ಲಾಲ್ ಬಾಗ್ ಸುತ್ತ ವಿಶೇಷ ಪಾರ್ಕಿಂಗ್ ವ್ಯವಸ್ಥೆ

ಆ.7ರಿಂದ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದ್ದು, ಆ.15ರ ವರೆಗೆ ನಡೆಯಲಿದೆ. ಮೂರು ದಿನಗಳ ಸಾಲು ರಜೆಗಳ ಹಿನ್ನಲೆಯಲ್ಲಿ ಲಾಲ್ ಬಾಗ್ ಗೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಆದ್ದರಿಂದ ವಿಶೇಷ ಪಾರ್ಕಿಂಗ್ ಸೇವೆ ಪ್ರಾರಂಭಿಸಲಾಗಿದೆ.
ಲಾಲಾ ಬಾಗ್ ವೇಸ್ಟ್ ಗೇಟ್ ವೃತ್ತದ ಮುಂಭಾಗವಿದ್ದ ದ್ವಿ ಚಕ್ರವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ತೆಗೆಯಲಾಗಿದೆ. ಆ.15ರ ತನಕ ಲಾಲ್ ಬಾಗ್ ಸುತ್ತಮುತ್ತ ಈ ವಿಶೇಷ ಪಾರ್ಕಿಂಗ್ ಸೌಲಭ್ಯ ಲಭ್ಯವಿರುತ್ತದೆ.
ಪಾರ್ಕಿಂಗ್ ವಿವರ
* ವಾಣಿವಿಲಾಸ್ ರಸ್ತೆಯಲ್ಲಿ ಲಾಲ್ ವಾಗ್ ವೆಸ್ಟ್ ಗೇಟ್ ವೃತ್ತದಿಂದ ಶೇಷಮಹಲ್ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ ಕಾರ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
* ಎನ್ಎಂಕೆ ರಾವ್ ರಸ್ತೆಯಲ್ಲಿ ಲಾಲ್ ಬಾಗ್ ವೆಸ್ಟ್ ಗೇಟ್ ವೃತ್ತದಿಂದ ಮಿಲ್ಕ್ ಬೂತ್ ಜಂಕ್ಷನ್ ವರೆಗೆ ರಸ್ತೆಯ ಎಡಬದಿಯಲ್ಲಿ ದ್ವಿ ಚಕ್ರವಾಹನ ಪಾರ್ಕ್ ಮಾಡಬಹುದು.
* ಎನ್ಎಂಕೆ ರಾವ್ ರಸ್ತೆಯಲ್ಲಿ ಮಿಲ್ಕ್ ಬೂತ್ ಜಂಕ್ಷನ್ ನಿಂದ ಲಾಲ್ ಬಾಗ್ ವೆಸ್ಟ್ ಗೇಟ್ ವೃತ್ತದ ವರೆಗೆ ಕಾರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಆ.15ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಫಲಪುಷ್ಪ ಪ್ರದರ್ಶನ ಅಂತ್ಯಗೊಂಡ ನಂತರ ವಿಶೇಷ ಪಾರ್ಕಿಂಗ್ ವ್ಯವಸ್ಥೆ ರದ್ದಾಗಲಿದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications