• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂಪಡೆದ ರೈತರು

|

ಬೆಂಗಳೂರು, ನವೆಂಬರ್ 19: ಕಬ್ಬು ಬಾಕಿ ಹಣ ಪಾವತಿ, ಬೆಂಬಲ ಬೆಲೆ ನಿಗದಿ, ಸಾಲ ಮನ್ನಾ ಇನ್ನಿತರೆ ವಿಚಾರ ಕುರಿತು ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಷರತ್ತು ಮೇರೆಗೆ ಹಿಂಪಡೆದಿದ್ದಾರೆ. ಸರ್ಕಾರಕ್ಕೆ ಈ ವಿಚಾರ ಕುರಿತು ಒಂದು ನಿರ್ದಿಷ್ಟ ನಿರ್ಧಾರ ಕೈಗೊಳ್ಳಲು 15 ದಿನಗಳ ಗಡುವು ನೀಡು ಪ್ರತಿಭಟನೆ ಹಿಂಪಡೆದಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಇಂದು(ನವೆಂಬರ್ 19) ರೈತರು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಕಬ್ಬಿಗೆ ನ್ಯಾಯೋಚಿತವಾದ ಬೆಲೆ ನಿಗದಿ ಮಾಡಬೇಕು, ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿನ ಹಣ ಬಾಕಿ ಪಾವತಿ ಮಾಡಬೇಕು ಹಾಗೂ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

ಭತ್ತಕ್ಕೆ ಬೆಂಬಲ ಬೆಲೆ:ಕುಮಾರಸ್ವಾಮಿ ಮಹತ್ವದ ಘೋಷಣೆ

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ರೈತರು ಆಗಮಿಸಲಿದ್ದಾರೆ, ಈ ಹೋರಾಟಕ್ಕೆ ರಾಜ್ಯ ರೈತಸಂಘ , ಹಸಿರು ಸೇನೆ ಬೆಂಬಲ ಸೂಚಿಸಿದೆ. ಹೀಗಾಗಿ 25 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

Farmers protest in Bengaluru over price fixation

ರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರು!

ಮಂಡ್ಯ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಲ್ಲಿ ಈ ಸಾಲಿನಲ್ಲಿ ಸರೆಯುತ್ತಿರುವ ಕಬ್ಬಿನ ಹಣವನ್ನೇ ರೈತರಿಗೆ ಸರಿಯಾಗಿ ಪಾವತಿ ಮಾಡಿಲ್ಲ, ನವೆಂಬರ್ 5ವರೆಗೆ ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯು 7.64 ಕೋಟಿ ರೂ, ಭಾರತಿನಗರ ಚಾಮುಂಡೇಶ್ವರಿ ಶುಗರ್ಸ್ 33.81 ಕೋಟಿ ರೂ, ಕೊಪ್ಪದ ಎನ್‌ಎಸ್ ಎಲ್ ಶುಗರ್ಸ್ 97.06 ಕೋಟಿ ರೂ ಪಾವತಿಸಬೇಕಿದೆ.

ರೈತರ ಪ್ರತಿಭಟನೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಈ ಸಾಲಿನಲ್ಲಿ ಕೇಂದ್ರ ಸರ್ಕಾರ ಕಬ್ಬಿಗೆ 26613 ರೂ ಎಫ್‌ಆರ್‌ಪಿ ನಿಗದಿಪಡಿಸಿದೆ. ಆದರೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನಿಗದಿಪಡಿಸಿ ಅಂತಿಮ ದರ ಗೊತ್ತುಪಡಿಸಿಲ್ಲ.ಹಾಗಾಗಿ ವಿಧಾನ ಸೌಧ ಮುತ್ತಿಗೆ ಹಾಕಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಿದ್ದಾರೆ.

Newest First Oldest First
4:14 PM, 19 Nov
ಪ್ರತಿಭಟನೆ ವಾಪಸ್, ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ ರೈತರು
3:08 PM, 19 Nov
ರೈತರು ಹೋರಾಟ ಕೈಬಿಡದಿರಲು ತೀರ್ಮಾನ
2:55 PM, 19 Nov
ಕಬ್ಬು ಬಾಕಿ ಹಣ ಪಾವತಿಸುವಂತೆ ಕಿಸಾನ್ ಘಟಕದಿಂದ ಕಾಂಗ್ರೆಸ್ ನಾಯಕರಿಗೆ ಪತ್ರ
2:52 PM, 19 Nov
ವಿಧಾನಸೌಧದಲ್ಲಿ ಸಿಎಂ ನೇತೃತ್ವದ ಸಚಿವ ಸಂಪುಟ ಸಭೆ, ಕಬ್ಬು ಬೆಳೆಗಾರರ ಬಾಕಿ ಹಣ ಪ್ರಶ್ನಿಸಿದ್ದಕ್ಕೆ ಸಭೆಯಿಂದ ಹೊರ ನಡೆದ ರಮೇಶ್ ಜಾರಕಿಹೊಳಿ
2:44 PM, 19 Nov
ಫ್ರೀಡಂಪಾರ್ಕ್‌ನಲ್ಲಿ ತಿಳಿಯಾದ ಪ್ರತಿಭಟನೆ ಕಾವು, ಚದುರುತ್ತಿರುವ ಪ್ರತಿಭಟನಾಕಾರರು
2:38 PM, 19 Nov
ಸಿಎಂಗೆ ಮದ್ಯದ ಬಾಟಲಿ, ಮಹಿಳೆಯರಿಂದ ಚಪ್ಪಲಿ ಪಾರ್ಸೆಲ್
1:58 PM, 19 Nov
21 ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಕುರಿತು ಸಭೆ
1:55 PM, 19 Nov
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರು, ಸಿಎಂ ಹಾಗೂ ಕಾರ್ಖಾನೆ ಮಾಲೀಕರ ನಡುವೆ ಸಭೆ ನಡೆಯಲಿದೆ
1:54 PM, 19 Nov
ಕಬ್ಬು ಬೆಳಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ
1:53 PM, 19 Nov
ಇಂಡಿಯನ್ ಕೇಮ್ ಪಾವರ್, ಉತ್ತೂರು-18 ಕೋಟಿ 18 ಲಕ್ಷ
1:52 PM, 19 Nov
ಪ್ರತಿಭಟನಾ ಸ್ಥಳಕ್ಕೆ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಬರುವಂತೆ ರೈತರ ಪಟ್ಟು
1:51 PM, 19 Nov
ನಿರಾಣಿ ಶುಗರ್ಸ್ -45 ಕೋಟಿ 98 ಲಕ್ಷ ಬಾಕಿ
1:50 PM, 19 Nov
-ಗೋದಾವರಿ ಸಮೀರವಾಡಿ ಶುಗರ್ಸ್ -35 ಕೋಟಿ 18ಲಕ್ಷ
1:50 PM, 19 Nov
ಕಬ್ಬಿನ ಹಣ ಬಾಕಿ ಇಟ್ಟುಕೊಂಡಿರುವ ಕಾರ್ಖಾನೆಗಳು
1:40 PM, 19 Nov
30ಕ್ಕೂ ಹೆಚ್ಚು ರೈತರ ಮನವಿ ಪತ್ರ ಸ್ವೀಕರಿಸಿ ಹೊರಟ ಸಚಿವ ಬಂಡೆಪ್ಪ ಕಾಶೆಂಪೂರ್
1:22 PM, 19 Nov
ರೈತರೊಂದಿಗೆ ಚರ್ಚಿಸಲು ಫ್ರೀಡಂ ಪಾರ್ಕ್‌ಗೆ ಬರಲು ಸಿಎಂ ನಕಾರ
1:13 PM, 19 Nov
ರೈತ ಮಹಿಳೆ ವಿರುದ್ಧ ಸಿಎಂ ಅವಹೇಳನಕಾರಿ ವಿಚಾರ-ಮೈಸೂರಿನಲ್ಲೂ ಪ್ರತಿಭಟನೆ
1:12 PM, 19 Nov
ನಾಳೆ ಮಧ್ಯಾಹ್ನ 3.00 ಗಂಟೆಗೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಒಮ್ಮತದ ನಿರ್ಣಯ ಹೊರಹೊಮ್ಮುತ್ತದೆ ಎನ್ನುವ ವಿಶ್ವಾಸ ನನ್ನದು-ಕುಮಾರಸ್ವಾಮಿ
1:01 PM, 19 Nov
ನಿಲುವು ಸ್ಪಷ್ಟಪಡಿಸಿಲು ಮಧ್ಯಾಹ್ನ 2ಗಂಟೆಯವರೆಗೆ ರೈತರ ಡೆಡ್ ಲೈನ್
1:01 PM, 19 Nov
ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ. ಈಗಾಗಲೇ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ-ಕುಮಾರಸ್ವಾಮಿ
12:46 PM, 19 Nov
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಏನೇನು ಪ್ರಯತ್ನ ಮಾಡಬಹುದು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ-ಕುಮಾರಸ್ವಾಮಿ
12:39 PM, 19 Nov
ಉತ್ತರ ಕರ್ನಾಟಕದವರು, ಇದು ಬ್ಯಾಂಕು ಮತ್ತು ರೈತರ ನಡುವಿನ ವಿಷಯ ಎಂದು ಕೈಕಟ್ಟಿ ಕೂರಲಿಲ್ಲ-ಕುಮಾರಸ್ವಾಮಿ
12:39 PM, 19 Nov
ಮೊನ್ನೆ ಮೊನ್ನೆ ಬೆಳಗಾವಿಯ ಜಿಲ್ಲೆಯ ರೈತರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕೊತ್ತಾ ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಿದಾಗಲೂ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿ, ರೈತರ ರಕ್ಷಣೆಗೆ ಪ್ರಯತ್ನ ನಡೆಸಿದವನು ನಾನು-ಕುಮಾರಸ್ವಾಮಿ
12:39 PM, 19 Nov
ನಾನು ಹಿಂದಿನಿಂದಲೂ ರೈತರ ಪಕ್ಷಪಾತಿಯಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ-ಕುಮಾರಸ್ವಾಮಿ
12:32 PM, 19 Nov
ರೈತರ ಬಗ್ಗೆ ನಮಗೆ ಕಾಳಜಿ ಇದೆ, ಹೀಗಾಗಿಯೇ ರೈತರ ಬೆಳೆ ಸಾಲ ಮನ್ನಾ ಮಾಡಿದ್ದೇವೆ- ಎಚ್‌ಡಿ ರೇವಣ್ಣ
12:31 PM, 19 Nov
ಹೆಣ್ಣುಮಕ್ಕಳ ಮೇಲೆ ಅಪಾರಗೌರವಿದೆ, ನಾನು ನೀಡಿದ್ದ ಹೇಳಿಕೆಯಲ್ಲ ದುರುದ್ದೇಶವಿಲ್ಲ, ನನ್ನ ಮಾತಿನ ಅರ್ಥವನ್ನು ಗ್ರಹಿಸದೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ-ಕುಮಾರಸ್ವಾಮಿ
12:17 PM, 19 Nov
ಸಿಎಂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ರೈತರ ಪಟ್ಟು
12:16 PM, 19 Nov
ರೈತರ ಸಮಸ್ಯೆ ಬಗೆಹರಿಸಲು ಮಧ್ಯಾಹ್ನ 2 ಗಂಟೆಯವರೆಗೆ ಸರ್ಕಾರಕ್ಕೆ ಗಡುವು ಕೊಟ್ಟ ರೈತರು
12:15 PM, 19 Nov
ನಾನು ನೀಡಿದ ಪ್ರತಿಕ್ರಿಯೆಯಲ್ಲಿ ಯಾವುದೇ ದುರುದ್ದೇಶವಿಲ್ಲ-ಕುಮಾರಸ್ವಾಮಿ
12:13 PM, 19 Nov
ಕುಮಾರಸ್ವಾಮಿ 26 ಅಂಶಗಳ ಪತ್ರಿಕಾ ಪ್ರಕಟಣೆ ಬಿಡುಗಡೆ
READ MORE

English summary
Sugar cane and paddy farmers are holding massive protest near Vidhana soudha over price fixation issue today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X