ಕ್ಷಮಿಸಿ, ಮೈಸೂರಿನಲ್ಲಿ ಹಾಪ್ ಕಾಮ್ಸ್ ಮುಚ್ಚಿದೆ

ಅರಮನೆ ಉತ್ತರ ದ್ವಾರದಲ್ಲಿರುವ ಕರ್ಜನ್ ಪಾರ್ಕ್‌ನಲ್ಲಿ ಆರಂಭವಾದ ಮುಷ್ಕರ ಮೂರು ದಿನಕ್ಕೆ ಕಾಲಿಟ್ಟರೂ ಇನ್ನೂ ಮುಕ್ತಾಯವಾಗುವ ಲಕ್ಷಣ ಕಂಡು ಬಂದಿಲ್ಲ.
ನೌಕರರಿಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಬೆಂಬಲ ಕೂಡಾ ಸಿಕ್ಕಿದೆ.
ಹಾಪ್‌ಕಾಮ್ಸ್ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ದತ್ತ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಇರುವ ಹಾಪ್‌ಕಾಮ್ಸ್‌ನ ನೂರಾರು ಮಂದಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಹಾಪ್ ಕಾಮ್ಸ್ ನಂಬಿಕೊಂಡು ಹಣ್ಣು ತರಕಾರಿ ಕೊಳ್ಳುತ್ತಿದ್ದ ಮೈಸೂರಿನ ನಗರವಾಸಿಗಳಿಗೆ ಭಾರಿ ತೊಂದರೆಯಾಗಿದೆ.
* 25 ರಿಂದ 30 ವರ್ಷ ಸೇವೆಸಲ್ಲಿಸಿರುವ ಖಾಯಂ ನೌಕರರಿಗೆ 5ನೆ ವೇತನ ಆಯೋಗದ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು.
* 18 ರಿಂದ 20 ವರ್ಷ ಸೇವೆ ಸಲ್ಲಿಸಿರುವ ನೌಕರರನ್ನು ಖಾಯಂಗೊಳಿಸಬೇಕು.
* ಜಿಲ್ಲೆಯಲ್ಲಿ 97 ಮಂದಿ ಖಾಯಂ ನೌಕರರು ಹಾಗೂ 28 ಮಂದಿ ದಿನಗೂಲಿ ನೌಕರರಿದ್ದಾರೆ. ಎಲ್ಲರಿಗೂ ಸಮನಾದ ಸರ್ಕಾರಿ ಸೌಲಭ್ಯ ಸಿಗಬೇಕು ಎಂದು ನೌಕರರು ಒತ್ತಾಯಿಸುತ್ತಿದ್ದಾರೆ.












Click it and Unblock the Notifications