ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೊಟ್ಟ ಮೊದಲ ಬಾರಿಗೆ ರೈತರನ್ನು ಋಣಮುಕ್ತರನ್ನಾಗಿಸಿದ್ದು ಕಾಂಗ್ರೆಸ್'

|
Google Oneindia Kannada News

Recommended Video

Lok Sabha Elections 2019: ರೈತರ ಸಾಲ ಮನ್ನಾ ಮಾಡಿದ ಮೊದಲ ಪಕ್ಷ ಕಾಂಗ್ರೆಸ್ ಪಕ್ಷ ಎಂದ ಎಚ್ ಕೆ ಪಾಟೀಲ್

ಗದಗ, ಏಪ್ರಿಲ್ 18: ದೇಶದ ಬೆನ್ನೆಲುಬು ರೈತರನ್ನು ಋಣಮುಕ್ತಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಸಾಲದ ಸುಳಿಯಲ್ಲಿದ್ದ ರೈತರ ಸಾಲ ಮನ್ನಾದಂಥ ಯೋಜನೆಗಳನ್ನು ಹಮ್ಮಿಕೊಂಡು ರೈತರು ನೆಮ್ಮದಿಂದ ಜೀವನ ಕಳೆಯುವಂತೆ ಮಾಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಆರ್ ಪಾಟೀಲ್ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ಪಕ್ಷ ಕಳೆದ 60 ವರ್ಷಗಳಲ್ಲಿ ದೇಶಧ ಅಭಿವೃದ್ದಿಗೆ ಹೆಚ್ಚಿನ ಕೊಡುಗೆ ನೀಡಿದೆ. ಅನ್ನ ಭಾಗ್ಯದಂತಹ ಯೋಜನೆ ಜಾರಿಗೊಳಿಸಿ ಬಡವರಿಗೆ ನೆಮ್ಮದಿಯ ಬದುಕು ನೀಡಿದೆ. ಇಂತಹ ಕೊಡುಗೆಗಳನ್ನು ನೀಡಿದ ಪಕ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.

ಪಾಟೀಲರನ್ನು ಗೆಲ್ಲಿಸಿ, ರಾಹುಲ್ ಗಾಂಧಿ ಪಿಎಂ ಮಾಡಿ : ಎಚ್ಕೆ ಪಾಟೀಲ್ಪಾಟೀಲರನ್ನು ಗೆಲ್ಲಿಸಿ, ರಾಹುಲ್ ಗಾಂಧಿ ಪಿಎಂ ಮಾಡಿ : ಎಚ್ಕೆ ಪಾಟೀಲ್

ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದು, ಪಡಿತರ ವ್ಯವಸ್ಥೆ, ರೈತರನ್ನು ಗೇಣಿದಾರರಿಂದ ಜಮೀನು ಕೊಡಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ಬಡವರ ಪರ ಹೋರಾಟ ನಡೆಸುತ್ತದೆ. ರೈತರಿಗಾಗಿ ರಾಹುಲ್ ಗಾಂಧಿ ತಮ್ಮ ಅನೇಕ ಕಾರ್ಯಕ್ರಮಗಳ ಮೂಲಕ ಅಭಿವೃದ್ದಿಗೊಳಿಸುಲು ಮುಂದಾಗಿದ್ದಾರೆ. ನಾವು ಹೇಳಿದ ರೀತಿಯಲ್ಲ ನಡೆದಿದ್ದೇವೆ ಹಾಗೂ ನಡೆಯಲಿದ್ದೇವೆ. ನಮ್ಮ ಮೇಲೆ ನಂಬಿಕೆ ಇಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ಸಿನಿಂದ ಜನಪರ ಪ್ರಣಾಳಿಕೆ

ಕಾಂಗ್ರೆಸ್ಸಿನಿಂದ ಜನಪರ ಪ್ರಣಾಳಿಕೆ

ಕಾಂಗ್ರೆಸ್ ಪಕ್ಷ ಅನುಷ್ಠಾನಕ್ಕೆ ತರಬಹುದಾದಂಥ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಈ ಚುನಾವಣಾ ಪ್ರಣಾಳಿಕೆಯನ್ನು ಜನರು ಬಹಳ ಒಳ್ಳೆಯ ರೀತಿಯಲ್ಲಿ ಸ್ವಾಗತಿಸಿದ್ದಾರೆ. ನ್ಯಾಯ್ ಯೋಜನೆಯ ಮೂಲಕ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಮಧ್ಯಮ ವರ್ಗಕ್ಕೆ ಅಭಿವೃದ್ದಿಗೊಳಿಸಲಿದ್ದೇವೆ. ನಮ್ಮ ಪ್ರಣಾಳಿಕೆಯ ನಂತರ ಬಿಜೆಪಿಯ ನೆಲೆ ಕುಸಿದಿದ್ದು, ಮೋದಿ ಅವರ ಮಾತುಗಳಲ್ಲಿ ಬದಲಾವಣೆ ಆಗಿದೆ. ಇಂತಹ ಸಂಧರ್ಭದಲ್ಲಿ ಅರಾಜಕತೆಯ ಮೂಲಕ ಏನನ್ನಾದರೂ ಸಾಧಿಸಬಹುದು ಎನ್ನುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ

ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ

ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾದ ಅಲೆ ಇದೆ. ನಮ್ಮ ಮೈತ್ರಿ ಅಭ್ಯರ್ಥಿಗಳು 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಲಕ್ಷ್ಮೇಶ್ವರ ಹಾಗೂ ನರೇಗಲ್ ಮತ್ತು ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ನಾಳೆ ಹೆಚ್ ಕೆ ಪಾಟೀಲ ಅವರು ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ.
ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ

ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ

ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಕಳೆದ 5 ವರ್ಷಗಳಲ್ಲಿ ಶೂನ್ಯ ಸಾಧನೆಯನ್ನು ಮಾಡಿರುವ ಬಿಜೆಪಿ ಸರಕಾರ, ವಿರೋಧ ಪಕ್ಷಗಳ ಮೇಲೆ ಆರೋಪ ಹೊರೆಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಇನ್ನಿಲ್ಲದ ಸುಳ್ಳುಗಳನ್ನು ಹೇಳುತ್ತಿದ್ದು, ಸುಳ್ಳುಗಳ ಮೇಲೆ ಬಿಜೆಪಿ ಮತಯಾಚಿಸುತ್ತಿದೆ. ಸಂವಿಧಾನ ಬದಲಾಯಿಸುವುದಾಗಿ ಹೇಳಿರುವ ಬಿಜೆಪಿಯನ್ನು ಬೆಂಬಲಿಸಿದರೆ. ಭಾರತ ದೇಶ ಅಧೋಗತಿಯಲ್ಲಿ ಸಾಗುವುದು ಸ್ಪಷ್ಟ ಎಂದರು.

ಬಡವರ ಬಗ್ಗೆ ಕಾಂಗ್ರೆಸ್ಸಿಗೆ ಕಾಳಜಿ ಇದೆ

ಬಡವರ ಬಗ್ಗೆ ಕಾಂಗ್ರೆಸ್ಸಿಗೆ ಕಾಳಜಿ ಇದೆ

ಬಡವರ ಬಗ್ಗೆ ಕಾಂಗ್ರೆಸ್ ಪಕ್ಷ ಇಂದು ನಿನ್ನೆಯಿಂದ ಕಾಳಜಿ ತೋರಿಸುತ್ತಿಲ್ಲ. ನಮಗೆ ಬಡವರ ಕಲ್ಯಾಣದ ಬಗ್ಗೆ ಬದ್ಧತೆ ಇದೆ. ಇಂದಿರಾಗಾಂಧಿ ಅವರು ಬಡವರ ಏಳ್ಗೆಗಾಗಿ ಗರೀಬಿ ಹಠಾವೋ ದಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು ಬಡಜನರಿಗಾಗಿ ಕ್ಷೀರಭಾಗ್ಯ, ಅನ್ನಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ ಸೇರಿದಂತೆ ಹಲವಾರು ಭಾಗ್ಯಗಳನ್ನು ನೀಡಿದ್ದಾರೆ. ಹೀಗಾಗಿ, ಜನಪರ ಯೋಜನೆ ನೀಡುವಲ್ಲಿ ಕಾಂಗ್ರೆಸ್ ಮುಂದಿದೆ.

English summary
KPPC campaign committee chairman while campaigning for Haveri candidate D.R Patil said Congress party in the world to waive off Farmers loan and Anna Bhagya scheme is helping poor and needy of the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X