ಕಟಾವು ಮಾಡಿದ ಕಬ್ಬು ಕೊಳ್ಳದ ಕಾರ್ಖಾನೆ ಎದುರು ವಿಷ ಸೇವಿಸಿದ ರೈತ ಸಾವು

ಗದಗ, ಡಿಸೆಂಬರ್ 15: ಕಟಾವು ಮಾಡಿದ ಕಬ್ಬನ್ನು ಸಕ್ಕರೆ ಕಾರ್ಖಾನೆ ತೆಗೆದುಕೊಳ್ಳಲು ನಿರಾಕರಿಸಿತೆಂದು ಅದೇ ಕಾರ್ಖಾನೆ ಎದುರು ರೈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ತಿಗರಿ ಗ್ರಾಮದ ರೈತ ಸಣ್ಣ ಹನುಮಪ್ಪ (55) ವಿಷ ಸೇವಿಸಿ ಮೃತಪಟ್ಟ ನತದೃಷ್ಟ ರೈತ. ಅವರು ಗದಗದ ವಿಜಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಎದುರು ವಿಷ ಸೇವಿಸಿದರು.ಕುಮಾರಸ್ವಾಮಿ-ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಮುಖ್ಯಾಂಶಗಳು

Farmer commit suicide in front of sugar factory in Gadag

ರೈತ ಸಣ್ಣ ಮರಿಯಪ್ಪ ಅವರು ಕಬ್ಬು ಬೆಳೆದು ಅದನ್ನು ಗದಗದ ವಿಜಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ಮಾರಿದ್ದರು. ಆದರೆ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಮಾಡಲು ತಡಮಾಡಿದ ಕಾರಣ ತಾನೇ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ತಂದಿದ್ದರು.

ಆದರೆ ತಾನೇ ಕಬ್ಬು ಕಟಾವು ಮಾಡಿಕೊಂಡ ರೈತನ ಕಂಡು ಕಾರ್ಖಾನೆ ವ್ಯವಸ್ಥಾಪಕ ಆಕ್ರೋಶಗೊಂಡಿದ್ದು, ರೈತರೇ ಕಟಾವು ಮಾಡಿದ ಕಬ್ಬನ್ನು ಅರೆಯಲು ತೆಗೆದುಕೊಳ್ಳುವುದಿಲ್ಲವೆಂದು ನಿರಾಕರಿಸಿದ್ದಾರೆ. ರೈತ ಸಣ್ಣ ಮರಿಯಪ್ಪ ವಿವಿಧ ರೀತಿಯಾಗಿ ಬೇಡಿಕೊಂಡರೂ ಸಹ ಕಬ್ಬನ್ನು ಕೊಳ್ಳಲಿಲ್ಲ ಹಾಗಾಗಿ ನೊಂದ ರೈತ ಕಾರ್ಖಾನೆ ಎದುರೇ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡರಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+