ಬೆಂಗಳೂರಿನಲ್ಲಿ ಮಾವು, ಹಲಸಿನ ಮೇಳ ಪ್ರಾರಂಭ

mango
ಬೆಂಗಳೂರು, ಮೇ 31 : ನಗರದ ಮಾವು ಮತ್ತು ಹಲಸು ಪ್ರಿಯರಿಗೆ ಸಿಹಿ ಸುದ್ದಿ. ತೋಟದ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘವು ಮಾವು ಮತ್ತು ಹಲಸಿನ ಮಾರಾಟ ಮೇಳವನ್ನು ಗುರುವಾರದಿಂದ ಪ್ರಾರಂಭಿಸಿದೆ. ಮಾವು, ಹಲಸು ಬೆಳೆಯ ಋತುಮಾನ ಅಂತ್ಯಗೊಳ್ಳುವವರೆಗೆ ಮೇಳ ನಡೆಯಲಿದೆ.

ಗುರುವಾರ ಹಡ್ಸನ್ ವೃತ್ತದಲ್ಲಿರುವ ಹಾಪಾಕಾಮ್ಸ್‌ನಲ್ಲಿ ಮೇಳವನ್ನು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಮೈಸೂರು, ರಾಮನಗರ, ಕೋಲಾರ, ಧಾರವಾಡದಲ್ಲೂ ಮಾವು ಮತ್ತು ಹಲಸು ಮಾರಾಟ ಮೇಳ ನಡೆಸಲಾಗುವುದು ಎಂದು ಹೇಳಿದರು.

ರೈತರಿಗೆ ಹೆಚ್ಚಿನ ದರ ನೀಡಿ ಮಾವಿನ ಹಣ್ಣುಗಳನ್ನು ಖರೀದಿಸಿ, ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದು ಮೇಳದ ವಿಶೇಷವಾಗಿದೆ. ಪ್ರತಿ ಕೆ.ಜಿಗೆ ಶೇ 10 ರಷ್ಟು ರಿಯಾಯಿತಿ ದರದಲ್ಲಿ ಮಾರಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಾವವಿನೊಂದಿಗೆ ಹಲಸಿನ ಹಣ್ಣು ಸಹ ಮೇಳದ ಪ್ರಮುಖ ಆರ್ಷಣೆಯಾಗಲಿದೆ. ಇತ್ತೀಚೆಗೆ ಹಲಸಿನ ಹಣ್ಣಿಗೆ ತುಂಬಾ ಬೇಡಿಕೆ ಇದೆ. ರೈತರು ಹಲಸಿನ ಹಣ್ಣು ಬೆಳೆಯುತ್ತಿದ್ದಾರೆ. ಸರ್ಕಾರ ಮಾವು ಮತ್ತು ಹಲಸು ಬೆಳೆಗೆ ಉತ್ತೇಜನ ನೀಡಲಿದೆ ಎಂದರು.

ಮಳೆಯ ಅಭಾವದಿಂದ ಮಾವು ಮತ್ತು ಹಸಲಿನ ಫಸಲು ಕಡಿಮೆ ಆಗಿದೆ. ಮಲೆನಾಡು, ಕರಾವಳಿ, ದಕ್ಷಿಣ ಭಾಗದ ಜಿಲ್ಲೆಗಳಲ್ಲಿ 6,245 ಹೆಕ್ಟೇರ್ ನಲ್ಲಿ ಹಲಸು ಬೆಳೆಯಲಾಗಿದೆ. ಈ ವರ್ಷದ ಮೇಳದಲ್ಲಿ 1500 ಟನ್ ಮಾವು ಹಾಗೂ 200 ಟನ್ ಹಲಸು ಮಾರಾಟ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ಹೇಳಿದರು.

ಎಲ್ಲಿ ಸಿಗುತ್ತದೆ ಮಾವು : ಮೇಳದಲ್ಲಿ 12 ಬಗೆಯ ಉತ್ತಮವಾದ ಮಾವಿನ ಹಣ್ಣುಗಳು ಲಭ್ಯವಿದೆ. ವಿವಿಧ ರೀತಿಯ ಹಲಸಿನ ಹಣ್ಣುಗಳು ದೊರೆಯುತ್ತವೆ. ನಗರದ 239 ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮೇಳ ಮುಗಿಯುವವರೆಗೂ ಇವು ಲಭ್ಯವಿರುತ್ತದೆ.

ಸಂಚಾರಿ ಮಳಿಗೆಗಳು : ಹಾಪ್ ಕಾಮ್ಸ್ ಗ್ರಾಹಕರಿಗಾಗಿ ಎಚ್.ಎಸ್.ಆರ್.ಲೇಔಟ್, ಮೈಕೋ ಲೇಔಟ್, ಎಂ.ಎಸ್.ಬಿಲ್ಡಿಂಗ್ ಆವರಣ, ಕೆಂಗೇರಿ ಉಪನಗರ, ಮತ್ತಿಕೆರೆ ಬಳಿಯ ಸುಂದರನಗರ ಲೇಔಟ್, ಜೆ.ಪಿ.ನಗರದ ಮಿನಿ ಫಾರೆಸ್ಟ್ ಬಳಿ ಸಂಚಾರಿ ಕೇಂದ್ರಗಳನ್ನು ಪ್ರಾರಂಭಿಸಿದೆ.

ಮಾವಿನ ಹಣ್ಣಿನ ದರಗಳು (ಪ್ರತಿ ಕೆಜಿಗೆ) : ಸೇಂಧೂರ 30 ರೂ, ರಸಪುರಿ 48, ಬಾದಾಮಿ 68, ಆಲ್ಫಾನ್ಸೋ 94, ಮಲ್ಲಿಕಾ 62, ಮಲಗೋವ 70 ರತ್ನಗಿರಿ 58, ಬೈಗಾನ್‌ಪಲ್ಲಿ 47, ಕೇಸರ್ 62, ಅಮರಪಲ್ಲಿ 54, ದಸೇರಿ 75, ಸಕ್ಕರೆಗುತ್ತಿ 47, ಕಾಲಾಪಾಡು 40, ತೋತಾಪುರಿ 20. ಹಲಸಿನ ಹಣ್ಣು ಪ್ರತಿ ಕೆಜಿಗೆ 14 ರೂ.ಗೆ ದೊರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+