೋರಾಡುವ ಪ್ರತಿಯೊಬ್ಬ ಮುಖ್ಯಮಂತ್ರಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲಿಸುತ್ತದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಲು ಬರುತ್ತಿದ್ದ ರಾಕೇಶ್ ಟಿಕಾಯತ್ ಅವರನ್ನು ಭಾನುವಾರ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.

Recommended Video

Basavaraj Bommai ಮಠ, ದೇವಾಲಯ, ಟ್ರಸ್ಟ್ ಗಳಿಗೆ ಕೋಟಿ ಕೋಟಿ ನೀಡಿದ ಬೊಮ್ಮಾಯಿ ಸರಕಾರ | Oneindia Kannada

English summary
Security heightened At Singhu and Ghazipur borders ahead of Farmers' Protest at Jantar Mantar against unemployment. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X