ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ಹೇಗೆ ಸತ್ತರೂ ಆತ್ಮಹತ್ಯೆ ಎನ್ನಲಾಗುತ್ತಿದೆ: ಡಿಕೆ ಶಿವಕುಮಾರ್‌

By Manjunatha
|
Google Oneindia Kannada News

Recommended Video

ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ರೈತರ ಬಗ್ಗೆ ಹೇಳಿದ್ದು ಹೀಗೆ | Oneindia Kannada

ಬೆಂಗಳೂರು, ಜುಲೈ 25: ರೈತರ ಆತ್ಮಹತ್ಯೆ ಬಗ್ಗೆ ಪದೇ ಪದೇ ಎದುರಾಗುತ್ತಿರುವ ಪ್ರಶ್ನೆಗಳಿಂದ ರೋಸಿ ಹೋಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, 'ರೈತ ಹೇಗೇ ಸತ್ತರೂ ಅದನ್ನು ಬೆಳೆ ಕಾರಣಕ್ಕೆ ಆತ್ಮಹತ್ಯೆ ಎನ್ನಲಾಗುತ್ತಿದೆ' ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡರೂ ಅದನ್ನು ಬೆಳೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದ ಡಿಕೆ ಶಿವಕುಮಾರ್ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದ ಡಿಕೆ ಶಿವಕುಮಾರ್

ಯಾವುದೇ ಕಾರಣಕ್ಕಾಗಿಯಾದರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಣಯ ತಪ್ಪು ಎಂದ ಅವರು, ರೈತರು ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು, ಸರ್ಕಾರ ಈಗಾಗಲೇ ಸಾಲಮನ್ನಾ ಮಾಡಿದೆ ಎಂದು ಭರವಸೆ ನೀಡಿದರು.

Farmer deaths were shown as suicides : DK Shivakumar

ಯಡಿಯೂರಪ್ಪ ಅವರು ಸಾಲಮನ್ನಾ ಬಗ್ಗೆ ಪ್ರಶ್ನೆಗಳೆತ್ತಿರುವ ಬಗ್ಗೆ ಗಮನ ಸೆಳೆದಾಗ, ಯಡಿಯೂರಪ್ಪ ಅವರ ಅನುಮಾನುಗಳು ಅವಾಸ್ತವಿಕ. ಸರ್ಕಾರವು ಸತತ ಸಭೆಗಳನ್ನು ನಡೆಸಿ ಆ ನಂತರವೇ ತೀರ್ಮಾನ ತೆಗೆದುಕೊಂಡಿದೆ ಎದು ಸ್ಪಷ್ಟನೆ ನೀಡಿದರು.

English summary
All farmer suicides were shown as suicide due to debt but that is not correct said minister DK Shivakumar. He said Farmer should have faith in government we already waive off loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X