ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ crisisಗೆ ನೈಸರ್ಗಿಕ ಪರಿಹಾರ: ಸುಭಾಷ್ ಪಾಳೇಕರ್

|
Google Oneindia Kannada News

ಕೊರೊನಾ ವೈರಸ್ ಸೋಂಕಿನ ಕಾರಣ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಸೊರಗಿವೆ. ಅಲ್ಪ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿದ್ದ ಕೃಷಿ ಕ್ಷೇತ್ರದ ಮೇಲೂ ಬಹುದೊಡ್ಡ ಪೆಟ್ಟು ಬಿದ್ದಿದೆ. ಆ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮೇ 7ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಸಂಘಟನೆಗಳ ಮುಖಂಡರುಗಳ ಸಭೆ ಕರೆದಿದ್ದರು. ಅನೇಕ ಕೃಷಿ ಚಿಂತಕರು, ರೈತ ಮುಖಂಡರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ಒನ್ ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಸರಣಿಯನ್ನು ಪ್ರಕಟಿಸುತ್ತಿದೆ.

ಅದರ ಜೊತೆಗೆ ದೇಶದ ವಿವಿಧ ಭಾಗಗಳ ಕೃಷಿ ತಜ್ಞರನ್ನೂ ಒನ್ ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಈ ನಾಲ್ಕನೇ ಸರಣಿಯಲ್ಲಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಹರಿಕಾರ ಸುಭಾಷ್ ಪಾಳೇಕರ್ ಒನ್ ಇಂಡಿಯಾ ಗೆ ನೀಡಿದ ಸಂದರ್ಶನದ ಸಾರಾಂಶ ಸರ್ಕಾರದ ಗಮನಕ್ಕೆ ಮತ್ತು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

ಕೃಷಿ ಬಿಕ್ಕಟ್ಟುಗಳನ್ನು ಪರಿಹರಿಸಲು ಸರ್ಕಾರ ಏನೆಲ್ಲಾ ಮಾಡಬೇಕು?ಕೃಷಿ ಬಿಕ್ಕಟ್ಟುಗಳನ್ನು ಪರಿಹರಿಸಲು ಸರ್ಕಾರ ಏನೆಲ್ಲಾ ಮಾಡಬೇಕು?

 ಸುಭಾಷ್ ಪಾಳೇಕರ್ ಮಾತು...

ಸುಭಾಷ್ ಪಾಳೇಕರ್ ಮಾತು...

ಇಲ್ಲಿ ಎರಡು ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಕೊರೊನಾ ಸೋಂಕನ್ನು ಎದುರಿಸುವುದು, ಮತ್ತೊಂದು ರೈತರ ಸಮಸ್ಯೆ. ಕೊರೊನಾ ವಿಚಾರ ಮಾತನಾಡುವುದಾದರೆ, ಈ ಬಿಕ್ಕಟ್ಟು ತಕ್ಷಣಕ್ಕೆ ಮುಗಿಯುವಂಥದ್ದಲ್ಲ. ಇದು ಇನ್ನೂ ಮುಂದುವರೆಯುತ್ತದೆ. ಇದಕ್ಕೆ ಔಷಧಿ ಇಲ್ಲ. ಒಂದೇ ಸಿದ್ಧೌಷದ ಅಂದ್ರೆ resistance. ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಬೇಕು. ಜಗತ್ತಿನಾದ್ಯಂತ ಜನರಲ್ಲಿ ರೋಗ ನಿರೋಧಕ ಶಕ್ತಿ ಏಕೆ ಕಡಿಮೆ ಆಗಿದೆ ಎಂಬುದನ್ನು ನಾವು ಮೊದಲು ತಿಳಿಯಬೇಕು.

 ಇಡೀ ಜಗತ್ತು “ವಿಷವಿಲ್ಲದ ಆಹಾರ” ದ ಬಗ್ಗೆ ಚಿಂತಿಸಬೇಕಿದೆ

ಇಡೀ ಜಗತ್ತು “ವಿಷವಿಲ್ಲದ ಆಹಾರ” ದ ಬಗ್ಗೆ ಚಿಂತಿಸಬೇಕಿದೆ

ಕೃಷಿಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ, ಶಿಲೀಂಧ್ರನಾಶಕ, ಕಳೆನಾಶಕಗಳನ್ನು ಬಳಸಲಾಗುತ್ತಿದೆ. ಇವುಗಳ ರೆಸಿಡ್ಯೂಸ್ ಆಹಾರದ ಮೂಲಕ ಮನುಷ್ಯರ ದೇಹ ಸೇರುತ್ತಿದೆ. ಆ ರಾಸಾಯನಿಕಗಳು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ರೋಗ ನಿರೋಧಕ ಶಕ್ತಿಯನ್ನೂ ಕುಂದಿಸುತ್ತಿವೆ. ಹಾಗಾಗಿ ಈಗ ಎದುರಾಗಿರುವ ಕೊರೊನಾ ಬಿಕ್ಕಟ್ಟಿನಲ್ಲಿ ಇಡೀ ಜಗತ್ತು "ವಿಷವಿಲ್ಲದ ಆಹಾರ" ದ ಬಗ್ಗೆ ಚಿಂತಿಸಬೇಕಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಬೆಳೆಯಲಾಗುವ ಆಹಾರದ ಬಗ್ಗೆ ಯೋಚಿಸಬೇಕಿದೆ. ಅದೊಂದೇ ಪರಿಹಾರ.

ಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು ‘ಕೊರೊನಾ' ಎತ್ತಿ ತೋರಿಸುತ್ತಿದೆಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು ‘ಕೊರೊನಾ' ಎತ್ತಿ ತೋರಿಸುತ್ತಿದೆ

 ಬೆಳೆಗಾರ-ಗ್ರಾಹಕರ ಕೊಂಡಿಯಾಗಬೇಕಿದೆ ಸರ್ಕಾರ

ಬೆಳೆಗಾರ-ಗ್ರಾಹಕರ ಕೊಂಡಿಯಾಗಬೇಕಿದೆ ಸರ್ಕಾರ

ಎರಡನೆಯದಾಗಿ, ರೈತರು ಬೆಳೆದ ತರಕಾರಿಗಳಿಗೆ ಮಾರುಕಟ್ಟೆ ಇಲ್ಲದೆ ರಸ್ತೆಗೆ ಎಸೆಯುವುದರ ಬದಲು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ಮರು ಬಳಸಬಹುದಾಗಿದೆ. ಪುಡಿ ಮಾಡಿಟ್ಟುಕೊಳ್ಳಬಹುದು. ಹಿಂದೆ ಇಂಥವೆಲ್ಲಾ ಪ್ರಯೋಗಗಳನ್ನು ನಮ್ಮ ಜನರೇ ಮಾಡುತ್ತಿದ್ದ ಉದಾಹರಣೆಗಳಿವೆ. ಸರ್ಕಾರಗಳು, ಬೆಳೆಗಾರ ಮತ್ತು ಗ್ರಾಹಕರ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು. ಅದು ಸಾಧ್ಯ. ಬಹಳ ದೊಡ್ಡ infrastructure ಅನ್ನು ಸರ್ಕಾರಗಳು ಹೊಂದಿವೆ. ಹಳ್ಳಿಗಳಲ್ಲಿ ಬೆಳೆದ ಬೆಳೆಗಳನ್ನು ದಾಸ್ತಾನು ಕೇಂದ್ರಗಳಲ್ಲಿ ಶೇಖರಣೆ ಮಾಡಿ, ಅಲ್ಲಿಂದ ನಗರಗಳಿಗೆ ತಲುಪಿಸುವ ಮತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಮನೆ ಮನೆಗೆ ಆಹಾರ ಉತ್ಪನ್ನಗಳನ್ನು ತಲುಪಿಸುವ ಕೆಲಸ ಆಗಬೇಕು. ಅದು ಆಗದೆ ಇರುವ ಕೆಲಸವೇನಲ್ಲ. ಈವರೆಗೆ ಸರ್ಕಾರಗಳು ಅಂಥ ಯೋಚನೆಯನ್ನು ಮಾಡಿಯೇ ಇಲ್ಲ. ಮುಂದಿನ ದಿನಗಳಲ್ಲಿ ಮಾಡಬಹುದಾ ನೋಡಬೇಕಿದೆ.

 ಇಂಥ ವೈರಸ್ ಗಳೊಂದಿಗೆ ಸೆಣಸುವ ಶಕ್ತಿ ಬೆಳೆಸಿಕೊಳ್ಳಬೇಕು

ಇಂಥ ವೈರಸ್ ಗಳೊಂದಿಗೆ ಸೆಣಸುವ ಶಕ್ತಿ ಬೆಳೆಸಿಕೊಳ್ಳಬೇಕು

ಕೊರೊನಾ ಬಿಕ್ಕಟ್ಟು ಅಂದ್ರಲ್ಲಾ, ಆ ಬಗ್ಗೆ ಹೇಳ್ತೀನಿ ಕೇಳಿ. ಇದು ಆರಂಭ ಅಷ್ಟೇ. ಇಂಥ ವೈರಸ್ ಗಳು ಮುಂದೆ ಮುಂದೆ ಬರುತ್ತಲೇ ಇರುತ್ತವೆ. ಜನ ವೈರಸ್ ಸೆಣಸುವ ಶಕ್ತಿ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಉತ್ತಮ ಗುಣಮಟ್ಟದ, ವಿಷವಿಲ್ಲದ, ರಾಸಾಯನಿಕಗಳಿಲ್ಲದ ಆಹಾರ ಸೇವಿಸಬೇಕು.
ಸರ್ಕಾರ ಏನು ಮಾಡಬೇಕು?
ಸರ್ಕಾರಗಳು ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ನಿಷೇಧಿಸಬೇಕು. ಬೆಳೆ ನಿರ್ವಹಣೆಯ ನೈಸರ್ಗಿಕ ಮಾದರಿಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಬೇಕು.
ರೈತರು ಏನು ಮಾಡಬೇಕು?
ತತ್‍ಕ್ಷಣದಿಂದ ರೈತರು ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ನಿಲ್ಲಿಸಬೇಕು. ನೈಸರ್ಗಿಕ ವಿಧಾನಗಳಿಂದಲೇ ಆಹಾರ ಉತ್ಪಾದನೆ ಮಾಡಬೇಕು.

"ಸರ್ಕಾರ ಈ ವರ್ಷ ರೈತರಿಂದ ಸಾಲ ಮರುಪಾವತಿಗೆ ಹೇಳದಿರಲಿ"

 ಮೂಲದಲ್ಲೇ ಇದಕ್ಕೆ ಉತ್ತರ ಕಂಡುಕೊಳ್ಳಬೇಕು

ಮೂಲದಲ್ಲೇ ಇದಕ್ಕೆ ಉತ್ತರ ಕಂಡುಕೊಳ್ಳಬೇಕು

ಕೊರೋನಾ ಕ್ರೈಸಿಸ್? -ನಿಮಗೆ ಆಗಲೇ ಹೇಳಿದೆ. ಇದು ಈಗಲೇ ಮುಗಿಯುವುದೂ ಇಲ್ಲ ಮತ್ತು ಇಂಥ ಹೊಸ ಹೊಸ ವೈರಸ್ ಗಳು ಬರುತ್ತಲೇ ಇರುತ್ತವೆ. ಹಾಗಾಗಿ ಮೂಲದಲ್ಲೇ ಇದಕ್ಕೆ ಉತ್ತರ ಕಂಡುಕೊಳ್ಳಬೇಕು. ಆಹಾರ ಉತ್ಪಾದನೆ ವಿಷರಹಿತವಾಗಿರಬೇಕು. ರಾಸಾಯನಿಕಗಳಿಂದ ಮುಕ್ತವಾಗಿರಬೇಕು. ಜನರಲ್ಲಿ ರೆಸಿಸ್ಟೆನ್ಸ್, ರೋಗನಿರೋಧಕ ಶಕ್ತಿ ಹೆಚ್ಚಬೇಕು. ರೈತರು ರಾಸಾಯನಿಕಗಳನ್ನು ಬಳಸಿ ಉತ್ಪಾದನಾ ವೆಚ್ಚ ಹೆಚ್ಚು ಮಾಡಿಕೊಂಡು ಬೇಸ್ತುಬೀಳಬಾರದು. ಬೆಳೆದ ಸೊಪ್ಪು, ತರಕಾರಿ ರಸ್ತೆಗೆ ಎಸೆಯುವ ಸನ್ನಿವೇಶ ಬಂದಲ್ಲಿ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ಮರು ಬಳಸಬಹುದು. ಆ ಬಗ್ಗೆ ಸರಿಯಾದ ಮಾಹಿತಿ ಪಡೆದು ಸಂಸ್ಕರಿಸಿಕೊಳ್ಳಬಹುದು.
ಸರಣಿ ಮುಂದುವರೆಯುವುದು

English summary
Natural Farming exponent Subhash Palekar has experessed his views and thoughts on Coronavirus Crisis And Agriculture field. Here is an interview of Subhash Palekar to oneindia kannada,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X