ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪನಿ ಸರ್ಕಾರವನ್ನು ಮಣಿಸಿದ ಗಾಂಧಿ ಮಾರ್ಗ: ಕಿಸಾನ್ ಏಕ್ತಾದಿಂದ- ಸಂಯುಕ್ತ ಕಿಸಾನ್ ಮೋರ್ಚಾವರೆಗೆ

|
Google Oneindia Kannada News

ಇಸವಿ 2015. ಅದೊಮ್ಮೆ ಕೃಷಿ ಮತ್ತು ಆಹಾರ ನೀತಿಗಳ ಅಂತಾರಾಷ್ಟ್ರೀಯ ತಜ್ಞರಾದ ದೇವಿಂದರ್ ಶರ್ಮಾ ರ ಕರೆ ಬಂತು. ಎಂದಿನಂತೆ ಅಭಿಮಾನದ ಕುಶಲೋಪರಿ ಮುಗಿಸಿ. Let me talk to you some serious business ಎಂದವರು, ಇಡೀ ದೇಶದ ರೈತ ಸಂಘಟನೆಗಳನ್ನು ಒಂದು ವೇದಿಕೆಯಡಿ ತರುವ ಯೋಚನೆ ಮಾಡುತ್ತಿದ್ದೇನೆ, ಅದು ಪ್ರೊ. ಎಂಡಿಎನ್ ಆಶಯವೂ ಆಗಿತ್ತು.

ನಿನ್ನಂಥವರು, ಯಾವುದೇ ಸಂಘಟನೆಯ ಭಾಗವಲ್ಲದವರು, ಕೃಷಿ ಬಗೆಗೆ ಕಾಳಜಿ ಮತ್ತು ವಿಷಯ ಸ್ಪಷ್ಟತೆ ಇರುವವರು ಈ ಕೆಲಸ ಮಾಡಬಹುದು. ಮಾಡಿ ಎಂದು ನನಗೆ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಈಗ ನನಗೆ ಆ ಕೆಲಸ ಆಗಲೇಬೇಕೆನ್ನುವ ಅನಿವಾರ್ಯ ಕಾಣುತ್ತಿದೆ. ನನ್ನ ಜೊತೆಯಲ್ಲಿರು ಎಂದರು. ಆಗಬಹುದು ಸಾರ್ ಅದರೆ ಎಲ್ಲರನ್ನೂ ಸೇರಿಸುವುದು ಕಷ್ಟದ ಕೆಲಸ ಎಂದೆ. ನನಗೂ ಗೊತ್ತು ಆದರೂ ಪ್ರಯತ್ನ ಮಾಡೋಣವೆಂದು ಕರ್ನಾಟಕದ ಎರಡು ರೈತ ಸಂಘಗಳ ಬಣಗಳ ಬಗ್ಗೆ ಕೇಳಿದರು.

ರೈತರ ವಿಜಯಯಾತ್ರೆ: ಸರ್ಕಾರವನ್ನೇ ಸೋಲಿಸಿದ ಅನ್ನದಾತರು ಸ್ವಗ್ರಾಮಗಳಿಗೆ ವಾಪಸ್ರೈತರ ವಿಜಯಯಾತ್ರೆ: ಸರ್ಕಾರವನ್ನೇ ಸೋಲಿಸಿದ ಅನ್ನದಾತರು ಸ್ವಗ್ರಾಮಗಳಿಗೆ ವಾಪಸ್

ಈಗ ಇನ್ನೂ ಹೆಚ್ಚಾಗಿದಾವೆ ಸಾರ್ ಮೊದಲಿಗೆ ಎರಡು ಬಣಗಳನ್ನು ಒಂದು ಮಾಡುವುದಕ್ಕೆ ಕಡಿದಾಳ್ ಶಾಮಣ್ಣ, ಪ್ರೊ. ರವಿವರ್ಮಕುಮಾರ್, ಸ್ವಾಮೀಜಿಯೊಬ್ಬರು ಸೇರಿದಂತೆ ಅನೇಕ ಹಿರಿಯರು ಪ್ರಯತ್ನ ಪಟ್ಟು ಬೇಸ್ತು ಬಿದ್ದಿದ್ದಾರೆ ಎಂದೆ. ಅದರ ಜೊತೆಗೆ ಅವರಿಗೂ ಗೊತ್ತಿದ್ದ ವಿಷಯವೇ ಆದ ಇಂಡಿಯನ್ ಕೋಆರ್ಡಿನೇಷನ್ ಕಮಿಟಿ ಆಫ್ ಫಾರ್ಮರ್ಸ್ ಮೂಮೆಂಟ್ (ಐಸಿಸಿ), ಅದೇ ರೀತಿ ದಕ್ಷಿಣ ಭಾರತದ ರೈತ ಸಂಘಟನೆಗಳ ಒಕ್ಕೂಟ, ಅಂತಾರಾಷ್ಟ್ರೀಯ ರೈತ ಸಂಘಟನೆಗಳ ಒಕ್ಕೂಟ ಲಾ ವಯಾ ಕ್ಯಾಂಪಸ್‌ನಾ ಬಗೆಗೂ ಮಾತನಾಡಿದೆ. ಅಲ್ಲಿಯೂ ಕೆಲವೇ ಸಂಘಟನೆಗಳಿವೆ.

Farmers Protest End: Gandhis Way of Beaten the Company Government

ಎಲ್ಲಾ ಸಂಘಟನೆಗಳು ಆ ನೆಟ್ವರ್ಕ್ ವ್ಯಾಪ್ತಿಯಲ್ಲಿಲ್ಲವೆಂದರು. ಹಾಗಿದ್ದರೆ ಎಲ್ಲಾ ಸಂಘಟನೆಗಳು ಅದಾಗಲೇ ಇರುವ ವೇದಿಕೆಗಳಡಿ ತರುವ ಪ್ರಯತ್ನ ಮಾಡಬಹುದಾ ಎಂದೆ. ಅದು ಮುಂದಿನ ಮಾತು. ಈಗ ಸದ್ಯಕ್ಕೆ ಎಲ್ಲಾ ಸಂಘಟನೆಗಳನ್ನು ಮೊದಲು ಒಂದು ಹೊಸ ವೇದಿಕೆಯಡಿ ತರುವ ಪ್ರಯತ್ನ ಮಾಡೋಣವೆಂದರು. ಆಗಲಿ ಎಂದು ಗೋಣಾಡಿಸಿದೆ. ದಕ್ಷಿಣ ಭಾರತದ ಸಂಘಟನೆಗಳನ್ನು ಸಂಪರ್ಕಿಸುವ ಕೆಲಸ ಆರಂಭಿಸಿದೆ.

ದೇವಿಂದರ್ ಶರ್ಮಾರ ಪ್ರಯತ್ನಕ್ಕೆ ಯಾರೂ ಬೇಡವೆನ್ನಲಿಲ್ಲ. ಚಂಡೀಘಡದಲ್ಲಿ ಮೊದಲ ಸಭೆ ಏರ್ಪಾಡಾಯಿತು. ದಕ್ಷಿಣ ಭಾರತದಿಂದ ಸುಮಾರು 15 ಸಂಘಟನೆಗಳ ನೇತಾರರೊಟ್ಟಿಗೆ ಚಂಡೀಗಡ ತಲುಪಿದೆ. ಕಿಸಾನ್ ಏಕ್ತಾ ಹೆಸರಿನ ಒಕ್ಕೂಟವೊಂದರ ಭಾಗವಾಗಿ ನಾವೆಲ್ಲರೂ ಅಲ್ಲಿಗೆ ತೆರಳಿದ್ದು. ಮೂರು ದಿನಗಳ ಸಮಾವೇಶ-ವರ್ಕ್ ಶಾಪ್. ಇಡೀ ದೇಶದ ರೈತಕುಲದ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳು ಹಾಗೂ ಮುಂದಿನ ಹಾದಿಯ ಬಗೆಗೆ ಚಿಂತನೆ ನಡೆದು ತೀರ್ಮಾನ ಕೈಗೊಂಡೆವು. "ಚಂಡೀಗಡ ನಿರ್ಣಯ" ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರವಾಯಿತು. ನಿರ್ಣಯದ ಕೊನೆಯ ಆಶಯ ಹೀಗಿದೆ. "ದೇಶದ ಪ್ರತಿಯೊಬ್ಬ ನಾಗರೀಕನೂ ರೈತರ ಹೋರಾಟಕ್ಕೆ ಧ್ವನಿಯಾಗಬೇಕು ಎಂಬುದು ನಮ್ಮ ಅಭಿಲಾಷೆ. ದೇಶಕ್ಕೆ ಅನ್ನ ಕೊಡುವವರ ಬಗ್ಗೆ ಕಾಳಜಿ ಇರಲಿ".

ಅನ್ನದಾತರ ಎಲ್ಲ ಷರತ್ತುಗಳಿಗೆ ಕೇಂದ್ರದ ಅಸ್ತು; 15 ತಿಂಗಳ ರೈತರ ಆಂದೋಲನ ಅಂತ್ಯ?ಅನ್ನದಾತರ ಎಲ್ಲ ಷರತ್ತುಗಳಿಗೆ ಕೇಂದ್ರದ ಅಸ್ತು; 15 ತಿಂಗಳ ರೈತರ ಆಂದೋಲನ ಅಂತ್ಯ?

ಎರಡನೆಯ ಸಭೆ
ಕಿಸಾನ್ ಏಕ್ತಾ ಸಮಾವೇಶದ ಎರಡನೆಯ ಸಭೆ ಬೆಂಗಳೂರಿನಲ್ಲಿ ನೆರವೇರಿತು. ಮೂರನೆಯ ಸಭೆ ಶಿಮ್ಲಾದಲ್ಲಿ. ಅಷ್ಟೊತ್ತಿಗೆ ಕಿಸಾನ್ ಏಕ್ತಾ ವೇದಿಕೆಯಲ್ಲೂ ಬಿರುಕು ಬಂದು ನಾಗ್ಪುರದಲ್ಲಿ ನಡೆಯಬೇಕಿದ್ದ ನಾಲ್ಕನೆಯ ಸಭೆಗೆ ಅನೇಕರು ಮುನಿಸಿಕೊಂಡಿದ್ದರು. ನನಗೂ ಇಟ್ಟಿನಾತುರದ ಕೆಲಸಗಳಲ್ಲಿ ಹೆಚ್ಚಿನ ಸಮಯ, ಶ್ರಮ ಹಾಕಲಾಗಲಿಲ್ಲ. ಆದಗ್ಯೂ ಆಗಾಗ್ಗೆ ದೇವಿಂದರ್ ಶರ್ಮಾ ರೈತ ಸಂಘಟನೆಗಳ ಒಗ್ಗೂಡುವಿಕೆಯ ಬಗ್ಗೆ ಮಾತನಾಡುತ್ತಲೇ ಇದ್ದರು. ಹೌದು ಸಾರ್ ಎನ್ನುವುದನ್ನು ಬಿಟ್ಟರೆ ಇನ್ನಾವ ಪ್ರಯತ್ನಗಳೂ ಮಾಡುವುದು ಕಷ್ಟ ಎಂಬ ಸತ್ಯ ಅರಿತು ಸುಮ್ಮನಾಗುತ್ತಿದ್ದೆ.

Farmers Protest End: Gandhis Way of Beaten the Company Government

ಉತ್ತರ ಭಾರತದಲ್ಲಿ ವಿಶೇಷವಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಎಲ್ಲರೂ ಒಂದು ವೇದಿಕೆಯಡಿ ಬರುವ ಪ್ರಯತ್ನಗಳು ಮುಂದುವರೆದಿತ್ತು. ದಕ್ಷಿಣ ಭಾರತದಲ್ಲಿ ಪ್ರಯತ್ನಗಳು ನಡೆದವಾದರೂ ತೀವ್ರ ಸ್ವರೂಪ ಪಡೆದುಕೊಳ್ಳಲಿಲ್ಲ. ಕಡೆಗೆ ಆಗಿನ ಕಿಸಾನ್ ಏಕ್ತಾ ವೇದಿಕೆಯಲ್ಲಿದ್ದ ಪ್ರಮುಖರಾದ ಬಲಬೀರ್ ಸಿಂಗ್ ರಾಜೇವಾಲ್, ಶಿವಕುಮಾರ್ ಶರ್ಮಾ (ಕಕ್ಕಾಜಿ) ಗುರ್ನಾಂ ಸಿಂಗ್ ಮತ್ತೆ ಕೆಲ ಪ್ರಮುಖರು ಡಾ. ದರ್ಶನ್ ಪಾಲ್ ಸೇರಿದಂತೆ ಅನೇಕ ಹಿರಿಯ ಹೋರಾಟಗಾರರು ಮತ್ತು ಚಿಂತಕರ ಜೊತೆಯಾಗಿ ಮಾಡಿದ ದೃಢ ಸಂಕಲ್ಪದಿಂದ "ಸಂಯುಕ್ತ ಕಿಸಾನ್ ಮೋರ್ಚಾ" ರೂಪುಗೊಂಡಿತು. 2015ರಲ್ಲಿ ಈ ಕೆಲಸ ಆರಂಭಿಸಿದ ದೇವಿಂದರ್ ಶರ್ಮಾ ಖುಷಿಪಟ್ಟರು ನನ್ನೊಂದಿಗೆ ಸಂಭ್ರಮ ಹಂಚಿಕೊಂಡರು ಕೂಡಾ.

Farmers Protest End: Gandhis Way of Beaten the Company Government

ಸಂಯುಕ್ತ ಕಿಸಾನ್ ಮೋರ್ಚಾ ಇಡೀ ದೇಶದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಗಳು ಸಮಾವೇಶಗಳಿಗೆ ರಾಕೇಶ್ ಟಿಕಾಯಿತ್, ಯುದ್ಧವೀರ್ ಸಿಂಗ್, ಡಾ. ದರ್ಶನ್ ಪಾಲ್ ಭಾಗವಹಿಸಿ ದೇಶದ ಎಲ್ಲಾ ರೈತ ಸಂಘಟನೆಗಳನ್ನು ದಿಲ್ಲಿಯತ್ತ ಮುಖಮಾಡುವಂತೆ ಮಾಡುವಲ್ಲಿ ಯಶಸ್ವಿಯಾದರು.

ಸರ್ಕಾರದ ಮೊಂಡುತನಕ್ಕೆ ಉತ್ತರವೆಂಬಂತೆ ಒಂದು ವರ್ಷವಿಡೀ ಬೀದಿಯಲ್ಲೇ ಕುಳಿತುಬಿಟ್ಟರು. ದೆಹಲಿ ಗಡಿಗಳಲ್ಲಿ ನೆಲಕ್ಕೆ ಬಿತ್ತಿದ ಬೀಜದಂತೆ ರೈತ ಕುಲ ಹೆಮ್ಮರವಾಗಿ ಬೆಳೆದುಬಿಟ್ಟಿತು. ಸರ್ಕಾರ ಹೆದರಿತು. ಮೂರೂ ಕೃಷಿ ಕಾಯಿದೆಗಳನ್ನು ಹಿಂಪಡೆಯಿತು. ರೈತರ ಮೇಲೆ ಹೂಡಿದ್ದ ಕೇಸುಗಳನ್ನು ಹಿಂಪಡೆಯಿತು.

Farmers Protest End: Gandhis Way of Beaten the Company Government

ಎಂಎಸ್‌ಪಿ ಕುರಿತಾಗಿ ರೈತ ನಾಯಕರನ್ನೊಳಗೊಂಡ ಒಂದು ಕಮಿಟಿ ಮಾಡಲು ನಿರ್ಧರಿಸಿತು. ಎಲ್ಲ ಬೇಡಿಕೆಗಳನ್ನು ಪರಿಶೀಲಿಸುವುದಾಗಿ, ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಹೇಳಿತು. ರೈತ ಸತ್ಯಾಗ್ರಹಿಗಳು "ಕಂಪನಿ" ಸರ್ಕಾರವನ್ನು ಮಣಿಸಿ ಗಾಂಧಿ ಮಾರ್ಗವನ್ನು ಮೆರೆಸಿ ಮನೆಗಳಿಗೆ ಹಿಂದಿರುಗಿದರು. ಚಳುವಳಿಗೆ ಇದೀಗ ಮಧ್ಯಂತರ ಬಿಡುವು... ಅಬೀ ಸಿನೆಮಾ ಬಾಕಿ ಹೈ...

English summary
The central government has withdrawn all three agricultural laws and the farmers' cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X