ಹೊಸಕೋಟೆಯಲ್ಲಿ ಸಾಲಬಾಧೆಗೆ ಬೆಂಕಿಹಚ್ಚಿಕೊಂಡು ರೈತ ಆತ್ಮಹತ್ಯೆ
ಮೈಸೂರು, ಡಿಸೆಂಬರ್ 20 : ಸಾಲಭಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವೇಣುಗೋಪಾಲ್(50) ಆತ್ಮಹತ್ಯೆಗೆ ಶರಣಾದ ರೈತ. ಮೃತ ರೈತ ವೇಣುಗೋಪಾಲ್ ಕೆ.ಆರ್.ನಗರ ಕಾರ್ಪೂರೇಷನ್ ಬ್ಯಾಂಕಿನಲ್ಲಿ ಸುಮಾರು 2 ಲಕ್ಷ ಮತ್ತು 3 ಲಕ್ಷ ಕೈಸಾಲ ಮಾಡಿಕೊಂಡಿದ್ದರು. ಈ ನಡುವೆ 2 ಎಕರೆ ಜಮೀನಿನಲ್ಲಿ ರಾಗಿ, ಹುರಳಿ ಸೇರಿದಂತೆ ಇನ್ನಿತರೆ ಬೆಳೆ ಬೆಳೆದಿದ್ದರು ಎನ್ನಲಾಗಿದೆ.

ತಾನು ಬೆಳೆದ ಬೆಳೆ ನಷ್ಟವಾದ ಹಿನ್ನಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ವೇಣುಗೋಪಾಲ್ ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಗುರುವಾರ ವೇಣುಗೋಪಾಲ್ ಸಾವನ್ನಪ್ಪಿದ್ದಾನೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications