• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸಕ್ಕರೆ ರಫ್ತಿಗೆ ನಿರ್ಬಂಧ, ಜಾಗತಿಕ ಪೂರೈಕೆಯಲ್ಲಿ ಬಿಕ್ಕಟ್ಟು

|
Google Oneindia Kannada News

ಬೆಂಗಳೂರು, ನವೆಂಬರ್ 06: ಭಾರತ ದೇಶವು 2022 -2023 ನೇ ಸಾಲಿನ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿದ್ದು, ಪರಿಣಾಮವಾಗಿ ಸಕ್ಕರೆ ಸಾಗಣೆಯಲ್ಲಿ ಮುಂದಿರುವ ಬ್ರೆಜಿಲ್‌ನಲ್ಲಿ ಪೂರೈಕೆಯ ಬಿಕ್ಕಟ್ಟು ಎದುರಿಸುತ್ತಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ಒತ್ತಡ ಉಂಟಾಗಲು ಕಾರಣವಾಗಿದೆ.

ಕೇಂದ್ರ ಆಹಾರ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಮೇ 31ರ ಒಳಗೆ ಜಾಗತಿಕ ಮಾರುಕಟ್ಟೆಯಲ್ಲಿ 6 ಮಿಲಿಯನ್ ಟನ್‌ ಸಕ್ಕರೆ ಮಾರಾಟ ಮಾಡಲು ದಕ್ಷಿಣ ಏಷ್ಯಾದ ರಾಷ್ಟ್ರವು ಗುರಿ ಹೊಂದಿದೆ. ಇದು ಮುಂದಿನ 2023 ಅಕ್ಟೋಬರ್ ಒಳಗೆ ಇನ್ನಷ್ಟು ಸಕ್ಕರೆ ಸಾಗಣೆಗೆ ಪ್ರಮಾಣ, ಅದಕ್ಕೆ ನೀಡಬಹುದಾದ ಅನುಮತಿಯನ್ನು ಸೂಚಿಸುತ್ತದೆ.

 ವಿದ್ಯಾರ್ಥಿ ನಿಲಯಗಳ ಆಹಾರ ಗುಣಮಟ್ಟ ಪರಿಶೀಲನೆಗೆ ತಂಡ ರಚನೆ: ಸಚಿವ ಬಿ.ಸಿ.ಪಾಟೀಲ್ ವಿದ್ಯಾರ್ಥಿ ನಿಲಯಗಳ ಆಹಾರ ಗುಣಮಟ್ಟ ಪರಿಶೀಲನೆಗೆ ತಂಡ ರಚನೆ: ಸಚಿವ ಬಿ.ಸಿ.ಪಾಟೀಲ್

ಬ್ರೆಜಿಲ್‌ನಲ್ಲಿ ವಿಪರೀತ ಮಳೆ ಬಿದ್ದಿದ್ದು, ಕಬ್ಬು ಬೆಳೆ ನಾಶವಾಗಿದೆ. ಅಕ್ಟೋಬರ್ ಅಂತ್ಯದಿಂದ ನ್ಯೂಯಾರ್ಕ್‌ನಲ್ಲಿನ ಕಚ್ಚಾ ಸಕ್ಕರೆಯ ಬೆಲೆ ಶೇ. 6ಕ್ಕಿಂತಲೂ ಹೆಚ್ಚಾಗಿದೆ. ಉತ್ಪಾದನೆಯ ವೇಗವನ್ನು ಆಧರಿಸಿ ಭಾರತವು ಮೊದಲ ಕಂತಿನಲ್ಲಿ 6 ಮಿಲಿಯನ್ ಟನ್ ರಫ್ತು ಮಾಡಲು ಹಾಗೂ ಎರಡನೇ ಕಂತಿನಲ್ಲಿ ಸುಮಾರು 3 ಮಿಲಿಯನ್ ಟನ್‌ನಷ್ಟು ಸಕ್ಕರೆ ರಫ್ತಿಗೆ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರ ದೇಶದಲ್ಲಿ ಸಕ್ಕರೆಯ ಲಭ್ಯತೆ ದೃಷ್ಟಿಯಿಂದ 2023ರ ಅಕ್ಟೋಬರ್ ವರೆಗೆ ನಿರ್ಬಂಧಗಳನ್ನು ವಿಸ್ತರಿಸಿದೆ. ಆದಾಗಿಯೂ ಕೆಲವು ಕೋಟಾಗಳಡಿ ಸಕ್ಕರೆ ಮಾರಾಟಕ್ಕೆ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ತನ್ನ ಆದೇಶದಲ್ಲಿ ಈ ಹಿಂದೆ ತಿಳಿಸಿದೆ.

35.5 ಮಿಲಿಯನ್ ಟನ್‌ ಸಕ್ಕರೆ ಉತ್ಪಾದನೆ

ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಪ್ರಕಾರ, ಭಾರತ ದೇಶ ಒಂದರಲ್ಲೇ ಈ ವರ್ಷ 35.5 ಮಿಲಿಯನ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆ ನಿರೀಕ್ಷಿಸಲಾಗಿದೆ. ಸಕ್ಕರೆ ಉತ್ಪಾದನೆಯಲ್ಲಿ ಭಾರತವು ಇಂಡೋನೇಷ್ಯಾ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳಿಗಿಂತಲೂ ಮುಂದಿದೆ.

Crisis in global supply: India restricts on sugar exports

ಭಾರತೀಯ ಸಕ್ಕರೆ ಕಾರ್ಖಾನೆಗಳು ಈಗಾಗಲೇ 2.2 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿವೆ. ಹೀಗೆಂದು ಪ್ರಸಕ್ತ ವರ್ಷದಲ್ಲಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸುಮಾರು 5,00,000 ಟನ್ ಸಕ್ಕರೆಯನ್ನು ವ್ಯಾಪಾರ ಮಾಡಿದ ಮೀರ್ ಕಮಾಡಿಟೀಸ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಒಬ್ಬರು ತಿಳಿಸಿದ್ದಾರೆ.

English summary
Restrictions on India sugar exports crisis in global supply,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X