ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
Recommended Video

ಬೆಂಗಳೂರು, ಜುಲೈ 05: ಕುಮಾರಸ್ವಾಮಿ ಅವರು ಹೇಳಿದಂತೆ ರೈತರ ಸಾಲಮನ್ನಾ ಮಾಡಿದ್ದಾರೆ. ಆದರೆ ಸಂಪೂರ್ಣ ಸಾಲಮನ್ನಾಕ್ಕೆ ಬದಲು 2 ಲಕ್ಷ ಸಾಲ ಮಾತ್ರ ಮನ್ನಾ ಆಗಲಿದೆ.ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೂಢೀಕರಣ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿತ್ತು. ಆದರೆ ಅಂತೂ ಇಂತೂ ಪೇಚಾಡಿ ಕೊನೆಗೂ ಕುಮಾರಸ್ವಾಮಿ ಅವರು ಸ್ವಲ್ಪವಾದರೂ ಸಾಲಮನ್ನಾ ಮಾಡಿದ್ದಾರೆ.
ಸಾಲಮನ್ನಾ ಬಗ್ಗೆ ವಿರೋಧ ಪಕ್ಷಗಳು ಈಗಾಗಲೇ ಹಲವು ಪ್ರಶ್ನೆಗಳನ್ನು ಎತ್ತಿವೆ. ಸಾಲಮನ್ನಾ ಪ್ರಕ್ರಿಯೆ ಸಾಕಷ್ಟು ಗೊಂದಲ ಪೂರ್ಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ಮಾಡಿರುವುದು ಕೇವಲ ಬೆಳೆ ಸಾಲಮನ್ನಾ ಮಾತ್ರ. ಎಂಬ ಮಾತುಗಳನ್ನೂ ವಿರೋಧ ಪಕ್ಷಗಳಾಡಿವೆ.
ಯಾವ ರೈತರ ಸಾಲಮನ್ನಾ ಆಗಲಿದೆ, ಯಾವ ರೀತಿಯ ಸಾಲಮನ್ನಾ ಆಗಲಿದೆ, ಎಷ್ಟು ಸಾಲಮನ್ನಾ ಆಗಲಿದೆ, ಯಾವ ಅವಧಿಯ ಒಳಗೆ ಮಾಡಿದ್ದ ಸಾಲಮನ್ನಾ ಆಗಲಿದೆ, ಯಾವ ಬ್ಯಾಂಕುಗಳಲ್ಲಿ ಮಾಡಿದ್ದ ಸಾಲಮನ್ನಾ ಆಗಲಿದೆ ಎಂಬಿತ್ಯಾದಿ ಪ್ರಶ್ನೆಗಳು ರೈತರನ್ನು ಕಾಡುತ್ತಿವೆ. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.

ಕುಟುಂಬದ ಒಬ್ಬರ ಬೆಳೆ ಸಾಲಮಾತ್ರ ಮನ್ನಾ
* ರೈತ ಕುಟುಂಬದ 2 ಲಕ್ಷ ಸುಸ್ತಿ ಸಾಲಮನ್ನಾ ಮಾಡಲಾಗುತ್ತದೆ, ಕುಟುಂಬ ಎಂದರೆ ರೈತ ಅಥವಾ ಆತನ ಪತ್ನಿ ಅಥವಾ ಆತನ ಮಗನ ಹೆಸರಿನಲ್ಲಿ ಮಾಡಲಾದ ಕೃಷಿ ಸಾಲದಲ್ಲಿ 2 ಲಕ್ಷ ಸಾಲಮನ್ನಾ ಆಗಲಿದೆ. ಒಂದೇ ಕುಟುಂಬದಲ್ಲಿ ಎರಡು ಬೆಳೆಸಾಲ ಇದ್ದರೆ ಒಂದು ಸಾಲ (2 ಲಕ್ಷ) ಮಾತ್ರವೇ ಮನ್ನಾ ಆಗಲಿದೆ.

ಸಾಲ ತೀರಿಸಿದ್ದವರಿಗೆ 25000 ಬಹುಮಾನ!
* 01/04/2009ರ ನಂತರ ಪಡೆದ 30/12/2017 ರ ವೇಳೆಗೆ ಬಾಕಿ ಇರುವ ಬೆಳೆ ಸಾಲ ಮಾತ್ರ ಮನ್ನಾ ಆಗಲಿದೆ. ಅಕಸ್ಮಾತ್ ಅವಧಿಯ ಒಳಗೆ ಸಾಲ ತೀರಿಸಿದವರಿಗೆ 25000 ರೂಪಾಯಿ ಹಣ ವಾಪಾಸ್ಸು ಬರಲಿದೆ.

ಸಹಕಾರ ಸಂಘದ ಸಾಲಮನ್ನಾ ಆಗಿರುವ ರೈತರಿಗೆ ಲಾಭವಿಲ್ಲ
* ಕೃಷಿ ಸಾಲ ಅತವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮರುಪಾವತಿಸಿದ ರೈತರಿಗೆ 25000 ರೂಪಾಯಿ ಬಹುಮಾನದ ರೀತಿಯಲ್ಲಿ ಸರ್ಕಾರ ನೀಡಲಿದೆ. ಮರುಪಾವತಿ ಮಾಡಿದ ಸಾಲವು 25000 ಕ್ಕಿಂತಲೂ ಕಡಿಮೆ ಇದ್ದರೆ ಅಷ್ಟೆ ಮೊತ್ತವನ್ನು ವಾಪಸ್ಸು ನೀಡಲಾಗುತ್ತದೆ.

ತೋಟಗಾರಿಕೆ, ಪ್ಲಾಂಟೇಶನ್ ಸಾಲವೂ ಮನ್ನಾ
* ಬೆಳೆ ಸಾಲ ಅಥವಾ ಕಿಸಾನ್ ಕ್ರೆಡಿಟ್ ಸಾಲ ಮತ್ತು 12 ರಿಂದ 18 ತಿಂಗಳ ಅವಧಿಯಲ್ಲಿ ತೀರಿಸಬಹುದಾದ ಸಾಲವನ್ನು ಬೆಳೆ ಸಾಲ ಎನ್ನಬಹುದು. ಪ್ಲಾಂಟೇಶನ್, ತೋಟಗಾರಿಕೆಗೆ ಪಡೆದ ಸಾಲಗಳನ್ನೂ ಒಳಗೊಂಡಿರುತ್ತದೆ.

ಯಾವ ಬಗೆಯ ಸಾಲಮನ್ನಾ?
* ಬೆಳೆಸಾಲ, ಮರು ವರ್ಗೀಕರಣ ಆದ ಬೆಳೆ ಸಾಲ (ರಿಸ್ಟ್ರಕ್ಚರ್ಡ್ ಲೋನ್), ವರ್ಷದ ಅವಧಿಯ ಬೆಳೆ ಸಾಲ (NPA), ಒಂದು ವರ್ಷ ಅವಧಿ ಮೀರದ ಸಾಲಗಳು ಮನ್ನಾ ಆಗಲಿವೆ.

ಯಾವ ಬ್ಯಾಂಕ್‌ಗಳ ಸಾಲಮನ್ನಾ
* ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಖಾಸಗಿ ಮತ್ತು ಪ್ರಾಥಮಿಕ ಸಹಕಾರಿ ಕ್ರೆಡಿಟ್ ಸೊಸೈಟಿಗಳು, ರೈತರ ಸಹಕಾರ ಸೇವಾ ಕೇಂದ್ರದಿಂದ ಪಡೆದ ಸಾಲಗಳು, ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆದ ಸಾಲಗಳು ಮನ್ನಾ ಆಗಲಿವೆ.

ಕಿಸಾಸ್ ಕಾರ್ಡ್ ಸಾಲವೂ ಮನ್ನಾ
* ಕೃಷಿ ಸಾಲ ಅತವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮರುಪಾವತಿಸಿದ ರೈತರಿಗೆ 25000 ರೂಪಾಯಿ ಬಹುಮಾನದ ರೀತಿಯಲ್ಲಿ ಸರ್ಕಾರ ನೀಡಲಿದೆ. ಮರುಪಾವತಿ ಮಾಡಿದ ಸಾಲವು 25000 ಕ್ಕಿಂತಲೂ ಕಡಿಮೆ ಇದ್ದರೆ ಅಷ್ಟೆ ಮೊತ್ತವನ್ನು ವಾಪಸ್ಸು ನೀಡಲಾಗುತ್ತದೆ.
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications