ಮೈಸೂರು ರೈತರ ನಿದ್ದೆಗೆಡಿಸಿದ ಕಾಡಾನೆಗಳು
ಮೈಸೂರು, ಡಿಸೆಂಬರ್, 22: ಮಾನವ ಮತ್ತು ಕಾಡಾನೆ ಸಂಘರ್ಷ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ತಲೆಮಾರುಗಳಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಸ್ಥಿತಿ ಕುಂಬಾರನಿಗೆ ವರುಷ ದೊಣ್ಣೆಗೊಂದು ನಿಮಿಷ ಎನ್ನುವಂತಾಗಿದೆ.
ಕಾಡಾನೆಗಳನ್ನು ಕಾಡಿಗೆ ಕಳುಹಿಸಿ ಕೆಲವು ದಿನಗಳು ಕಳೆದಿಲ್ಲ. ಪುನಃ ನಂಜನಗೂಡು, ಹೆಚ್.ಡಿ.ಕೋಟೆ ತಾಲೂಕಿನ ಅರಣ್ಯದ ಅಂಚಿನಲ್ಲಿರುವ ರೈತರ ಬೆಳೆಗಳನ್ನು ಆನೆಗಳು ನಾಶಪಡಿಸಿವೆ. ಅರಣ್ಯದಿಂದ ಹಿಂಡು ಹಿಂಡಾಗಿ ಬರುವ ಆನೆಗಳು ಬೆಳೆಯನ್ನು ನಾಶ ಮಾಡುತ್ತಿದ್ದು, ಜನರ ನಿದ್ದೆಗೆಡಿಸಿದೆ.[ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]

ರಾಗಿ, ಜೋಳ, ಟೋಮೆಟೋ, ಬಾಳೆಗಿಡಗಳನ್ನು ನಾಶ ಮಾಡಿರುವ ಆನೆಗಳನ್ನು ಓಡಿಸಲು ರಾತ್ರಿ ವೇಳೆ ಪಟಾಕಿ ಸಿಡಿಸಿ, ಬೆಂಕಿ ಹಾಕುತ್ತಾ ನಿದ್ದೆಗೆಟ್ಟು ರಾಗಿ ಹೊಲ ಕಾದು, ಕೊಯ್ಲು ಮುಗಿಸಿ ಬೆಳೆಯನ್ನು ಮನೆಗೆ ತಂದು ಮೆದೆ ಹಾಕಿದ್ದಾರೆ. ಆದರೆ ಕಣಕ್ಕೆ ನುಗ್ಗಿರುವ ಕಾಡಾನೆಗಳು ಮೆದೆಯನ್ನೇ ನಾಶ ಮಾಡಿ ತೆರಳಿವೆ.[ಚಿತ್ರಗಳು: ದುಬಾರೆ ಆನೆ ಶಿಬಿರದಲ್ಲಿ ಆನೆ ಹಬ್ಬ]
ಆನೆಗಳ ದಾಳಿಯಿಂದ ಕಂಗಾಲಾದ ರೈತರು, ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ರೈತರಿಗೆ ಆನೆಗಳ ಹಾವಳಿ ತಪ್ಪಿಸುವ ಭರವಸೆ ನೀಡಿದ್ದಾರೆ.












Click it and Unblock the Notifications