ಶೀಘ್ರದಲ್ಲೇ 226 ತಾಲೂಕುಗಳಲ್ಲಿ ಬರ ಪರಿಹಾರ ವಿತರಣೆ: ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ
ಚಿತ್ರದುರ್ಗ, ನವೆಂಬರ್, 22: ಬರಘೋಷಿಸಿದ ನಂತರ ಪರಿಹಾರ ನೀಡುವ ಕಾರ್ಯದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದಿದ್ದು, ಬೆಳೆಗಳ ಕ್ರಾಪ್ ಸರ್ವೆ ಮುಗಿದು ಅಂತಿಮ ಹಂತದಲ್ಲಿದೆ. ಈ ಕುರಿತು ಕೇಂದ್ರಕ್ಕೆ ಸಾಕಷ್ಟು ಒತ್ತಡ ತಂದಿದ್ದೀವಿ. ಶೀಘ್ರದಲ್ಲೇ 226 ತಾಲೂಕುಗಳಲ್ಲಿ ಬರ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಚಿತ್ರದುರ್ಗ ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಪರಿಹಾರ ವಿಚಾರವಾಗಿ ನಾನು, ಸಚಿವ ಪ್ರಯಾಂಕ ಖರ್ಗೆ, ಕೃಷ್ಣಭೈರೇಗೌಡ್ರು ಮುಖ್ಯಮಂತ್ರಿಗಳನ್ನು ಬೇಟಿ ಮಾಡೋಕೆ ಹೋಗಿದ್ದೆವು. ಆದರೆ ಭೇಟಿಗೆ ಅವಕಾಶ ನೀಡದ ಹಿನ್ನೆಲೆ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂದಿದ್ದೇವೆ ಎಂದರು.

ಈಗಾಗಲೇ ಹಲವು ಮೆಮೋರಂಡಮ್ ಹಾಗೂ ಪತ್ರ ಬರೆದಿದ್ದೀವಿ. ಅಂತಿಮವಾಗಿ ಪ್ರೋಸೆಸ್ ಆಗಿ ಒಂದು ಹಂತಕ್ಕೆ ಬಂದಿದೆ. ನಾವು ಕೊಟ್ಟ ಮೆಮೋತಂಡಮ್‌ಗೆ ಇನ್ನೂ ಪತ್ರ ಬಂದಿಲ್ಲ. ನಿನ್ನೆ ರಾತ್ರಿ ಈ ಕುರಿತಂತೆ ನನಗೆ ಮಾಹಿತಿ ಬಂದಿದೆ. ಸಮಯ ಫಿಕ್ಸ್ ಆದರೆ ನಾನು, ಕೃಷ್ಣ ಭೈರೇಗೌಡರು ಹೋಗುತ್ತೇವೆ. ಫೈನಾನ್ಸ್ ಮಿನಿಸ್ಟರ್ ಹಂತಕ್ಕೆ ಹೋಗಿದೆ ಅಂದರೆ ಇಂದು ಅಂತಿಮ ಮಾಡಲಾಗುತ್ತದೆ ಎಂದರು.
ಇನ್ನು ಎರಡ್ಮೂರು ದಿನಗಳ ಬಳಿಕ ಅಂತಿಮ ನಿರ್ಧಾರ ಆಗುತ್ತದೆ. ನಮ್ಮ ಸಚಿವ ಸಂಪುಟದಲ್ಲಿ ಕೂಡಾ ನಿರ್ಧಾರ ಮಾಡುತ್ತೇವೆ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಕೇಂದ್ರ ದ್ವೇಷದ ರಾಜಕೀಯ ಮಾಡುತ್ತಿದೆ. ನಾವು ಈಗಾಗಲೇ 226 ತಾಲ್ಲೂಕುಗಳನ್ನು ಬರ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಅವುಗಳಿಗೆ ಪರಿಹಾರ ನೀಡಲು ಪ್ರಾರಂಭ ಮಾಡುತ್ತೇವೆ ಎಂದರು.
ಪಡಿತರ ಅಕ್ಕಿಗೆ ಕೇಂದ್ರ ಸರ್ಕಾರ ಬಿಲ್ಲನ್ನು ನೀಡುವ ಚಿಂತನೆಗೆ ಪ್ರತಿಕ್ರಿಯಿಸಿದ ಅವರು, ಏನ್ ಮಾಡುತ್ತಾರೆ ಮಾಡಲಿ. ಅವರು ಕರ್ನಾಟಕದ ಬಗ್ಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. 26 ಲೋಕಸಭಾ ಸದಸ್ಯರುಗಳನ್ನು ಗೆಲ್ಲಿಸಿ ಕಳುಹುಸಿದ್ದಾರೆ. ಆ ಪ್ರಜ್ಞೆ ಅವರಿಗಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
2 ಬಾರಿ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದಿಂದ ಬೆಂಬಲ ಕೊಡಲಾಗಿದೆ. ರಾಜ್ಯದ ವಿಚಾರಗಳಲ್ಲೂ ಯಾವುದೇ ಗಮನ ನೀಡುತ್ತಿಲ್ಲ.
ರಾಜ್ಯದ ಬಗ್ಗೆ ಜಿ.ಎಸ್.ಟಿ ಯ ಪಾಲು ನೀಡಿಕೆ ಇರಬಹುದು, ಕಾವೇರಿ ನೀರು ಹಂಚಿಕೆ ವಿಚಾರ ಇರಬಹುದು, ಬರದ ವಿಚಾರದ ಬಗ್ಗೆ ಮೂರು ತಿಂಗಳಿನಿಂದ ಓಡಾಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ಕೊಡುತ್ತಿಲ್ಲ. 4 ಲಕ್ಷ ಕೋಟಿ ರೂಪಾಯಿ ರಾಜ್ಯದಿಂದ ಜಿ.ಎಸ್.ಟಿ ಹೋಗುತ್ತದೆ. ಆದರೆ ಅವರು ಕೇವಲ 50 ಸಾವಿರ ಕೋಟಿ ಮಾತ್ರ ನಮಗೆ ನೀಡುತ್ತಿದ್ದಾರೆ ಎಂದರು.
ನಮ್ಮ ಅವರ ರಾಜಕಾರಣ ಏನೇ ಇರಲಿ. ಅದು ಚುನಾವಣಾ ಸಮಯದಲ್ಲಿ ಮಾತ್ರ ರಾಜಕಾರಣ ಇರುತ್ತದೆ. ಅದನ್ನೇ ಮುಂದುವರಿಸಿ ರಾಜ್ಯದ ಜನರಿಗೆ ಸೌಲಭ್ಯಗಳನ್ನು ನೀಡುವ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು.
ಗ್ಯಾರಂಟಿ ಯೋಜನೆಗಳು ಕೇವಲ ಲೋಕಸಭಾ ಚುನಾವಣೆವರೆಗೆ ಮಾತ್ರ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳ ಜಾರಿಯ ಹತಾಷೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ವಿಧ್ಯಾನಿಧಿಯನ್ನು ಹೊರತು ಪಡಿಸಿ ಉಳಿದ ಯೋಜನೆಗಳು 5 ವರ್ಷ ಜಾರಿಯಲ್ಲಿರುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದರು.
ಬಿಜೆಪಿಯವರು ಜನರಿಗೆ ಲೋಕಸಭೆ ಚುನಾವಣೆ ಇರುವುದರಿಂದ ಸುಳ್ಳು ಹೇಳುತ್ತಿದ್ದಾರೆ. ಆರ್.ಎಸ್.ಎಸ್ ಬ್ಯಾನ್ ಮಾಡುವ ಕುರಿತು ನಾವು ಎಲ್ಲೂ ಹೇಳಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವ ಯಾವುದೇ ಸಂಘಟನೆ ಇದ್ದರೂ ಕ್ರಮ ಕೈಗೊಳ್ಳಿ ಅಂತಾ ಅಷ್ಟೇ ಹೇಳಿದ್ದೇವೆ. ಸಂಘ ಸಂಸ್ಥೆಗಳ ಜನರ ಹಿತದೃಷ್ಟಿಯಿಂದ ಮಾಡಿದರೆ ಹಾನಿಯಲ್ಲ. ಸಾರ್ವಜನಿಕ ಸಮಸ್ಯೆಗಳು ಆಗಬಾರದು ಅಷ್ಟೇ ಎಂದು ಹೇಳಿದರು.
ಬಿಜೆಪಿಯವುರ ಸೋಲಿನಿಂದ ಹತಾಶರಾಗಿದ್ದಾರೆ. ಅವರಿಗೆ ಏನೂ ಸಿಗುತ್ತಿಲ್ಲ. ಏನೋ ಹುಡುಕುತ್ತಿದ್ದಾರೆ. 6 ತಿಂಗಳ ಆಯಿತು ವಿರೋಧ ಪಕ್ಷ ನಾಯಕ, ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ. ಯತ್ನಾಳ್ ಹೊಡೆತ ಯಡಿಯೂರಪ್ಪ, ಬೊಮ್ಮಾಯಿಗೆ ತಡೆಯಲು ಆಗಲ್ಲ. ಇವರಿಬ್ಬರೂ ಯಾವ ರೀತಿಯಲ್ಲಿ ತಡೆದುಕೊಳ್ಳುತ್ತಾರೆ ನೋಡೋಣಾ ಎಂದರು.
ಕಾಂಗ್ರೆಸ್‌ನವರು ಬಚ್ಚಾಗಳು ಎಂಬ ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾಮ್ರಾಟ್ ಅವರಿಗೆ ಧನ್ಯವಾದಗಳು. ಅವರು ನಮ್ಮನ್ನ ಭಸ್ಮ ಮಾಡುವ ಶಿವ ಶಕ್ತಿ ಪಡೆದಿದ್ದಾರೆ ಅಂತಾ ಕಾಣಿಸುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಕಲ್ಲಿದ್ದಲು ವಿಚಾರದಲ್ಲಿ ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ಕ್ರಮವಾಗುತ್ತದೆ. ಜಾತಿ ಗಣತಿ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವು ಮನೆಗಳಿಗೆ ಭೇಟಿ ನೀಡಿಲ್ಲ ಎಂಬ ಆತಂಕವಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಿದ್ದೇವೆ ಎಂದಿದ್ದಾರೆ ಎಂದರು.
ನಿಗಮ ಮಂಡಳಿ ನೇಮಕಾತಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಬಸವರಾಯರೆಡ್ಡಿ ನಮ್ಮ ಪಕ್ಷದಲ್ಲಿ ಹಿರಿಯರಿದ್ದಾರೆ. ಅವರು ಮಂತ್ರಿ ಆಗಬೇಕಾದವರು. ಅವರನ್ನ ಮುಂದೆ ನಮ್ಮ ಪಕ್ಷ ಪರಿಸಣಿಸುತ್ತದೆ. ಆಸೆ ಪಡುವುದು ಯಾವುದೇ ತಪ್ಪಲ್ಲ. ಹೆಚ್.ಡಿ.ಕುಮಾರಸ್ವಾಮಿರವರು ಆರು ತಿಂಗಳಿಂದ ಮಾತನಾಡುತ್ತಿದ್ದಾರೆ. ಅವರು ಅಧಿವೇಶನದಲ್ಲಿ ಏನೂ ಮಾತನಾಡುತ್ತಾರೆ ಎಂಬುದನ್ನೂ ನೋಡೋಣಾ ಎಂದು ಹೇಳಿದರು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications