ಕಲಘಟಗಿಯಲ್ಲಿ ಏಡಿ ಕೃಷಿ, ಎಷ್ಟು ಲಾಭ ಗಳಿಸಬಹುದು?
ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಏಡಿ ಕೃಷಿ ಮಾಡಿರುವ ಸಚಿನ್ ಬಸೂದ ಆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಧಾರವಾಡ, ಫೆಬ್ರವರಿ 24; ಧಾರವಾಡ ವಾರ್ತಾ ಇಲಾಖೆಯಿಂದ ಮಾಧ್ಯಮ ಪ್ರವಾಸ ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಯೋಜನೆಗಳ ಪ್ರದೇಶಗಳಿಗೆ ಭೇಟಿ ಮಾಹಿತಿ ತಿಳಿಸಲಾಯಿತು. ಏಡಿ ಕೃಷಿ, ಅಮೃತ ಸರೋವರ ಯೋಜನೆ ಕುರಿತು ವಿವರಣೆಗಳನ್ನು ಸ್ಥಳದಲ್ಲಿಯೇ ನೀಡಲಾಯಿತು. ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ಏಡಿ ಕೃಷಿ ಎಲ್ಲರ ಗಮನ ಸೆಳೆಯಿತು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಾಧ್ಯಮ ಪ್ರತಿನಿಧಿಗಳು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ವಿನೂತನ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಪ್ರವಾಸದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಏಡಿ ಕೃಷಿ ಮಾಡಿರುವ ಸಚಿನ್ ಬಸೂದ ಅವರನ್ನು ಭೇಟಿ ಮಾಡಲಾಯಿತು. ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದ ವ್ಯಾಪ್ತಿಯಲ್ಲಿನ ರೈತ ಉದ್ದನವರ ಜಮೀನಿನಲ್ಲಿ ಸಚಿನ್ ಬೂಸದ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಮಾಡಿರುವ ಕೃಷಿ ಹೊಂಡದಲ್ಲಿ ಏಡಿ ಕೃಷಿಯನ್ನು ಮಾಡಿದ್ದಾರೆ.
ಡಾ. ಸುರೇಶ ಇಟ್ನಾಳ ಮಾತನಾಡಿ, 'ಮಹಾರಾಷ್ಟ್ರದಲ್ಲಿ ಏಡಿ ಕೃಷಿಯ ಬಗ್ಗೆ ತರಬೇತಿ ಪಡೆದು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ಸಚಿನ್ ಬಸೂದ ಏಡಿ ಕೃಷಿ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಏನು ಉತ್ತೇಜನ ಕೊಡಲು ಸಾಧ್ಯವಿದೆ ಅದನ್ನು ಮಾಡಿಕೊಡುತ್ತೇವೆ ಮತ್ತು ನರೇಗಾ ಯೋಜನೆ, ಕೃಷಿ ಇಲಾಖೆಯ ಇತರೆ ಯೋಜನೆಗಳ ಸಹಕಾರದೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಜಿಲ್ಲೆಯ ಇತರೆ ರೈತರಿಗೆ ಮಾದರಿಯಾಗಿದ್ದಾರೆ" ಎಂದರು.

ಏಡಿ ಕೃಷಿಯ ಕುರಿತು ಮಾಹಿತಿ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದ ವ್ಯಾಪ್ತಿಯ ರೈತ ಉದ್ದನವರ ಜಮೀನಿನಲ್ಲಿ ಸಚಿನ್ ಬೂಸದ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಮಾಡಿರುವ ಕೃಷಿ ಹೊಂಡದಲ್ಲಿ ಪ್ರಥಮ ಬಾರಿಗೆ ಏಡಿ ಕೃಷಿಯನ್ನು ಮಾಡಿದ್ದಾರೆ. ಇದಕ್ಕಾಗಿ ಅವರು ಮಹಾರಾಷ್ಟ್ರದಲ್ಲಿ ತರಬೇತಿಯನ್ನು ಸಹ ಪಡೆದಿದ್ದಾರೆ. ಇಲ್ಲಿ 1700 ರಿಂದ 1800ರ ತನಕ ಏಡಿಗಳು ಇವೆ, ಇವುಗಳಿಗೆ ಆಹಾರವಾಗಿ ಮೀನು, ಮಾಂಸದ ಬೋಟಿ ಕಲಿಜಾ, ಕೋಳಿಯ ಕಾಲು, ಹಾಕುತ್ತಾರೆ. ಒಂದು ಏಡಿಯು 2 ವರ್ಷ ಬದುಕುತ್ತದೆ. ಒಂದು ಏಡಿಯಿಂದ ಸುಮಾರು 100 ಮರಿಗಳನ್ನು ಪಡೆಯಬಹುದಾಗಿದೆ ಎಂದು ಸಚಿನ್ ಬಸೂದ ಏಡಿ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

400 ರಿಂದ 500 ರೂ. ಸಿಗಬಹುದು
ಸಚಿನ್ ಬಸೂದ ಮಾತನಾಡಿ, "ನಾವು ರಾಕ್ ಏಡಿ ಮತ್ತು ಮಹಾರಾಷ್ಟ್ರದ ಲಾತೂರ್ ಏಡಿಗಳನ್ನು ಇಲ್ಲಿ ಸಾಕಿದ್ದೇವೆ. ಮಾರಾಟದ ಸಮಯದಲ್ಲಿ 1 ಕೆ.ಜಿ. ತೂಕದ ಏಡಿಗಳಿಗೆ 400 ರಿಂದ 500 ರೂ.ಗಳು ಸಿಗಬಹುದು. ಏಡಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ರುಚಿಯಾಗಿ ಇರುತ್ತದೆ. ಆದ್ದರಿಂದ ಇವುಗಳಿಗೆ ಬೇಡಿಕೆಯೂ ಇದೆ. ಇವುಗಳಿಂದ ವರ್ಷಕ್ಕೆ ಬಂಡವಾಳದ ಶೇ.30 ರಷ್ಟು ಲಾಭವನ್ನು ಗಳಿಸಬಹುದು. ಪ್ರಾರಂಭಿಕ ಹಂತದಲ್ಲಿ 50x50 ಜಾಗದಲ್ಲಿ ಕೃಷಿ ಮಾಡುತ್ತಿದ್ದೇವೆ. ವಾರಕ್ಕೊಮ್ಮೆ ನೀರು ತೆಗೆದು ಉತ್ತಮ ವಾತಾವರಣ ಸೃಷ್ಟಿ ಮಾಡಬೇಕು ಮತ್ತು ಅವುಗಳು ಹೊಂದಿಕೊಳಬೇಕು ಇವುಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಏಡಿ ಕೃಷಿ ಮಾಡುವ ಆಲೋಚನೆ ಇದೆ" ಎಂದು ವಿವರಣೆ ನೀಡಿದರು.

ಇತರ ರೈತರಿಗೆ ಮಾದರಿಯಾಗಿದ್ದಾರೆ
ರೈತ ಉದ್ದನವರ ಜಮೀನಿನಲ್ಲಿ ಸಚಿನ್ ಬೂಸದ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಮಾಡಿರುವ ಕೃಷಿ ಹೊಂಡದಲ್ಲಿ ಪ್ರಥಮ ಬಾರಿಗೆ ಏಡಿ ಕೃಷಿಯನ್ನು ಕೈಗೊಂಡು ಯಶಸ್ಸುಗಳಿಸಿದ್ದಾರೆ. ಈ ಬಗ್ಗೆ ತರಬೇತಿ ಪಡೆದುಕೊಂಡು ಬಂತು ತುಂಬಾ ಹೊಸತನದಿಂದ ಈ ಕೈಷಿಯನ್ನು ಅವರು ಕೈಗೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಅವರಿಗೆ ಅಗತ್ಯ ಬೆಂಬಲವನ್ನು ನೀಡುತ್ತಿದೆ.
ನರೇಗಾ ಯೋಜನೆ, ಕೃಷಿ ಇಲಾಖೆಯ ಇತರೆ ಯೋಜನೆಗಳ ಸಹಕಾರದೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಸಹ ಅವರು ಅಳವಡಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಜಿಲ್ಲೆಯ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಇದು ನಿಜಕ್ಕೂ ಸಂತೋಷ ತರುವ ವಿಷಯ ಎಂದು ಧಾರವಾಡ ಜಿಲ್ಲಾ ಪಂಚಾಯತಿ ಸಿಇಒ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.

ಗೌವನಕೆರೆ ಸಮಗ್ರ ಅಭಿವೃದ್ಧಿ
ಮಾಧ್ಯಮ ಪ್ರವಾಸದ ಸಂದರ್ಭದಲ್ಲಿ ದೇವಲಿಂಗಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ 2022-23 ನೇ ಸಾಲಿನ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಗೊಳಿಸಲಾದ ದೇವಲಿಂಗಿಕೊಪ್ಪ ಗ್ರಾಮದ ಗೌವನಕೆರೆಯನ್ನು ವೀಕ್ಷಣೆ ಮಾಡಲಾಯಿತು. ಈ ಕೆರೆಯ ವಿಸ್ತೀರ್ಣ 5 ಎಕರೆ 15 ಗುಂಟೆ.
ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ 75ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಇಡೀ ಜಿಲ್ಲೆಗೆ ಸುಮಾರು 75 ಕೆರೆಗಳನ್ನು ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿ 14 ಕೆರೆಗಳನ್ನು ಗುರುತಿಸಲಾಗಿದೆ. ದೇವಲಿಂಗಿ ಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಯನ್ನು ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಸುಮಾರು 18 ಲಕ್ಷ ರೂ.ಗಳಲ್ಲಿ ಅಭಿವೃದ್ಧಿಗೊಳಿಸಲಾಗಿದೆ.
5 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸುಮಾರು 27 ಸಾವಿರ ಕ್ಯೂಸೆಕ್ ನೀರನ್ನು ಸಂಗ್ರಹಿಸುತ್ತಿದ್ದೆವು. ಕೆರೆ ಅಭಿವೃದ್ಧಿಪಡಿಸಿದ ನಂತರ ಸುಮಾರು 37 ಸಾವಿರ ಕ್ಯೂಸೆಕ್ ನೀರನ್ನು ಸಂಗ್ರಹ ಮಾಡಿದ್ದೇವೆ. ಸುತ್ತಮುತ್ತಲು ಬಹಳಷ್ಟು ಜಾನುವಾರುಗಳು ಇರುವುದರಿಂದ ಅವುಗಳಿಗೆ ಕುಡಿಯುವ ನೀರನ್ನು ಒದಗಿಸುವ ವ್ಯವಸ್ಥೆ ಆಗಿದೆ. ಬೇಸಿಗೆಯಲ್ಲಿ ಬೋರ್‌ವೆಲ್‌ಗಳು ನೀರಿನ ಕೊರತೆ ಎದುರಿಸುತ್ತಿದ್ದವು. ಕೆರೆ ಅಭಿವೃದ್ಧಿ ಪಡಿಸಿರುವುದರಿಂದ ಜಾನುವಾರುಗಳಿಗೆ ಬಹಳ ಅನುಕೂಲವಾಗಿದೆ.












Click it and Unblock the Notifications